ಗುರುವಾರ , ಮಾರ್ಚ್ 4, 2021
30 °C

ಉಪಗ್ರಹ: ಐಆರ್‌ಎನ್‌ಎಸ್‌ಎಸ್‌–1ಇ ಯಶಸ್ವಿ ಉಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಗ್ರಹ: ಐಆರ್‌ಎನ್‌ಎಸ್‌ಎಸ್‌–1ಇ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ (ಸಮುದ್ರ ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ನೀಡುವ) ಉಪಗ್ರಹ ವ್ಯವಸ್ಥೆ’ ಸರಣಿಯ ಐದನೇ ಉಪಗ್ರಹ ‘ಐಆರ್‌ಎನ್ಎಸ್‌ಎಸ್‌– 1ಇ’ ಶ್ರೀಹರಿ­ಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರ­ದಿಂದ ಇಂದು ಯಶಸ್ವಿಯಾಗಿ ಉಡಾವಣೆಯಾಯಿತು.



ಭಾರತೀಯ ಪ್ರಾದೇಶಿಕ ಸಂಚಾರ ನಿರ್ವಹಣಾ ವ್ಯವಸ್ಥೆ ಉಪಗ್ರಹದ (ಐಆರ್‌ಎನ್‌ಎಸ್‌ಎಸ್‌) ಯಶಸ್ವಿ ಉಡಾವಣೆಯ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಅಧ್ಯಾಯ ರಚಿಸಿದೆ.



ಉಪಗ್ರಹವನ್ನು ಹೊತ್ತ ಗಗನನೌಕೆ ಪಿಎಸ್‌ಎಲ್‌ವಿ ಬುಧವಾರ ಬೆಳಗ್ಗೆ 9.30ಕ್ಕೆ ಬಾನಿಗೆ ಚಿಮ್ಮಿತು. ಉಡ್ಡಯನದ 19 ನಿಮಿಷಗಳಲ್ಲಿ ಗಗನನೌಕೆ ಯಶಸ್ವಿಯಾಗಿ ಕಕ್ಷೆ ಸೇರಿತು.



ಸಮುದ್ರಯಾನ, ಸಾರಿಗೆ ಸಂಪರ್ಕ ನಿಯಂತ್ರಣ ಮತ್ತಿತರ ಕಾರ್ಯಗಳಿಗೆ ಈ ಉಪಗ್ರಹ ನೆರವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.