ಭಾನುವಾರ, ಮೇ 29, 2022
21 °C

ಊರುಗೋಲು ದಿನಾಚರಣೆ: ಜಾಗೃತಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಊರುಗೋಲು ದಿನಾಚರಣೆ (ವೈಟ್‌ಕೇನ್ ಡೇ) ಅಂಗವಾಗಿ ನಗರದ ಸ್ನೇಹದೀಪ ಅಂಧರ ಸಂಸ್ಥೆಯು ಭಾನುವಾರ ಸ್ವಾತಂತ್ರ್ಯ ಉದ್ಯಾನವನದಿಂದ ಕಬ್ಬನ್ ಉದ್ಯಾನವನದವರೆಗೆ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.ಸಾರ್ವಜನಿಕ ಕಚೇರಿಗಳಲ್ಲಿ, ಸಂಚಾರ ದಟ್ಟಣಿಯ ರಸ್ತೆಗಳಲ್ಲಿ ಸರಿಯಾಗಿ ಸಂಚರಿಸಲು ನಗರದಾದ್ಯಂತ ಅಗತ್ಯ ಅನುಕೂಲಗಳನ್ನು ಕಲ್ಪಿಸಬೇಕು. ಪ್ರಮುಖ ಕಚೇರಿಗಳಲ್ಲಿ ಅಂಗವಿಕಲರು ಸರಾಗವಾಗಿ ಸಂಚರಿಸಲು ಅನುವಾಗುವಂತೆ ರ‌್ಯಾಂಪ್‌ಗಳನ್ನು (ಅಂಗವಿಕಲರ ಗಾಲಿ ಕುರ್ಚಿಗಳ ಸಂಚಾರಕ್ಕೆ) ನಿರ್ಮಿಸಬೇಕು. ಸರ್ಕಾರ ಎಲೆಕ್ಟ್ರಾನಿಕ್ (ಸಂವಹನ ಸಾಮರ್ಥ್ಯವುಳ್ಳ) ಊರುಗೋಲುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು.ಬಿಎಂಟಿಸಿ ಬಸ್‌ಗಳಲ್ಲಿ ಅಂಧ ಪುರುಷ ಹಾಗೂ ಮಹಿಳೆಯರಿಗೆ ಎರಡು ಸೀಟುಗಳನ್ನು ಮೀಸಲಿಡಬೇಕು ಮತ್ತು ಈಚೆಗೆ ಆರಂಭಗೊಂಡ ವೆುಟ್ರೊ ರೈಲಿನಲ್ಲಿ ಸಂಚರಿಸಲು ಪ್ರಯಾಣ ದರದಲ್ಲಿ  ರಿಯಾಯಿತಿ ನೀಡಬೇಕು ಎಂದು ಸ್ನೇಹದೀಪ ಸಂಸ್ಥೆಯ ಸದಸ್ಯರು ಒತ್ತಾಯಿಸಿದರು.ಮೇಯರ್ ಪಿ.ಶಾರದಮ್ಮ, ಐಜಿಪಿ ಆರ್.ಪಿ.ಶರ್ಮಾ, ಚಿತ್ರನಟಿ ಪ್ರೇಮಾ, ನಟ ರಾಮಕೃಷ್ಣ, ಹಿರಿಯರಾದ ಕೃಷ್ಣರಾಜ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.