ಬುಧವಾರ, ಮೇ 18, 2022
27 °C

ಎಚ್ಚರಿಕೆಯಿಂದ ಶಿಕ್ಷೆ ನೀಡಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಸೂಕ್ತ ಸಾಕ್ಷಿಗಳಿಲ್ಲದೇ ವರದಕ್ಷಿಣೆ ಸಾವು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಆರೋಪ ಹೋರಿಸದಂತೆ ಸುಪ್ರೀಂಕೊರ್ಟ್ ಗುರುವಾರ ಕೆಳಹಂತದ ನ್ಯಾಯಾಲಯಗಳಿಗೆ ತಾಕೀತುಮಾಡಿದೆ.ಇಂತಹ ಪ್ರಕರಣಗಳಲ್ಲಿ ವರದಕ್ಷಿಣೆ ಕಿರುಕುಳದಿಂದಲೇ ಸಾವು ಸಂಭವಿಸಿದೆ ಅಥವಾ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಸಾಬೀತು ಪಡಿಸುವ ಸಾಕ್ಷಿ, ಪುರಾವೆಗಳಿದ್ದಲ್ಲಿ ಮಾತ್ರ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು.  ಪ್ರಕರಣದ ಸಾಕ್ಷಿ, ಪುರಾವೆಗಳ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ 302 ಅಡಿಯಲ್ಲಿ ಶಿಕ್ಷೆ ನೀಡಬೇಕೋ ಅಥವಾ 304ರ ಅಡಿ ಶಿಕ್ಷೆ ನೀಡಬೇಕೋ ಎಂದು ಕೋರ್ಟ್‌ಗಳು ತೀರ್ಮಾನಿಸಬೇಕು.ಇನ್ನಿತರ ಕೊಲೆ ಪ್ರಕರಣಗಳಿಗೆ ಭಾರತೀಯ ದಂಡ ಸಂಹಿತೆ 302ರ ಅಡಿ ಶಿಕ್ಷೆ ನೀಡಿದರೆ, ವರದಕ್ಷಿಣೆ ಕಿರುಕುಳ ಸಾವಿಗೆ 304ರ ಅಡಿ ಶಿಕ್ಷೆ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.