ಗುರುವಾರ , ಮೇ 6, 2021
33 °C
ಸಿಪಿಎಂ ಮುಖಂಡ ಯೆಚೂರಿ ಹೇಳಿಕೆ

ಎಡಪಕ್ಷಗಳ ಹೊರತು ಪರ್ಯಾಯ ರಾಜಕೀಯ ಶಕ್ತಿ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ/ಚೆನ್ನೈ (ಪಿಟಿಐ): ದೇಶದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಪರ್ಯಾಯ ರಾಜಕೀಯ ಶಕ್ತಿ ಅಸ್ತಿತ್ವಕ್ಕೆ ಬರಲು ಅಸಾಧ್ಯ ಎಂದಿರುವ ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಸೀತಾರಾಮ್ ಯೆಚೂರಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉದ್ದೇಶಿತ ಒಕ್ಕೂಟ ವೇದಿಕೆ ರಚನೆ ವಿಚಾರವನ್ನು ತಳ್ಳಿ ಹಾಕಿದ್ದಾರೆ.`ಸಾಮಾನ್ಯ ಕಾರ್ಯಕ್ರಮಗಳು ಮತ್ತು ಪರ್ಯಾಯ ನೀತಿಗಳ ಆಧಾರದ ಮೇಲೆ ಯಾವುದಾದರೂ ವೇದಿಕೆ ಅಥವಾ ರಂಗ ರಚಿಸಿದರೆ ಅದು ಯಶಸ್ವಿಯಾಗಬಹುದು. ಕೇವಲ ಘೋಷಣೆ ಮಾಡುವುದರಿಂದ ಒಕ್ಕೂಟ ವೇದಿಕೆ ರಚನೆಯಾಗುವುದಿಲ್ಲ' ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಧರ್ಮ ಮತ್ತು ಜಾತಿ ಆಧಾರದ ಮೇಲೆ ರಾಜಕೀಯ ಪಕ್ಷಗಳು ಹಂಚಿ ಹೋಗಿರುವ ಹಿನ್ನೆಲೆಯಲ್ಲಿ ಪರ್ಯಾಯ ವೇದಿಕೆ ರಚನೆ ಸವಾಲಿನ ಕೆಲಸ ಎಂದು ಸಿಪಿಐಎಂ ಮುಖಂಡ ಬುದ್ಧದೇವ್ ಭಟ್ಟಾಚಾರ್ಯ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆದಾಗ, `ಹೌದು, ಅವರ ಹೇಳಿಕೆ ವಾಸ್ತವಾಂಶದಿಂದ ಕೂಡಿದೆ' ಎಂದು ಚುಟುಕಾಗಿ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.