ಗುರುವಾರ , ಮೇ 6, 2021
27 °C

ಎಂಜಿನಿಯರಿಂಗ್ ಬೋಧಕರಿಗೆ ಮಾನ್ಯತೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎಂಜಿನಿಯರಿಂಗ್ ಬೋಧನೆಗೆ ಪ್ರಾಧಾನ್ಯತೆ ಇದ್ದರೂ ಅದು ಬೆಳಕಿಗೆ ಬರುತ್ತಿಲ್ಲ. ಇತರೆ ಶಿಕ್ಷಕರಂತೆ ಎಂಜಿನಿಯರಿಂಗ್ ಬೋಧಕರಿಗೆ ಮಾನ್ಯತೆ ದೊರೆಯುತ್ತಿಲ್ಲ~ ಎಂದು ಖಗೋಳ ವಿಜ್ಞಾನಿ ಡಾ.ಯು.ಆರ್.ರಾವ್ ವಿಷಾದ ವ್ಯಕ್ತಪಡಿಸಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಶೃತ್ ಮತ್ತು ಸ್ಮಿತ್ ಪ್ರತಿಷ್ಠಾನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಯಂಗ್ ಟೆಕ್ ಇಂಡಿಯಾ- 2011~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಸುಮಾರು 25 ಸಾವಿರ ಎಂಜಿನಿಯರಿಂಗ್ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಅವರು ಬೇರೆಲ್ಲಾ ಬೋಧಕರಂತೆ ಸಮರ್ಥರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರಿ ಬೋಧಕರಿಗೆ ಸಿಗುವ ಮಾನ್ಯತೆ ದೊರೆಯಬೇಕಿದೆ~ ಎಂದರು.`ಅಣ್ಣಾ ಹಜಾರೆ ಅವರ ಹೋರಾಟದ ನಿರೀಕ್ಷೆಗೂ ಮೀರಿದ ಯಶಸ್ಸಿಗೆ ಯುವಕರೇ ಪ್ರಮುಖ ಕಾರಣ. ಈ ಆಂದೋಲನ ಯುವಕರಲ್ಲಿ ಮಹಾನ್ ಶಕ್ತಿ ಇದೆ ಎನ್ನುವುದನ್ನು ಬಿಂಬಿಸಿದೆ. ಯುವಕರ ಶಕ್ತಿಯನ್ನು ಬಿಂಬಿಸಲು ಆಂದೋಲನ ವು ಒಂದು ಉತ್ತಮ ವೇದಿಕೆಯಾಯಿತು~ ಎಂದು ಹೇಳಿದರು.ಕುಲಪತಿ ಡಾ. ಎಚ್.ಮಹೇಶಪ್ಪ, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದಜೀ ಸರಸ್ವತಿ ಸ್ವಾಮೀಜಿ, ಸುಪ್ರಿಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಡಿ.ಎನ್.ಖುರಾನಾ, ಉದ್ಯಮಿ ಸಂಜಯ್ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.