ಸಕಲೇಶಪುರ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಿಸ್ತು, ಸಮಯ ಪಾಲನೆ, ಸೇವಾ ಮನೋಭಾವ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದರೆ ನಮ್ಮ ರಾಷ್ಟ್ರ ವಿಶ್ವದಲ್ಲಿಯೇ ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿಯ ಸುಭಾಷ್ ಮೈದಾನದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 67ನೆ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧ್ವಜಾರೋಹಣ ಮಾಡಿದ ಉಪವಿಭಾಗಾಧಿಕಾರಿ ಡಾ.ಎಸ್.ಎಸ್. ಮಧುಕೇಶ್ವರ್ ಮಾತನಾಡಿದರು.
ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಬ್ಯಾಂಡ್ಸೆಟ್, ಎನ್ಸಿಸಿ ತಂಡಗಳಿಂದ ಗೌರವ ವಂದನೆ ಸ್ವೀಕರಿಸಲಾಯಿತು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಿವೈಎಸ್ಪಿ ಎಂ.ಎಸ್. ಬುಳ್ಳಕ್ಕನವರ್, ಗೈಡ್ಸ್ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ, ಪಂಚಮುಖಿ ಆರಾಧ್ಯ, ಶ್ರೇಯಾ, ರಾಷ್ಟ್ರಮಟ್ಟದ ಕ್ರೀಡಾಪಟು ಅಮೂಲ್ಯಾ ಇವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹರೀಶ್ ಆಚಾರ್, ಯುವ ಕವಿ ಪುರುಶೋತ್ತಮ್, ಶಿಕ್ಷಕಿ ಉಮಾದೇವಿ, ರಾಜು ಪೂಜಾರ್, ಚಂದ್ರಶೇಖರ್ ಹಾಗೂ ರಂಗಕರ್ಮಿ ಸತೀಶ್ ಬೆಳ್ಳೆಕೆರೆ ಇವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆಕರ್ಶಕ ನೃತ್ಯ ಪ್ರದರ್ಶಿಸಿದ ಆಕ್ಸ್ಫರ್ಡ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಸರ್ಕಾರಿ ಮಾಧರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ದೊರೆಯಿತು.

ಉಪನ್ಯಾಸಕ ವೀರಳಗಶೆಟ್ಟಿ, ತಹಶಿಲ್ದಾರ್ ಡಿ. ನಾಗೇಶ್, ಪುರಸಭೆ ಅಧ್ಯಕ್ಷ ಸಯ್ಯದ್ ಮುಫೀಜ್, ಉಪಾಧ್ಯಕ್ಷ ಮುಖೇಶ್ಶೆಟ್ಟಿ, ತಾ.ಪಂ ಇಒ ರವಿಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ. ಮಂಜಯ್ಯ, ಬಿಇಒ ಪುಷ್ಪಲತಾ, ಎಸಿಎಫ್ ರಮೇಶ್ಬಾಬು, ಆರ್ಎಫ್ಒ ಸುದರ್ಶನ್, ತಾಲ್ಲೂಕು ಕಸಾಪ ಅಧ್ಯಕ್ಷ ಜೈ ಭೀಮ್ ಮಂಜುನಾಥ್, ಗೌರವಾಧ್ಯಕ್ಷೆ ಚನ್ನವೇಣಿ ಎಂ. ಶೆಟ್ಟಿ ಇದ್ದರು.

ಮೂಲಭೂತ ಕರ್ತವ್ಯ ನೆರವೇರಿಸಿ: ಕೊಣನೂರು: ಹಕ್ಕುಗಳನ್ನು ಚಲಾಯಿಸಲು ಸದಾ ಸಿದ್ಧರಿರುವ ನಾವು, ಸಂವಿಧಾನ ನಮಗೆ ನೀಡಿರುವ ಮೂಲಭೂತ ಕರ್ತವ್ಯಗಳನ್ನು ನೆರವೇರಿಸಲು ಮರೆಯಬಾರದು ಎಂದು ಎಂಕೆಎಸ್ಎಲ್ವಿ ಶಾಲೆಯ ಖಜಾಂಚಿ ಬಿ.ಎಸ್. ಸುಬ್ರಮಣ್ಯ ಹೇಳಿದರು.

ಪಟ್ಟಣದ ಎಂಕೆಎಸ್ಎಲ್ವಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಬೂಬಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಸತೀಶ್, ಮುಖ್ಯಶಿಕ್ಷಕಿ ಎ.ಸಿ. ಶೈಲಜಾ, ಸಹಶಿಕ್ಷಕಿ ನೇತ್ರಾವತಿ ಮಾತನಾಡಿದರು.

ಲಯನೆಸ್ ಕ್ಲಬ್ನ ವೀಣಾ ಜಯಂತಿ, ನಾಗವೀಣಾ ಉಪಸ್ಥಿತರಿದ್ದರು. ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿ: ಬಾಣಾವರ: ವಿಭಿನ್ನತೆಯಲ್ಲಿ ಏಕತೆ ಕಾಣುವ ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಜಗತ್ತಿಗೆ ಮಾದರಿ ಎಂದು ಕಾಚಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಬಸವಾರಜು ತಿಳಿಸಿದರು
ಚಿಕ್ಕಾರಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮೈದಾನದಲ್ಲಿ ಮಂಗಳವಾರ ನಡೆದ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರೆವೇರಿಸಿ ಅವರು ಮಾತನಾಡಿದರು.

ಪ್ರಾಂಶುಪಾಲರಾದ ಡಿ.ಎಸ್. ಜ್ಯೋತಿ ಶಿಕ್ಷಕರು ಹಾಜರಿದ್ದರು ಕಾರ್ಯಕ್ರಮದಲ್ಲಿ ಮಕ್ಕಳು ನಡೆಸಿಕೊಟ್ಟ ಸಾಂಸ್ಖೃತಿಕ ಕಾರ್ಯಕ್ರಮ ಪೋಷಕರ ಮೆಚ್ಚುಗೆ ಗಳಿಸಿತು.

ಗಮನಸೆಳೆದ ನೃತ್ಯ: ಆಲೂರು: ಸಂವಿಧಾನದ ಆಶಯಗಳನ್ನು ಈಡೇರಿಸುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಆಶಯಗಳಿಗೆ ತಕ್ಕಂತೆ ಪ್ರಜೆಗಳು ನಡೆದುಕೊಳ್ಳುವುದು ಅವರ ಕರ್ತವ್ಯ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಹಶೀಲ್ದಾರ್ ಕೆ.ವಿ ಅನಂತ್ ರಾಜ್ ಮಾತನಾಡಿರು.

ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತ್ತು ಪ್ರದರ್ಶನ ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಭವ್ಯ ಭಾರತ ನಿರ್ಮಾಣಕ್ಕೆ ಸಲಹೆ:
ಹಳೇಬೀಡು: ದೇಶಕ್ಕೆ ಮಾರಕವಾಗುವಂತಹ ಹಿಂಸೆ, ಅಸಹಿಷ್ಣುತೆಯನ್ನು ವಿದ್ಯಾರ್ಥಿಗಳು ದೂರವಿಡಬೇಕು. ಇಂದಿನ ಮಕ್ಕಳು ದೇಶಕಟ್ಟುವ ಸಮರ್ಥ ಯುವಕರಾಗಿ ಬೆಳೆಯಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕಿ ಶಾಂತಮ್ಮ, ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು ಮಾತನಾಡಿದರು. ಶಾಲಾಭಿವೃದ್ಧಿ ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಶಿವೇಗೌಡ, ಮಂಜುಳಾ, ಆರೋಗ್ಯ ಸಹಾಯಕಿಯರಾದ ಜಯಲಕ್ಷ್ಮಮ್ಮ, ಶ್ವೇತಾ ಇದ್ದರು. ಶಿಕ್ಷಕಿ ಜೆ.ಬಿ. ಪೂರ್ಣಿಮಾ ಸ್ವಾಗತಿಸಿ,ಆರ್.ಎಲ್. ರವಿ ನಿರೂಪಿಸಿ, ಗೀತಾ ವಂದಿಸಿದರು.

ಸಂಭ್ರಮದ ತೋರಣ, ದೇಶಭಕ್ತಿ ಅನಾವರಣ: ಅರಸೀಕೆರೆ: ದೇಶಭಕ್ತಿ ಸಾರುವ ಹಾಡು, ನೃತ್ಯ, ಪೊಲೀಸ್, ಎನ್ಸಿಸಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಕ್ರೀಡಾಂಗಣದಲ್ಲಿ ಮನೆ ಮಾಡಿದ ಸಡಗರ, ಸಂಭ್ರಮ. ಕಿಕ್ಕಿರಿದ ಜನತೆಯಿಂದ ಚಪ್ಪಾಳೆಯ ಸುರಿಮಳೆ.

ಇವಿಷ್ಟು ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಸೊಬಗು. ತಹಶೀಲ್ದಾರ್ ಎನ್.ವಿ. ನಟೇಶ್ ಅವರು ಧ್ವಜಾರೋಹಣ ನೆರವೇರಿಸಿ ಗೌರವವಂದನೆ ಸ್ವೀಕರಿಸಿದ ಬಳಿಕ ಕ್ರೀಡಾಂಗಣದ ವಿಶಾಲ ಆವರಣದಲ್ಲಿ ಸಾಂಸ್ಕೃತಿಕ ವಾತಾವರಣ ಗರಿಬಿಚ್ಚಿಕೊಂಡಿತು.

ನಗರದ ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಸ್ವಾತಂತ್ರ್ಯ ಹೋರಾಟ ಭಯೋತ್ಪಾದನೆ ವಿಷಯಗಳ ಹಾಡು ಮತ್ತು ನೃತ್ಯದ ವಸ್ತುಗಳಾಗಿದ್ದವು. ದೇಶ ಭಕ್ತಿಗೀತೆಗಳಿಗೆ ವಿವಿಧ ಶಾಲೆಯ 400ಕ್ಕೂ ಹೆಚ್ಚು ಮಕ್ಕಳು ಆಕರ್ಷಕ ವಸ್ತ್ರ ವಿನ್ಯಾಸದೊಂದಿಗೆ ಹೆಜ್ಜೆ ಹಾಕಿದ್ದು ನೆರೆದಿದ್ದ ವೀಕ್ಷಕರ ಕಣ್ಮನ ಸೆಳೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ವಹಿಸಿದ್ದರು. ತಹಶೀಲ್ದಾರ್ ಎನ್.ವಿ. ನಟೇಶ್ ಧ್ವಜಾರೋಹಣ ನೆರವೇರಿಸಿದರು.
ಕಾವ್ಯಾಗೆ ಸನ್ಮಾನ: ಅರಕಲಗೂಡು: ಹಲವಾರು ಅಡ್ಡಿ ಆತಂಕಗಳ ನಡುವೆಯೂ ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆ ಹೆಮ್ಮೆ ಪಡುವಂತಿದ್ದು, ಪ್ರಪಂಚದ ಮುಂಚೂಣಿ ರಾಷ್ಟ್ರಗಳಲ್ಲಿ ಒಂದೆನಿಸಿದೆ ಎಂದು ತಹಶೀಲ್ದಾರ್ ಆರ್. ಮೋಹನ್ ತಿಳಿಸಿದರು.

ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ 67ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು. ಎಲ್ಲರೂ ದೇಶದ ಅಭಿವೃದ್ಧಿಗೆ ಒಟ್ಟಾಗಿ ದುಡಿಯೋಣ ಎಂದರು.

ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಎಂ. ಕಾವ್ಯಾ, ಸರಗೂರು ಗ್ರಾಮದ ಪ್ರಗತಿಪರ ರೈತ ಎಚ್.ಆರ್. ಕೃಷ್ಣಮೂರ್ತಿ, ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ‘ಸ್ವಚ್ಛ ಭಾರತ’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.