ರಾಜ್ಯದ ಸುಮಾರು 9 ಲಕ್ಷ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಫಲಿತಾಂಶ ಹೊರಬೀಳುತ್ತದೆ. ಹೆಚ್ಚು ಮಕ್ಕಳು ಉತ್ತೀರ್ಣರಾಗುವುದು ಒಳ್ಳೆಯದೇ. ಆದರೆ ಅನುತ್ತೀರ್ಣರಾಗುವ ಮಕ್ಕಳ ಗತಿ? ಪ್ರತಿ ವರ್ಷ ಹೀಗೆ ಅನುತ್ತೀರ್ಣರಾದ ಮಕ್ಕಳು ಏನಾಗುತ್ತಿದ್ದಾರೋ ಈ ಸಲವೂ ಅದೇ ಆಗುತ್ತಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರಿದ್ದಾರೆ?

ಆದರೆ ಕುತೂಹಲದ ಸಂಗತಿ ಇನ್ನೊಂದಿದೆ. ಬಹಳಷ್ಟು ಪ್ರೌಢಶಾಲಾ ಶಿಕ್ಷಕರೂ ಖಾಸಗಿಯಾಗಿ ಒಪ್ಪಿಕೊಳ್ಳುವ ಮಾತೆಂದರೆ ಹತ್ತು ವರ್ಷ ಶಾಲೆಯಲ್ಲಿ ಕುಳಿತು ಕಲಿತ ಬಹಳಷ್ಟು ಮಕ್ಕಳಿಗೆ ಸರಿಯಾಗಿ ಓದಲು ಬರುವುದಿಲ್ಲ, ಸರಿಯಾಗಿ ಅರ್ಥಪೂರ್ಣ ವಾಕ್ಯ ರಚನೆ ಮಾಡಲು ಬರುವುದಿಲ್ಲ.

ಶಾಲಾ ಶಿಕ್ಷಣ ಸುಧಾರಣೆಯಲ್ಲಿ ತೊಡಗಿಸಿಕೊಂಡ ದೇಶದ ಪ್ರಮುಖ ಸ್ವಯಂಸೇವಾ ಸಂಸ್ಥೆ `ಪ್ರಥಮ್~ನ 2011ರ ಶೈಕ್ಷಣಿಕ ಸ್ಥಿತಿ ಕುರಿತ ವಾರ್ಷಿಕ ಸಮೀಕ್ಷಾ ವರದಿ (ಎಎಸ್ಎಆರ್) ಸಹ ಇದನ್ನೇ ದೃಢೀಕರಿಸುತ್ತದೆ. ಅದರ ಪ್ರಕಾರ ನಮ್ಮ ರಾಜ್ಯದಲ್ಲಿ ಸರಿಯಾಗಿ ಓದಲು ಬರೆಯಲು ಬಾರದ ಪ್ರೌಢಶಾಲಾ ಮಕ್ಕಳ ಸಂಖ್ಯೆ ಶೇಕಡಾ 65.

ಪ್ರೌಢಶಾಲಾ ಶಿಕ್ಷಕರು ಇದಕ್ಕೆ ಕೊಡುವ ಸಮಜಾಯಿಷಿ ಎಂದರೆ `ಮೊದಲ ಏಳು ವರ್ಷ ಆ ಮಕ್ಕಳು ಸರಿಯಾಗಿ ಕಲಿತಿಲ್ಲ~. ಇದು ನಿಜವಿರಲೂಬಹುದು. ಈ ಬಗ್ಗೆ ಆಮೇಲೆ ಚರ್ಚಿಸೋಣ. ಅದಕ್ಕೂ ಮುನ್ನ ಈ ಕೆಳಗಿನ ಲೆಕ್ಕಗಳನ್ನು ಗಮನಿಸಿ.

ಒಂದು ಚಕ್ರದ ತ್ರಿಜ್ಯ 30 ಸೆಂ.ಮೀ. ಅಂತಹ ಚಕ್ರಗಳನ್ನು ಹೊಂದಿರುವ ಕಾರೊಂದು ಚಲಿಸುವಾಗ ಚಕ್ರಗಳು 100 ಸುತ್ತು ಸುತ್ತಿದರೆ ಆ ಕಾರು ಎಷ್ಟು ಮೀಟರ್ ದೂರ ಚಲಿಸಿರುತ್ತದೆ? ಅಥವಾ ಆರು ಮೀಟರ್ ಎತ್ತರದ ಒಂದು ಕಂಬದ ನೆರಳು ಒಂದು ಸಮಯದಲ್ಲಿ ಎಂಟು ಮೀಟರ್ ಇರುತ್ತದೆ.

ಅದೇ ಸಮಯದಲ್ಲಿ ಹತ್ತು ಮೀಟರ್ ಎತ್ತರವಿರುವ ಒಂದು ಮರದ ನೆರಳು ಎಷ್ಟು ಉದ್ದವಿರುತ್ತದೆ? ಇವು ಕೆಲವು ಉದಾಹರಣೆಗಳು ಮಾತ್ರ. ಅಲ್ಲದೆ ಇವು ಏಳನೇ ತರಗತಿ ಮಕ್ಕಳ (ಅಂದರೆ ಏಳು ವರ್ಷ ತರಗತಿಯಲ್ಲಿ ಭಾಷೆ ಮತ್ತು ಗಣಿತ ಕಲಿತವರು) ಮುಂದಿನ ಸಮಸ್ಯೆಗಳು.

ಇದಕ್ಕೆ ಬೇಕಿರುವುದು ತಾರ್ಕಿಕ ಶಕ್ತಿ. ಅಂದರೆ ಓದುವ ಮನಸ್ಸಿಗೆ ಈ ಸಮಸ್ಯೆ ಅರ್ಥವಾಗಬೇಕು. ಉದಾಹರಣೆಗೆ ಇಲ್ಲಿ ಮಗುವಿನ ಮನಸ್ಸಿನಲ್ಲಿ ಕಾರು, ಕಾರಿನ ಚಕ್ರ, ಚಕ್ರದ ಗಾತ್ರ, ಅದು ಚಲಿಸುವಾಗ ಸುತ್ತುವ ಚಿತ್ರ ಅಥವಾ ಒಂದು ಕಂಬ ಮತ್ತು ಮರದ ಚಿತ್ರ, ಬಿಸಿಲಿನಲ್ಲಿ ಒಂದೆಡೆ ಅವುಗಳಿಂದುಂಟಾದ ನೆರಳು, ಸೆಂ.ಮೀ, ಮೀಟರ್ ಎಂದೆ ಎಷ್ಟು ಉದ್ದ ಇತ್ಯಾದಿ ಕಲ್ಪನೆಗಳೆಲ್ಲ ಮೂಡಿದರೆ ಆ ಸಮಸ್ಯೆ ಅರ್ಥವಾಗಿದೆ ಎನ್ನಬಹುದು. ಅಂದರೆ ಭಾಷೆಯನ್ನು ಅರ್ಥೈಸಿಕೊಂಡು ಓದುವ ಸಾಮರ್ಥ್ಯ ಇರಬೇಕು. ನಂತರ ಸಮಸ್ಯೆ ಬಿಡಿಸುವ ಹಂತದಲ್ಲಿ ಒಂದಿಷ್ಟು ತರ್ಕ.

ಆದರೆ ಏಳನೇ ತರಗತಿಯ ಇಂತಹ ಸಮಸ್ಯೆ ಬಿಡಿಸಬಲ್ಲ ಎಂಟನೇ ತರಗತಿಯ ಮಕ್ಕಳ ಪ್ರಮಾಣ ಕೇವಲ ಶೇಕಡಾ 27 ಎನ್ನುತ್ತದೆ ಎಎಸ್ಎಆರ್ ವರದಿ. ಆದಾಗ್ಯೂ ಮುಂದೆ ಎರಡೇ ವರ್ಷಗಳಲ್ಲಿ ಇನ್ನಷ್ಟು ಸಂಕೀರ್ಣ ಭಾಷೆಯನ್ನು ಒಳಗೊಂಡ ಪಠ್ಯವನ್ನು ಅರ್ಥೈಸಿಕೊಂಡು ಪಾಸಾಗುವವರ ಪ್ರಮಾಣ ಶೇ 70-80ಕ್ಕೆಲ್ಲ ಜಿಗಿಯುತ್ತದೆ. ಇದು ಪವಾಡವಲ್ಲದೆ ಇನ್ನೇನು!

ಒಂದು ವಾಕ್ಯ ಏನು ಹೇಳುತ್ತಿದೆ ಎಂದು ಅರ್ಥವಾಗದ ಮಗು ಹೇಗೆ ತರ್ಕಿಸಲು ಸಾಧ್ಯ, ಹೇಗೆ ಉತ್ತರಿಸಲು ಸಾಧ್ಯ? ಆದರೂ ಇದೆಲ್ಲಾ ಆಗುತ್ತಿದೆ. ಮಕ್ಕಳು ಮುಂದೆ ಮುಂದೆ ಹೋಗುತ್ತಲೇ ಇದ್ದಾರೆ (ಅಥವಾ ಅವರನ್ನು ಮುಂದೆ ತಳ್ಳುತ್ತಿದ್ದಾರೆ).

ವ್ಯವಸ್ಥೆಯ ಎಲ್ಲ ಹಂತಗಳಲ್ಲಿ ನಮ್ಮ ಶೈಕ್ಷಣಿಕ ಮಟ್ಟ ತುಂಬಾ ಉತ್ತಮ ಎಂದು ಬಿಂಬಿಸುವ ಒತ್ತಡವಿರುತ್ತದೆ. ಆದರೆ ಮೊದಲ 9 ವರ್ಷಗಳಲ್ಲಿ ಇಲ್ಲದ ಕಾಳಜಿ ಹತ್ತನೆ ವರ್ಷದಲ್ಲಿ ಬಂದುಬಿಡುತ್ತದೆ. ಏಕೆಂದರೆ ಹತ್ತನೆ ತರಗತಿಯ ಫಲಿತಾಂಶ ಎನ್ನುವುದು ಶಿಕ್ಷಕರಿಗೆ, ಅಧಿಕಾರಿಗಳಿಗೆ ಹಾಗೂ ಪೋಷಕರಿಗೂ ಸಹ ಪ್ರತಿಷ್ಠೆಯ ವಿಷಯ.

ಆದ್ದರಿಂದ ಎಲ್ಲರೂ ಇಲ್ಲಿ ಮಕ್ಕಳನ್ನು ಉತ್ತೀರ್ಣಗೊಳಿಸಲು ಕಟಿಬದ್ಧರಾಗಿ ಶ್ರಮಿಸುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಉತ್ತೀರ್ಣರಾಗುವ ಮಕ್ಕಳನ್ನು ತೋರಿಸಿ ನಮ್ಮ ಶೈಕ್ಷಣಿಕ ಮಟ್ಟ ಏರುತ್ತಿದೆ ಎಂದು ಬಿಂಬಿಸುವುದರಲ್ಲಿ ಅರ್ಥವಿದೆಯೆ?

ಮಗು ಶಾಲೆಯ ವಾತಾವರಣಕ್ಕೆ ಬಂದಾಗಿನಿಂದ ಆಯಾ ವಯಸ್ಸಿಗೆ, ಆಯಾ ತರಗತಿಗೆ ಏನು ಕಲಿಸಬೇಕೋ ಅದನ್ನು ಕಲಿಸಿದರೆ ಎಲ್ಲೂ ಸಮಸ್ಯೆಯಾಗುವುದಿಲ್ಲ. ಆದರೂ ಅದು ಆಗುತ್ತಿಲ್ಲ ಏಕೆ? ಖ್ಯಾತ ಶಿಕ್ಷಣ ತಜ್ಞ ಪ್ರೊ. ಯಶ್ಪಾಲರ ಮಾರ್ಗದರ್ಶನದಲ್ಲಿ ಸುಮಾರು 20 ವರ್ಷಗಳ ಹಿಂದೆಯೆ ಕಲಿಕೆಯ ಕನಿಷ್ಠ ಮಟ್ಟಗಳನ್ನು ಗುರುತಿಸಲಾಗಿತ್ತು. ಡಿಪಿಇಪಿ ಅಡಿ ಇವನ್ನು ಅನುಷ್ಠಾನಗೊಳಿಸಲಾಗಿತ್ತು.

ಇದರಲ್ಲಿ ಒಂದರಿಂದ ನಾಲ್ಕನೇ ತರಗತಿ ವರೆಗೆ ಮಕ್ಕಳು ಕನಿಷ್ಠ ಕಲಿತಿರಲೇಬೇಕಾದ ಸುಮಾರು 150 ರಿಂದ 180 ಸಾಮರ್ಥ್ಯಗಳನ್ನು ಹಂತ ಹಂತವಾಗಿ ಗುರುತಿಸಲಾಗಿದೆ. ಅವುಗಳಲ್ಲಿ ನಾಲ್ಕು ವರ್ಷದೊಳಗೆ ಕಲಿತಿರಬೇಕಾದ ಕೆಲವು ಸಾಮರ್ಥ್ಯಗಳು ಹೀಗಿವೆ.

* ಓದಿದ ಪಠ್ಯದಲ್ಲಿನ ವಿಚಾರಸರಣಿ ಮತ್ತು ಘಟನಾವಳಿಗಳಲ್ಲಿರುವ ಸರಳ ಕಾರ್ಯಕಾರಣ ಸಂಬಂಧ ಗುರುತಿಸುವುದು.

* ಪಠ್ಯವನ್ನು ಓದಿದ ನಂತರ ಹೇಗೆ, ಏಕೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಶಕ್ತರಾಗುವುದು.

* ಭಿನ್ನರಾಶಿ, ಅವುಗಳ ವಿಧಗಳು, ಸಮಾನ ಭಿನ್ನರಾಶಿಗಳು, ಅವುಗಳ ಹೋಲಿಕೆ, ಅವುಗಳ ಏರಿಕೆ, ಇಳಿಕೆ ಅರಿಯುವುದು.

* ಭೂಮಿ ತನ್ನ ಅಕ್ಷದ ಮೇಲೆ ಸುತ್ತುವುದಕ್ಕೂ ಹಗಲು ಮತ್ತು ರಾತ್ರಿಗಳಾಗುವುದಕ್ಕೂ ಇರುವ ಸಂಬಂಧವನ್ನು ಅರಿಯುವುದು.

* ಭಾಗಾಕಾರವು ಪರಿವರ್ತಿತ ವ್ಯವಕಲನ ಎಂಬ ಪರಿಕಲ್ಪನೆಯನ್ನು ಬಳಸಿಕೊಂಡು ಗಂಟೆಗಳನ್ನು ನಿಮಿಷಗಳನ್ನಾಗಿಯೂ, ನಿಮಿಷಗಳನ್ನು ಗಂಟೆಗಳನ್ನಾಗಿಯೂ ಪರಿವರ್ತಿಸುವುದು ಇತ್ಯಾದಿ.

ಆದರೆ ಇವು ಯಾವುವೂ ಖಂಡಿತವಾಗಿ ಮಗುವಿನ ಆಯಾ ತರಗತಿಯ ವಯಸ್ಸಿಗೆ ಮೀರಿದವಲ್ಲ ಮತ್ತು ಇವಕ್ಕೆ ಪೂರಕವಾದ ಸಾಮರ್ಥ್ಯಗಳನ್ನು ಹಿಂದಿನ ತರಗತಿಗಳಲ್ಲೆೀ ಕಲಿಸಬೇಕು. ಮತ್ತೊಂದು ಸಂಗತಿಯೆಂದರೆ ಈ ಹಂತದಲ್ಲಿ ಮಗು ಕಲಿತಿರಬೇಕೆಂದು ಗುರುತಿಸಿರುವ ಬಹುಪಾಲು ಸಾಮರ್ಥ್ಯಗಳು ಸಿಬಿಎಸ್ಸಿ ಪಠ್ಯಕ್ರಮಕ್ಕೆ ಅನುಗುಣವಾಗಿಯೇ ಇವೆ! ಇಂಗ್ಲಿಷ್(ಭಾಷೆ) ಹೊರತುಪಡಿಸಿದರೆ ಇನ್ನೆಲ್ಲವು ಕೇಂದ್ರ ಪಠ್ಯಕ್ರಮಕ್ಕೆ ಸಮನಾಗಿಯೇ ಇದೆ.

ಹೀಗಿರುವಾಗ ಎಂಟನೇ ತರಗತಿಯ ಮಗು ಭಾಷೆಯನ್ನು ಅರ್ಥೈಸಿಕೊಂಡು ಓದುತ್ತಿಲ್ಲ ಎಂದರೆ ಏನರ್ಥ? ಸಾಮಾನ್ಯವಾಗಿ ಈ ಹಂತದಲ್ಲಿ ಕಲಿಯದಿರುವುದಕ್ಕೆ ಮಕ್ಕಳ ದಡ್ಡತನವನ್ನೇ ಬಹುಪಾಲು ಶಿಕ್ಷಕರು ಹೊಣೆ ಮಾಡುತ್ತಾರೆ.

ಆದರೆ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕಲಿಯಲಾರದಷ್ಟು ದಡ್ಡರು ಪ್ರತಿಶತ ಎಷ್ಟು ಇರಬಹುದು? ಸಮೀಕ್ಷಾ ವರದಿಯಂತೆ ಐದನೇ ತರಗತಿಯಲ್ಲಿ ಎರಡನೇ ತರಗತಿಯ ಪಠ್ಯವನ್ನು ಓದಲಿಕ್ಕೆ ಬಾರದ ಶೇ 60 ಮಕ್ಕಳು ಇದ್ದಾರೆ.

ಮುಂದಿನ ತರಗತಿಗಳಿಗೆ ಹೋದಂತೆ ಈ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಹಾಗಾದರೆ ದಡ್ಡ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೆಂದು ನಿರ್ಧರಿಸಬೇಕಾಗುತ್ತದೆ. ವಸ್ತುಸ್ಥಿತಿ ಹೀಗಿದ್ದರೆ ಇದೊಂದು ಗಂಭೀರ ಸಮಸ್ಯೆಯೇ ಸರಿ. ಭವಿಷ್ಯದಲ್ಲಿ ದೇಶದ ತುಂಬೆಲ್ಲಾ ದಡ್ಡರೇ ತುಂಬಿಬಿಟ್ಟರೆ ಪ್ರಗತಿಯ ಗತಿ ಏನೆಂಬುದು ಎಲ್ಲರಿಗೂ ಅರ್ಥವಾಗುತ್ತದೆ.

ದೋಷ ಎಲ್ಲಿ?
ಆದರೆ ಮಕ್ಕಳ ಮನೋವಿಜ್ಞಾನಿಗಳ ಪ್ರಕಾರ ಬುದ್ಧಿಮಾಂದ್ಯ ಮಕ್ಕಳನ್ನು ಹೊರತುಪಡಿಸಿದರೆ ಜಗತ್ತಿನ ಯಾವ ಮೂಲೆಯಲ್ಲಾದರೂ ಮಕ್ಕಳ ಗ್ರಹಣ ಸಾಮರ್ಥ್ಯ ಒಂದೇ ಇರುತ್ತದೆ. ಯಾರೂ ದಡ್ಡರಾಗಿರುವುದಿಲ್ಲ. ಆದರೆ ಅವರಿಗೆ ಕಲಿಸದೆ ದಡ್ಡರು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ ಅಷ್ಟೆ.

ವಾಸ್ತವವಾಗಿ ತಲೆಮಾರಿನಿಂದ ತಲೆಮಾರಿಗೆ ಮಕ್ಕಳು ಮೊದಲಿನವರಿಗಿಂತ ಹೆಚ್ಚೆಚ್ಚು ಬುದ್ಧಿವಂತರಾಗುತ್ತಿದ್ದಾರೆ ಎನ್ನುತ್ತವೆ ಅಧ್ಯಯನಗಳು! ಆದರೆ ವರ್ಷದಿಂದ ವರ್ಷಕ್ಕೆ ದಡ್ಡರು ಎನಿಸಿಕೊಳ್ಳುವವರ ಸಂಖ್ಯೆ ಏರುತ್ತಿದೆ! ಬಹುಶಃ ಇದಕ್ಕೆ ಕಾರಣ ಮಕ್ಕಳಿಗೆ ಕಲಿಸುವ ಪ್ರಕ್ರಿಯೆಯಲ್ಲಿ ದೋಷವಿರಬೇಕು ಅಥವಾ ಮಕ್ಕಳನ್ನು ಪರಿಭಾವಿಸುವ ವ್ಯವಸ್ಥೆಯಲ್ಲಿಯೇ ಲೋಪವಿರಬೇಕು.

2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಕಲಿಸುವ ವಿಧಾನಗಳ ಬಗ್ಗೆ ವಿಸ್ತೃತವಾಗಿಯೇ ತಿಳಿಸಲಾಗಿದೆ. ಅದರಲ್ಲಿ ಬಹಳ ಮುಖ್ಯವಾದದ್ದೆಂದರೆ ಸಂರಚನಾವಾದ. ಜ್ಞಾನ ಎಂದರೆ ಮಾಹಿತಿಗಳ ಮೂಟೆಯಲ್ಲ; ಅದು ಪ್ರತಿ ದಿನ ಮಕ್ಕಳ ನಡುವೆ ಶಿಕ್ಷಕರ ನೆರವಿನಿಂದ ಅರಳುತ್ತಾ ಹೋಗುವಂತಹ ಜೀವಂತ ಪ್ರಕ್ರಿಯೆ ಎನ್ನುವುದೇ ಸಂರಚನಾವಾದ. ಇದರ ಹಿನ್ನೆಲೆಯಲ್ಲಿ ಶಿಕ್ಷಕರು, ತರಗತಿಗಳು, ಪಠ್ಯ ಪುಸ್ತಕಗಳು ಮತ್ತು ಪರೀಕ್ಷೆಗಳ ಸ್ವರೂಪವೇ ಬದಲಾಗಬೇಕಾಗುತ್ತದೆ.

ಇಪ್ಪತ್ತು ವರ್ಷಗಳ ಹಿಂದೆಯೇ ಪ್ರಾಥಮಿಕ ಹಂತದಲ್ಲಿ ಕಲಿಕೆಯ ಕನಿಷ್ಠ ಮಟ್ಟದ ಹೆಸರಿನಲ್ಲಿ ಪ್ರಯತ್ನಿಸಲಾದ ಪ್ರಯೋಗ ಯಶಸ್ವಿಯಾಗಿಲ್ಲ ಎಂಬುದು ಇಂದಿನ ಪ್ರೌಢಶಾಲಾ ಮಕ್ಕಳ ಕಲಿಕೆಯ ಮಟ್ಟವನ್ನು ಗಮನಿಸಿದರೆ ತಿಳಿಯುತ್ತದೆ.

ಈಗ ನಲಿ- ಕಲಿ ಹೆಸರಿನಲ್ಲಿ ಒಂದು ಒಳ್ಳೆಯ ಪ್ರಯೋಗ ನಡೆಯುತ್ತಿದೆ. 2005ರ ಪಠ್ಯಕ್ರಮ ಚೌಕಟ್ಟಿನಲ್ಲಿ ಹೇಳಿದಂತೆ ಸಂರಚನಾವಾದಕ್ಕೆ (ಪರಿಕಲ್ಪನಾತ್ಮಕ ಕಲಿಕೆ) ವಿಶೇಷ ಒತ್ತು ನೀಡಿರುವ ಈ ವಿಧಾನವೂ ಸಹ ಅಸಮರ್ಪಕ ಅಭ್ಯಾಸ ಪುಸ್ತಕಗಳು, ಅರ್ಥಹೀನ ಆಚರಣೆಗಳ ಭಾರದಲ್ಲಿ ನಲುಗುತ್ತಿದೆ.

ಶಿಕ್ಷಕರೂ ಹೊಣೆ
ಇವೆಲ್ಲಕ್ಕಿಂತ ಬಹಳ ಮುಖ್ಯ ಎಂದರೆ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಶಿಕ್ಷಕರ ಒಂದು ದೊಡ್ಡ ಸಮೂಹವಿದೆ. ಇವರಲ್ಲಿ ಕೆಲವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಾವು ಮಾತ್ರ ಸರ್ಕಾರಿ ಶಾಲೆಯಲ್ಲಿ ಸರಿಯಾಗಿ ಪಾಠ ಹೇಳದೇ ಸಂಬಳ ಪಡೆಯುತ್ತ ಕಾಲಹರಣ ಮಾಡುವವರು. ಇದರ ಬಿಸಿ ಇಂದಿಗೂ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡ ದೇಶದ ಶೇ 80ರಷ್ಟು ಮಕ್ಕಳ ಮೇಲೆ ಆಗುತ್ತಿದೆ. ಇದರಿಂದ ಸಮಾಜಕ್ಕೇ ತೊಂದರೆ.

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗುತ್ತಿವೆ. ಮಕ್ಕಳಿಗೆ ಶಿಕ್ಷಣದ ಹಕ್ಕು ದೊರೆತಿದೆ. ಉನ್ನತ ವಿದ್ಯಾಭ್ಯಾಸ ಹೊಂದಿದ ಶಿಕ್ಷಕರಿಗೆ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಅವಕಾಶಗಳು ಹೆಚ್ಚುತ್ತಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಲು ಶಿಕ್ಷಕರಲ್ಲೂ ಸ್ಪರ್ಧೆ ಹೆಚ್ಚಿದೆ. ವಾಸ್ತವ ಏನೆಂದರೆ ಈ ಸ್ಪರ್ಧೆ `ಸಂಬಳ ಹೆಚ್ಚುತ್ತದೆ ಎನ್ನುವ ಆಕರ್ಷಣೆಯಿಂದಷ್ಟೇ~ ಹುಟ್ಟಿದೆ.

ತರಗತಿಯೊಳಗಿನ ಮಗುವಿನ ಕಣ್ಣಲ್ಲಿ ಅದರ ಭವಿಷ್ಯದ ಬೆಳಕನ್ನು ಕಾಣುವುದು ಶಿಕ್ಷಕರ ಕರ್ತವ್ಯ ಎನ್ನುವಂತಹ ಮಾತುಗಳು ಅತಿ ಬುದ್ಧಿವಂತಿಕೆ (ತರಲೆ ಎನ್ನುವ ಅರ್ಥದಲ್ಲಿ) ಎನಿಸಿಕೊಳ್ಳುತ್ತಿವೆ. ಬೇರು ಒಣಗುತ್ತಿದೆ, ಆದರೆ ಎಲೆಗಳಿಗೆ ಹಸಿರು ಬಣ್ಣ ಬಳಿಯಲಾಗುತ್ತಿದೆ. ಹೀಗಾದರೆ ಶಿಕ್ಷಣ, ದೇಶ ಸುಧಾರಿಸೀತೇ?

(ಲೇಖಕರ ಮೊಬೈಲ್ 9945408359)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.