ಬುಧವಾರ, ಜೂನ್ 16, 2021
26 °C

ಎತ್ತಿನ ಹೊಳೆ ಯೋಜನೆ ವಿರೋಧಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಿರುವುದನ್ನು ವಿರೋಧಿಸಿ ರೈತ ಸಂಘ–ಹಸಿರು ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಖಾಲಿ ಪೈಪ್‌ಗಳಿಗೆ ಪೂಜೆ ಮಾಡಿ, ಧರಣಿ ನಡೆಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಸೇರಿ­ದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳ ಮುಖವಾಡ ತೊಟ್ಟ ಕಾರ್ಯಕರ್ತರು ‘ಚುನಾವಣೆಯಲ್ಲಿ ಜನರನ್ನು ಓಟಿಗೋಸ್ಕರ ಯಾಮಾರಿಸಲು ಈ ಶಂಕುಸ್ಥಾಪನೆ’ ಎಂಬ ಫಲಕವನ್ನು ಖಾಲಿ ಪೈಪಿಗೆ ಕಟ್ಟಿ, ಪೂಜೆ ಸಲ್ಲಿಸುವ ಮೂಲಕ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ವಿರುದ್ಧ ಪ್ರತಿಭಟಿಸಿದರು.ಡಾ.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ ಎಂದು ದಶಕಕ್ಕೂ ಹೆಚ್ಚು ಅವಧಿಯಿಂದ ಜನ ಕೇಳುತ್ತಿದ್ದರೂ ಸರ್ಕಾರ­ಗಳು ಮಾತ್ರ ಓಟಿಗೋಸ್ಕರ ಎತ್ತಿನ ಹೊಳೆ ಯೋಜನೆ ಎಂಬ ಭೂತಕ್ಕೆ ಶಂಕುಸ್ಥಾಪನೆ ಮಾಡಿ ದಿಕ್ಕು ತಪ್ಪಿಸಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿರಂತರ ಹೋರಾಟ, ಪಾದಯಾತ್ರೆಗಳ ಮೂಲಕ ಗಮನ ಸೆಳೆಯುತ್ತಿದ್ದರೂ ಕಾಟಾಚಾರಕ್ಕೆಂಬಂತೆ ಪರಮಶಿವಯ್ಯನವರ ವರದಿ ಕುರಿತು ಸಮೀಕ್ಷಾ ವರದಿ ತಯಾರಿಸಲು ಇಸ್ರೋ ಕಂಪನಿಗೆ ಟೆಂಡರ್ ನೀಡಿದ್ದು, ಅದನ್ನು ಮೂಲೆ ಗುಂಪು ಮಾಡಲಾಯಿತು ಎಂದು ಟೀಕಿಸಿದರು.ಪರಮಶಿವಯ್ಯನವರ ತಾಂತ್ರಿಕ ವರದಿ ಸಮಿತಿಯಲ್ಲಿ ಸದಸ್ಯರಾಗಿರುವ, ಕೆ.ಸಿ.ರೆಡ್ಡಿ ಮತ್ತು ದೇಸಾಯಿ ಅವರನ್ನು ಸಮಿತಿಯಿಂದ ತೆಗೆಯಬೇಕು ಎಂದು ಆಗ್ರಹಿಸಿದರು.ಪ್ರಮುಖರಾದ ಕೆ. ಶ್ರೀನಿವಾಸಗೌಡ, ಕೆ.ನಾರಾಯಣಗೌಡ, ನಾಗರಾಜಗೌಡ, ಬಾಬು, ರಂಜಿತ್ ಕುಮಾರ್, ಕೃಷ್ಣೇಗೌಡ, ಮಂಜು, ಎನ್.ಹರೀಶ್, ರಘು, ಬಾಲು, ಆಂಜಿನಪ್ಪ , ಭಕ್ತವತ್ಸಲಂ, ಶ್ರೀನಿವಾಸ್, ರಮೇಶ್, ಮುನ್ನಾ, ಮಂಜು­ನಾಥ್, ಮುನೇಗೌಡ, ರಾಜೇಶ್, ಉದಯ್, ಪ್ರತಾಪ್, ಅಮರನಾರಾ­ಯಣ­ಸ್ವಾಮಿ, ಗಣೇಶ್, ಮೂರ್ತಿ, ರಂಜಿತ್ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.