ಉತ್ತಮ ಪರಿಸರಕ್ಕೆ ಮರ ಬೆಳೆಸಿ

7

ಉತ್ತಮ ಪರಿಸರಕ್ಕೆ ಮರ ಬೆಳೆಸಿ

Published:
Updated:
ಉತ್ತಮ ಪರಿಸರಕ್ಕೆ ಮರ ಬೆಳೆಸಿ

ಚಿಕ್ಕಬಳ್ಳಾಪುರ: ಉತ್ತಮ ಪರಿಸರಕ್ಕೆ ಮರ ಬೆಳೆಸುವಂತೆ ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ರಾಮೇಗೌಡ ಸಲಹೆ ನೀಡಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, `ಮರಗಳನ್ನು ಕಡಿದರೆ ಸಹಜವಾಗಿಯೇ ಪರಿಸರದ ಮೇಲೆ ತೀವ್ರ ಸ್ವರೂಪ ಹಾನಿಯಾಗುತ್ತದೆ~ ಎಂದು ಹೇಳಿದರು.`ಅರಣ್ಯ ಪ್ರದೇಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಮಳೆ ಪ್ರಮಾಣ ಕೂಡಾ ಕಡಿಮೆಯಾಗುತ್ತಿದೆ. ಇದರಿಂದ ಬರಗಾಲ, ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ.

ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಿ ಹೇಳಿದರು.ಸತ್ಯ ಸಾಯಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಎಂ.ರಾಮಮೂರ್ತಿ, ಶಿಕ್ಷಕರಾದ ಎಚ್.ಕೆ.ಲಕ್ಷ್ಮೀಪತಿ, ಸುಂದರ್‌ಭಟ್, ಶಿವಾನಂದ, ಪರಿಸರ ವೇದಿಕೆ ಸದಸ್ಯ ಎಸ್.ಆರ್.ಈಶ್ವರಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry