ಸಿಂದಗಿ: ಪ್ರತಿಟನ್ ಕಬ್ಬಿಗೆ ಮೂರು ಸಾವಿರ ರೂಪಾಯಿ ನಿಗದಿ ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾವಿರಾರು ರೈತರು ಶುಕ್ರವಾರ ತಾಲ್ಲೂಕಿನ ಐದು ಕಡೆ ಹೆದ್ದಾರಿ ತಡೆ ನಡೆಸಿದರು.

ಚಿಕ್ಕಸಿಂದಗಿ ಬಳಿ ಹೆದ್ದಾರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಈ ಭಾಗದ ರೈತರ ಕಬ್ಬಿಗೆ ಪ್ರತಿ ಟನ್ಗೆ ರೂ. 3 ಸಾವಿರ ನಿಗದಿಪಡಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಮುಖ್ಯಮಂತ್ರಿಗಳಿಗೆ, ಕೃಷಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಹೆದ್ದಾರಿ ತಡೆ ನಡೆಸಬೇಕಾಯಿತು ಎಂದರು.

ರೈತರು ಇಷ್ಟೊಂದು ಉಗ್ರ ಹೋರಾಟ ಕೈಗೊಂಡರೂ ಶಾಸಕ ರಮೇಶ ಭೂಸನೂರ ಮೌನ ಮುರಿದಿಲ್ಲ. ಪ್ರತಿಭಟನಾ ಸ್ಥಳಕ್ಕೂ ಭೇಟಿ ನೀಡಿಲ್ಲ. ಹೀಗಾಗಿ ಅವರು `ರೈತ ವಿರೋಧಿ~ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದರು. ಚಿಕ್ಕಸಿಂದಗಿ, ಮೋರಟಗಿ, ಹೂವಿನಹಳ್ಳಿ ಕ್ರಾಸ್, ಗೋಲಗೇರಿ, ಬಂದಾಳ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆ ನಡೆಸಲಾಯಿತು. ರಸ್ತೆ ಮಧ್ಯದಲ್ಲಿಯೇ ಎತ್ತು, ಗಾಡಿಗಳನ್ನು ನಿಲ್ಲಿಸಿ ಪ್ರತಿಭಟಿಸಿದರು. ಚಿಕ್ಕಸಿಂದಗಿ ಬಳಿ ಒಂದೂವರೆ ಗಂಟೆ ಹಾಗೂ ಇನ್ನುಳಿದ ಕಡೆ ನಾಲ್ಕೂವರೇ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

ಗೋಲಗೇರಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30ರ ವರೆಗೆ ರಸ್ತೆ ತಡೆ ನಡೆಸಲಾಯಿತು. ಈ ಹೋರಾಟಕ್ಕೆ ಸ್ಥಳೀಯ ವಿರಕ್ತಮಠ, ಗೊಲ್ಲಾಳೇಶ್ವರ ಧರ್ಮದರ್ಶಿ ಹೊಳೆಪ್ಪ ಸಾಹು ದೇವರಮನಿ ಚಾಲನೆ ನೀಡಿದರು.
ಮಾಜಿ ಸಚಿವ ಎಂ.ಸಿ.ಮನಗೂಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಯುವ ಧುರೀಣ ಅಶೋಕ ಮನಗೂಳಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದರು. ಪ್ರತಿಭಟನೆ ನೇತೃತ್ವವನ್ನು ಚನ್ನಪ್ಪ ಗೌಡ ಪಾಟೀಲ, ಶಿವು ಹತ್ತಿ, ಮುರಗೆಪ್ಪಗೌಡ ರದ್ದೇವಾಡಗಿ, ಶಿವಯೋಗಿ ಹತ್ತರಕಿ, ಗೊಲ್ಲಾಳಪ್ಪ ಕರ್ನಾಳ, ಗೌಡಣ್ಣ ಆಲಮೇಲ, ದಾವಲ್ಸಾಬ್ ಮನಿಯಾರ ವಹಿಸಿದ್ದರು.

ಚಿಕ್ಕಸಿಂದಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ 10 ರಿಂದ ಮಧ್ಯಾಹ್ನ 12-30ರ ವರೆಗೆ ರಸ್ತೆತಡೆ ನಡೆಯಿತು. ನೇತೃತ್ವವನ್ನು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಉಪಾಧ್ಯಕ್ಷ ಚಂದ್ರೂಗೌಡ ಪಾಟೀಲ, ಮಲ್ಲಿಕಾರ್ಜುನ ಅಲ್ಲಾಪೂರ, ರೈತ ಮಹಿಳೆಯರಾದ ವಿಜಯಲಕ್ಷ್ಮಿ ಬಗಲಿ, ನೀಲಮ್ಮ ಪಾರ್ಥನಳ್ಳಿ, ಗುರುಬಾಯಿ ಬಗಲೂರ, ಶ್ರೀದೇವ ಜಾಲವಾದಿ ವಹಿಸಿಕೊಂಡಿದ್ದರು.

ಮೋರಟಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲೂ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2-30ರ ವರೆಗೆ ರಸ್ತೆ ತಡೆ ನಡೆಯಿತು. ಪ್ರತಿಭಟನೆಯಲ್ಲಿ ಸಾತಲಿಂಗಯ್ಯ ಹಿರೇಮಠ ಕಕ್ಕಳಮೇಲಿ, ಗುರುಲಿಂಗಯ್ಯ ದೇವರನಾವದಗಿ, ರುದ್ರಗೌಡ ಪಾಟೀಲ, ಬಾಬು ಸಾಹುಕಾರ ಪಾಲ್ಗೊಂಡಿದ್ದರು.

ಹೂವಿನಹಳ್ಳಿಯಲ್ಲೂ ನಾಲ್ಕೂವರೆ ಗಂಟೆಗಳ ಕಾಲ ಎತ್ತಿನ ಗಾಡಿಯೊಂದಿಗೆ ರೈತರು ರಸ್ತೆ ತಡೆ ನಡೆಸಿದರು. ನೇತೃತ್ವವನ್ನು ಶಿವಶರಣಪ್ಪಗೌಡ ಬಿರಾದಾರ, ಪರಶು ಹುಡೇದ, ಬಸೂ ಧರ್ಮಗೊಂಡ, ಶ್ರೀಮಂತ ದುದ್ದಗಿ ವಹಿಸಿದ್ದರು.

ಬಂದಾಳ ಗ್ರಾಮದ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಬಸಯ್ಯ ಹಿರೇಮಠ, ಕುಮಾರಸ್ವಾಮಿ, ಹನುಮಂತ ಕುಂಬಾರ, ನಿಂಗನಗೌಡ ಬಿರಾದಾರ ವಹಿಸಿದ್ದರು.

ರೈತರಿಂದ ಪ್ರತಿಭಟನೆ
ಆಲಮೇಲ: ಒಂದು ಟನ್ ಕಬ್ಬಿಗೆ ರೂ 3ಸಾವಿರ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಶುಕ್ರವಾರ ಹೂವಿನಹಳ್ಳಿ ಕ್ರಾಸ್ನಲ್ಲಿ ರಸ್ತೆ ಸಂಚಾರ ತಡೆ ನಡೆಸಿದರು.

ಕಬ್ಬು ಬೆಳೆಗಾರರಿಗೆ ಸರಕಾರದಿಂದ ಕಾರ್ಖಾನೆಯ ಮಾಲೀಕರಿಂದ ಬರಬೇಕಾದ ಹಿಂದಿನ ಬಾಕಿ ಹಣ ತಕ್ಷಣ ಸಂದಾಯ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಮುಂಗಡವಾಗಿ ರೂ. 3ಸಾವಿರ ಕೊಡಬೇಕು. ಎಸ್.ಎ.ಪಿ ಕಾನೂನು ಜಾರಿಯಾಗಬೇಕು. ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಸ್ತೆಗೆ ಅಡ್ಡಲಾಗಿ ಎತ್ತಿನ ಬಂಡಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 9ಗಂಟೆಗೆ ಆರಂಭವಾದ ರಸ್ತೆ ತಡೆ ಚಳವಳಿ ಮಧ್ಯಾಹ್ನ 2ಗಂಟೆಗೆ ಮುಗಿಯಿತು. ಆಲಮೇಲ, ಹೊವಿನಹಳ್ಳಿ, ಗುಂದಗಿ, ದೇವರನಾವದಗಿ ಮೊದಲಾದ ಗ್ರಾಮಗಳಿಂದ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ರೈತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಯುತ್ತಿರುವ ಕಬ್ಬಿನಲ್ಲಿ 11.5 ರಷ್ಟು ಪ್ರಮಾಣ ಸಕ್ಕರೆ ಅಂಶವಿದೆ. ಮಂಡ್ಯ ಭಾಗದಲ್ಲಿನ ಕಬ್ಬಿನಲ್ಲಿ 8.5 ರಷ್ಟು ಸಕ್ಕರೆ ಅಂಶವಿದೆ. ಅಲ್ಲಿ ರೂ. 2400 ಬೆಲೆ ನಿಗದಿ ಮಾಡಿದೆ. ನಮ್ಮ ಕಬ್ಬಿನಲ್ಲಿ ಹೆಚ್ಚು ಪ್ರಮಾಣ ಸಕ್ಕರೆ ಅಂಶವಿರುವವುದರಿಂದ ರೂ.3000 ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಸಿದ್ದರಾಮಪ್ಪ ರಂಜುಣಗಿ ಮಾತನಾಡಿದರು.

ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಕಾರ್ಯದರ್ಶಿ ಗುರುನಾಥ ಬಗಲಿ, ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಪ್ರಭು ವಾಲೀಕಾರ, ಮಲ್ಲನಗೌಡ ಪಾಟೀಲ. ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಂದ್ರ ಗುಗ್ಗರಿ, ಪರಶುರಾಮ ಹುಡೇದ, ಬಸನಗೌಡ ಧರ್ಮಗೊಂಡ, ಗುರನ್ಗೌಡ ಬಮ್ಮನಜೋಗಿ. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಎಂ.ಎಂ. ಕೊತಂಬಿರಿ , ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಲ್ಗೊಂಡಿದ್ದರು.

ಪ್ರಯಾಣಿಕರಿಗೆ ತೊಂದರೆ: ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ಎತ್ತಿನ ಗಾಡಿಗಳನ್ನು ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ಮಾಡಿದ್ದರಿಂದ ಹಾದಿಯ್ಲ್ಲಲೇ ಜನರು ಪರದಾಡುವಂತಾಯಿತು.

ಯಾವೊಂದು ವಾಹನ ಚಲಿಸಲು ಬಿಡಲಿಲ್ಲ, ಬೈಕ್ ಸವಾರರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಪದವಿ ಪರೀಕ್ಷೆ ಬರೆಯಲು ಹೊರಟ್ಟಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ಸಹಾಯ ಮಾಡಿ ಪರೀಕ್ಷೆ ಕೇಂದ್ರಕ್ಕೆ ತೆರಳಲು ಅನುವು ಮಾಡಿಕೊಟ್ಟರು.

ಕೋರಹಳ್ಳಿಯಲ್ಲೂ ಪ್ರತಿಭಟನೆ: ಕೋರಹಳ್ಳಿ ಗ್ರಾಮದಲ್ಲಿ ನೂರಾರು ರೈತರು ಸೇರಿ ರಸ್ತೆ ತಡೆ ನಡೆಸಿದರು. ಗೊಲ್ಲಪ್ಪಗೌಡ ಪಾಟೀಲ, ವಿವೇಕಾನಂದ ಪಾಟೀಲ, ಸಿದ್ದನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಹಣಮಂತ ಶಿವಪೂರ, ಕಾಸಯ್ಯ ಹಿರೇಮಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.