ಎ.ಕೆ. ಹಂಗಲ್‌ಗೆ ನೆರವು

7

ಎ.ಕೆ. ಹಂಗಲ್‌ಗೆ ನೆರವು

Published:
Updated:

ನವದೆಹಲಿ (ಪಿಟಿಐ): ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಮಾಜಿ ಚಿತ್ರ ನಟ ಎ.ಕೆ. ಹಂಗಲ್ ಅವರಿಗೆ ಬಿಜೆಪಿ ಮುಖಂಡರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಮಾಜಿ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ಅವರು ಶುಕ್ರವಾರ ಒಂದು ಲಕ್ಷ ರೂಪಾಯಿಯ ಚೆಕ್ ಕಳುಹಿಸಿದ್ದಾರೆ.

ತಮ್ಮ ವೈದ್ಯಕೀಯ ಖರ್ಚನ್ನು ಭರಿಸಲು ಆಗದೆ ತೊಂದರೆಯಲ್ಲಿರುವ ಇಂತಹ ಮಾಜಿ ಕಲಾವಿದರ ಸಹಾಯಕ್ಕಾಗಿ ಕೇಂದ್ರ ನಿಧಿಯೊಂದನ್ನು ಸ್ಥಾಪಿಸುವಂತೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ವೈದ್ಯಕೀಯ ಚಿಕಿತ್ಸೆ ಪಡೆಯಲು ಹಂಗಲ್ ಅವರು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದು ತಾವು ಹಂಗಲ್ ಅವರಿಗೆ ಒಂದು ಲಕ್ಷ ರೂಪಾಯಿ ಚೆಕ್ ಕಳುಹಿಸಿರುವುದಾಗಿ ಬಿಜೆಪಿಯ ಉಪಾಧ್ಯಕ್ಷರಾಗಿರುವ ನಕ್ವಿ ತಿಳಿಸಿದ್ದಾರೆ.

ಸುಮಾರು 125 ಚಿತ್ರಗಳಲ್ಲಿ ಅವಿಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿರುವ 95 ವರ್ಷದ ಹಂಗಲ್ ಅವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು ತಮ್ಮ ವೈದ್ಯಕೀಯ ಖರ್ಚನ್ನು ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry