ಮದ್ದೂರು: ಉಪ್ಪಿನಕೆರೆ ಗ್ರಾಮದೇವತೆಗಳಾದ ಮಂಚಮ್ಮ ಹಾಗೂ ಪಟಲದಮ್ಮದೇವಿಯ ಕೊಂಡೋತ್ಸವವು ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಶನಿವಾರ ಬೆಳಿಗ್ಗೆ ಸಂಭ್ರಮದಿಂದ ನಡೆಯಿತು.

ಕಳೆದ ರಾತ್ರಿ ಬಂಡಿ ಉತ್ಸವ, ಅಗ್ನಿಸ್ಪರ್ಶ ನಡೆಯಿತು. ಮುಂಜಾನೆ ನಿಗಿ ನಿಗಿ ಕೆಂಡದ ಮೇಲೆ ಆರ್ಚಕ ಚಿಕ್ಕಬಸವ ಪಟಲದಮ್ಮ ಪೂಜಾ ಪಟ ಹೊತ್ತು ಹಾಯ್ದರೆ, ಆರ್ಚಕ ಬಸವರಾಜು ಮಂಚಮ್ಮನ ಕರಗ ಹೊತ್ತು ಕೊಂಡ ಹಾಯ್ದರು. ಪಟಲದಮ್ಮ ಸೇವಾ ಟ್ರಸ್ಟ್ನಿಂದ ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಉಚಿತ ದಂತ ತಪಾಸಣಾ ಶಿಬಿರ: ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಸುರಕ್ಷ ಸಮಾಜಸೇವಾ ಸಂಸ್ಥೆ ಉಚಿತ ದಂತ ತಪಾಸಣಾ ಶಿಬಿರ ಏರ್ಪಡಿಸಿತ್ತು.

ಉಚಿತ ದಂತ ತಪಸಣಾ ಶಿಬಿರದಲ್ಲಿ ದಯಾನಂದ ಸಾಗರ್ ದಂತ ವಿದ್ಯಾಲಯದ ತಜ್ಞರು ರೋಗಿಗಳನ್ನು ತಪಾಸಣೆ ನಡೆಸಿ ಸಲಹೆ ನೀಡಿದರು. ಪುರಸಭಾಧ್ಯಕ್ಷ ಚಂದ್ರು ಶಿಬಿರಕ್ಕೆ ಚಾಲನೆ ನೀಡಿದರು. ಸದಸ್ಯರಾದ ಮನ್ಸೂರ್, ರಫೀಕ್, ರವಿ, ವಿಜಯಮ್ಮ, ಮುಖಂಡ ಇಂತಿಯಾಜ್, ದೇವಿಪ್ರಸಾದ್ಶೆಟ್ಟಿ, ಸಾವಿತ್ರಮ್ಮ, ಸವಿತಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.