ಸೋಮವಾರ, ಜೂನ್ 21, 2021
21 °C

ಎಕ್ಸಲೆಂಟ್ನಿಂದ ರಜಾ ಕಾಲದ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾಂಪಸ್

ಮಂಗಳೂರಿನ ಕರಂಗಲಪಾಡಿಯ `ಎಕ್ಸಲೆಂಟ್ ಕೋಚಿಂಗ್ ಕ್ಲಾಸ್~ ಉನ್ನತ ಶಿಕ್ಷಣಕ್ಕೆ ಪ್ರವೇಶಾವಕಾಶ ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.9 ವರ್ಷಗಳಿಂದ ಮಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ, ಸಿಇಟಿ, ಪಿಯುಸಿಗೆ ತರಬೇತಿ ನೀಡುತ್ತಾ ಬಂದಿದ್ದು ಸತತವಾಗಿ ಶೇ 100 ಫಲಿತಾಂಶ  ದಾಖಲಿಸಿದೆ. ಇಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಾವಕಾಶ ಪಡೆದಿರುತ್ತಾರೆ.ಸಂಸ್ಥೆಯು ಎಪ್ರಿಲ್- ಮೇನಲ್ಲಿ ನಡೆಸುವ ರಜಾ ಅವಧಿಯ ತರಬೇತಿಯ ಲಾಭವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಪಡೆದಿದ್ದಾರೆ. ಪೋಷಕರ ಆಗ್ರಹದ ಮೇಲೆ ಈಗ ಮೈಸೂರು, ಬೆಂಗಳೂರು, ಮಂಡ್ಯ, ತುಮಕೂರು, ಹುಬ್ಬಳ್ಳಿ, ವಿಜಾಪುರ ಹಾಗೂ ಇಳಕಲ್ ನಗರಗಳಲ್ಲಿ ಎಕ್ಸಲೆಂಟ್ ಶಾಖೆಯನ್ನು ಆರಂಭಿಸಿದೆ.ಈ ಎಲ್ಲಾ ಕೇಂದ್ರಗಳಲ್ಲಿ  ಎಸ್‌ಎಸ್‌ಎಲ್‌ಸಿ, ಸಿಇಟಿ, ಪಿಯುಸಿ ತರಬೇತಿಗೆ ದಾಖಲಾತಿಯನ್ನು ಪ್ರಾರಂಭಿಸಿದೆ. ತರಬೇತಿಗೆ ಬರುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಪ್ರತ್ಯೇಕ ವಸತಿ ವ್ಯವಸ್ಥೆ ಇರುತ್ತದೆ.ಪ್ರಸ್ತುತ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಗೆ, ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಮತ್ತು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಿಇಟಿ ತರಬೇತಿಗೆ ಹೆಸರು ನೋಂದಾಯಿಸಬಹುದು.ಪ್ರತಿಯೊಬ್ಬರಿಗೂ ಒಂದು ವರ್ಷದ ಪಠ್ಯಕ್ರಮದ ನೋಟ್ಸ್ ನೀಡಲಾಗುತ್ತದೆ. ಸಂಸ್ಥೆಯು ಈ ವರ್ಷದಿಂದ ಮಂಗಳೂರಿನಲ್ಲಿ ಪಿಯುಸಿ (ಕಾಮರ್ಸ್), ಬಿಕಾಂ, ಬಿಎಸ್‌ಸಿ, ಬಿಬಿ, ಎಂಕಾ, ಎಂಎಸ್‌ಸಿ ಮತ್ತು ಎಂಜಿನಿಯರಿಂಗ್ ಡಿಪ್ಲೊಮಾ ತರಬೇತಿ ಆರಂಭಿಸಿದೆ.

ಮಾಹಿತಿಗೆ: 99459 33230, 99863 70340. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.