ಬೆಂಗಳೂರು: `ಆ್ಯಮ್ವೆ ಆಪರ್ಚುನಿಟಿ ಫೌಂಡೇಷನ್~ (ಎ.ಒ.ಎಫ್), `ನನ್ಹೆ ಚಿತ್ರಕಾರ್~ ಎಂಬ ಚಿತ್ರಕಲೆ ಸ್ಪರ್ಧೆಯನ್ನು ಭಾನುವಾರ ನಗರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿತ್ತು.

ಸ್ಪರ್ಧೆಯಲ್ಲಿ ಸುಮಾರು 80 ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಆ್ಯಮ್ವೆ ವಹಿವಾಟು ಮಾಲೀಕರ ಮಕ್ಕಳೊಂದಿಗೆ ಎ.ಒ.ಎಫ್ ಪಾಲುದಾರ ದೀಪಾ ಅಕಾಡೆಮಿ ಹಾಗೂ ಸುರಕ್ಷಾ ಚಾರಿಟೆಬಲ್ ಟ್ರಸ್ಟ್ನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂಧ ಮಕ್ಕಳು ಕೂಡ ಭಾಗವಹಿಸಿದ್ದರು.

ಅವಕಾಶ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.`ವನ್ಯಜೀವಿಗಳು ಮತ್ತು ಸಂರಕ್ಷಣೆ~ ಎಂಬ ಧ್ಯೇಯದೊಂದಿಗೆ ನಡೆದ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ವಿವರ ಇಲ್ಲಿದೆ. 4 ರಿಂದ 8 ವರ್ಷದ ವಿಭಾಗ- ಸುಜಲ್ ಜೈನ್ (ಪ್ರಥಮ), ಅದಿತಿ (ದ್ವಿತೀಯ), ತನೀಶಾ (ತೃತೀಯ). 9 ರಿಂದ 12 ವರ್ಷದ ವಿಭಾಗ- ತುಷಾರಾ (ಪ್ರಥಮ), ಅಂಧ ವಿದ್ಯಾರ್ಥಿನಿ ಅಂಬಿಕಾ (ದ್ವಿತೀಯ), ತಿತಿಕ್ಷಾ (ತೃತೀಯ).

ದೀಪಾ ಅಕಾಡೆಮಿಗೆ 1,29,000 ರೂಪಾಯಿ, ಸುರಕ್ಷಾ ಚಾರಿಟೆಬಲ್ ಟ್ರಸ್ಟ್ಗೆ 99 ಸಾವಿರ ಮೌಲ್ಯದ ಚೆಕ್ನ್ನು ಹಸ್ತಾಂತರಿಸಲಾಯಿತು. ಸ್ಪರ್ಧೆ ನಂತರ ಮಕ್ಕಳಿಗೆ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. ಚಿತ್ರಕಲಾವಿದ ಕೆ.ವಿ.ಸುಬ್ರಮಣ್ಯಂ ಬಹುಮಾನಗಳನ್ನು ವಿತರಿಸಿದರು. ಫೌಂಡೇಷನ್ನ ಅನಿತಾ ರಾವ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.