ಶನಿವಾರ, ಫೆಬ್ರವರಿ 27, 2021
31 °C

ಎಚ್‌ಎಎಲ್‌ಗೆ ಮುಂಬೈ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಎಎಲ್‌ಗೆ ಮುಂಬೈ ಸವಾಲು

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ತವರು ನೆಲದಲ್ಲಿ ಒಲಿಯುವುದೇ ಮೊದಲ ಗೆಲುವು? ಸ್ಥಳೀಯ ಫುಟ್‌ಬಾಲ್ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು. ಐ ಲೀಗ್ ಟೂರ್ನಿಯಲ್ಲಿ 24 ಸುತ್ತಿನ ಪಂದ್ಯಗಳನ್ನು ಆಡಿದ್ದರೂ, ಆತಿಥೇಯ ತಂಡಕ್ಕೆ ಇದುವರೆಗೆ ತವರಿನಲ್ಲಿ ಒಂದೂ ಗೆಲುವು ಲಭಿಸಿಲ್ಲ.ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಮುಂಬೈ ಕ್ಲಬ್ ಎದುರಿನ 25ನೇ ಸುತ್ತಿನ ಪಂದ್ಯದಲ್ಲಾದರೂ ಈ ಪ್ರಶ್ನೆಗೆ ಉತ್ತರ ದೊರೆಯಬಹುದು ಎನ್ನುವ ನಿರೀಕ್ಷೆಯಿದೆ. ಪುಣೆ ಕ್ಲಬ್ ವಿರುದ್ಧದ ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವೇ ಈ ನಿರೀಕ್ಷೆಗೆ ಕಾರಣ. ಉತ್ತಮವಾಗಿ ಗೋಲು ಗಳಿಸಿದ್ದರೂ, ರಕ್ಷಣಾ ವಿಭಾಗದ ವೈಫಲ್ಯದಿಂದ ತಂಡ ಕಳೆದ ಪಂದ್ಯದಲ್ಲಿ ಸೋಲು ಕಂಡಿತ್ತು.ಉದ್ಯಾನನಗರಿಯಲ್ಲಿ 11 ಪಂದ್ಯಗಳನ್ನಾಡಿರುವ ಎಚ್‌ಎಎಲ್ ಕಳಪೆ ಪ್ರದರ್ಶನ ನೀಡುತ್ತಿದೆ. ಫೆಬ್ರುವರಿಯಲ್ಲಿ ಚಿರಾಗ್ ಯುನೈಟೆಡ್ ಕೇರಳ ಎದುರು ಲಭಿಸಿದ ಗೆಲುವು ಎಚ್‌ಎಎಲ್ ಮಡಿಲಿಗೆ ಬಂದ ಮೊದಲ ಹಾಗೂ ಕೊನೆಯ ಜಯ. ಇದನ್ನು ಹೊರತು ಪಡಿಸಿದರೆ, ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಷ್ಟೇ ಈ ತಂಡದ ಸಾಧನೆ.  ಪಂದ್ಯದ ಆರಂಭ: ಮಧ್ಯಾಹ್ನ 3.30

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.