ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್: ನಿಖಿತ್, ಶಿಖಾಗೆ ಚಾಂಪಿಯನ್ ಪಟ್ಟ

7

ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್: ನಿಖಿತ್, ಶಿಖಾಗೆ ಚಾಂಪಿಯನ್ ಪಟ್ಟ

Published:
Updated:

ಬೆಂಗಳೂರು: ನಿಖಿತ್ ಎಂ. ರೆಡ್ಡಿ ಹಾಗೂ ಶಿಖಾ ಎನ್ ಸಿಂಗ್ ಇಲ್ಲಿ ನಡೆದ ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 14 ವರ್ಷ ವಯಸ್ಸಿನೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.ಎಎನ್‌ಟಿ ಅಕಾಡೆಮಿ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ನಿಖಿತ್ 6-4, 2-6, 6-2 ರಲ್ಲಿ ಪಿ.ಸಿ. ಅನಿರುದ್ಧ್ ವಿರುದ್ಧ ಜಯ ಸಾಧಿಸಿದರು.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಶಿಖಾ 6-3, 6-4 ರಲ್ಲಿ ಪ್ರಜ್ಞಾ ನಾಗರಾಜ್ ವಿರುದ್ಧ ಜಯ ಸಾಧಿಸಿದರು.

ಅಭಿಮನ್ಯು ವಿ ರೆಡ್ಡಿ ಮತ್ತು ರಷ್ಮಿಕಾ ರಾಜನ್ ಕ್ರಮವಾಗಿ 12 ವರ್ಷ ವಯಸ್ಸಿನೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಅಭಿಮನ್ಯು 6-1, 4-6, 6-4 ರಲ್ಲಿ ಸಾಯ್ ಪ್ರಣವ್ ವಿರುದ್ಧ ಗೆಲುವು ಪಡೆದರು.ಾಲಕಿಯರ ವಿಭಾಗದ ಫೈನಲ್‌ನಲ್ಲಿ ರಷ್ಮಿಕಾ 7-6, 6-1 ರಲ್ಲಿ ಶಿವಾನಿ ಮಂಜಣ್ಣ ಅವರನ್ನು ಮಣಿಸಿದರು. ಬಾಲಕರ 14 ವರ್ಷ ವಯಸ್ಸಿನೊಳಗಿನವರ ಡಬಲ್ಸ್‌ನ ಫೈನಲ್‌ನಲ್ಲಿ ರಿಷಿ ರೆಡ್ಡಿ- ಎಲ್. ಭರತ್ 6-2, 7-6, 10-4 ರಲ್ಲಿ ಪಿ.ಸಿ. ಅನಿರುದ್ಧ್- ಸತ್ಯ ಮಾರನ್ ವಿರುದ್ಧ ಗೆದ್ದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಎಸ್. ಸೋಹಾ- ಎಂ. ಜ್ಯೋತಿ 5-4, 4-2 ರಲ್ಲಿ ಧ್ವನಿ ಕುಮಾರ್- ನಿಶಾ ಶೆಣೈ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry