ಚಡಚಣ: ಇಲ್ಲಿನ ಉರ್ದು ಪ್ರೌಢಶಾಲೆ ಆರಂಭವಾಗಿ ಒಂದು ದಶಕ ಗತಿಸಿದರೂ ಉರ್ದು ಹಾಗೂ ಇಂಗ್ಲಿಷ್ ಬೋಧಿಸುವ ಭಾಷಾ ಶಿಕ್ಷಕರಿಲ್ಲದೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ.

ಕೂಡಲೇ ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಿ ಎರಡು ಹುದ್ದೆಗಳನ್ನು ಮಂಜೂರು ಮಾಡ ಬೇಕು ಎಂದು ಸ್ಥಳೀಯ ಅಲ್ಪ ಸಂಖ್ಯಾತ ಮುಖಂಡರಾದ ಸಲೀಂ ಅರಕೇರಿ, ಗುಲಾಬ ಶೇಖ, ರಫೀಕ ಟಪಾಲ ಆಗ್ರಹಿಸಿದ್ದಾರೆ.

ಉರ್ದು ಹಾಗೂ ಇಂಗ್ಲಿಷ್ ಬೋಧಿಸುವ ಬಾಷಾ ಶಿಕ್ಷಕರನ್ನು ನೇಮಿಸದೇ ಇರುವುದು ಅಲ್ಪ ಸಂಖ್ಯಾತ ಶಾಲೆಗಳ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತದೆ ಎಂದಿದ್ದಾರೆ.

ಹುದ್ದೆಯ ಮಂಜೂರಾತಿಗೆ ಸರ್ಕಾರಕ್ಕೂ, ಶಿಕ್ಷಣ ಇಲಾಖೆಗೂ, ಜನಪ್ರತಿನಿಧಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಈಗ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ ಗೊಂಡಿದ್ದು, ಶಿಕ್ಷಣ ಇಲಾಖೆ ಉರ್ದು ಹಾಗೂ ಇಂಗ್ಲಿಷ್ ಬೋಧಿಸುವ ಪೂರ್ಣಾ ವಧಿ ಶಿಕ್ಷಕರನ್ನು ಒದಗಿಸ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಶಾಲೆಯ ನೂತನ ಕಟ್ಟಡಕ್ಕಾಗಿ ಸುಮಾರು ಎರಡು ಎಕರೆ ಸ್ಥಳ ಒದಗಿಸಿ ಕೊಟ್ಟಿದ್ದೇವೆ. ಆದರೂ ಇಲ್ಲಿಯವರೆಗೆ ಶಾಲಾ ಕಟ್ಟಡ, ಮೂಲ ಸೌಕರ್ಯಗಳನ್ನು ಒದಗಿ ಸಲು ಸೂಕ್ತ ಕ್ರಮ ಕೈಗೊಂಡಿಲ್ಲ. ಇಲಾಖೆ ಗಮನ ಹರಿಸದಿದ್ದರೆ ಜುಲೈನಲ್ಲಿ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.