ಶುಕ್ರವಾರ, ಮಾರ್ಚ್ 5, 2021
21 °C

ಎನ್‌ಕೌಂಟರ್‌ಗೆ ಗ್ಯಾಂಗ್‌ಸ್ಟರ್‌ ನಯೀಮ್‌ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಕೌಂಟರ್‌ಗೆ ಗ್ಯಾಂಗ್‌ಸ್ಟರ್‌ ನಯೀಮ್‌ ಬಲಿ

ಹೈದರಾಬಾದ್‌(ಪಿಟಿಐ): ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಶಾದ್‌ನಗರದಲ್ಲಿ ಸೋಮವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಹಾಗೂ ವಿವಿಧ ಪ್ರಕರಣಗಳ ಸಂಬಂಧ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್‌ಸ್ಟರ್‌ ನಯೀಮುದ್ದೀನ್‌ ಬಲಿಯಾಗಿದ್ದಾನೆ.ಪೊಲೀಸರು ಮತ್ತು ಗ್ಯಾಂಗ್‌ಸ್ಟರ್‌ನ ಗುಂಪಿನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಗುಂಡಿಗೆ ನಯೀಮುದ್ದೀನ್‌ ಬಲಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.1993ರಲ್ಲಿ ಹೈದರಾಬಾದ್‌ನ ಕ್ರೀಡಾಂಗಣದಲ್ಲಿ ಐಪಿಎಸ್‌ ಅಧಿಕಾರಿ ಕೆ.ಎಸ್‌. ವ್ಯಾಸ್‌ ಅವರನ್ನು ನಕ್ಸಲರು ಹತ್ಯೆ ಮಾಡಿದ ಪ್ರಕರಣದಲ್ಲಿ ನಯೀಮುದ್ದೀನ್‌ ಭಾಗಿಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ವ್ಯಕ್ತಿ ಈತ.ಹಲವು ವರ್ಷಗಳಿಂದ ಕೊಲೆ, ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.