ಬುಧವಾರ, ಮೇ 25, 2022
29 °C

`ಎನ್‌ಸಿಡಿ' ರೂ. 750 ಕೋಟಿ ಸಂಗ್ರಹ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಶ್ರಿರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿ ಲಿ.(ಎಸ್‌ಟಿಎಫ್‌ಸಿ), `ಪರಿವರ್ತನೆಯಾಗದ-ಸುರಕ್ಷಿತ ಡಿಬೆಂಚರ್'(ಎನ್‌ಸಿಡಿ)ಗಳ ಮೂಲಕ ರೂ.750 ಕೋಟಿ ಸಂಗ್ರಹ ಗುರಿ ಇಟ್ಟುಕೊಂಡಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಜಿ.ರೇವಣಕರ್, ತಲಾ ರೂ.1000 ಮುಖಬೆಲೆಯ `ಎನ್‌ಸಿಡಿ'ಗಳನ್ನು ಜು. 16ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.ಪ್ರಸ್ತಾವಿತ ಹೂಡಿಕೆ ಯೋಜನೆಗೆ `ಕ್ರಿಸಿಲ್' ಸದ್ಯ ಕ್ರಿಸಿಲ್ ಎಎ/ಸುಸ್ಥಿರ(ಸ್ಟೇಬಲ್) ಹಾಗೂ `ಕೇರ್' ಸಂಸ್ಥೆ ಕೇರ್ ಎಎ+ ರೇಟಿಂಗ್ ನೀಡಿವೆ. `ಎನ್‌ಸಿಡಿ'ನಂತರದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ವಹಿವಾಟು ಪಟ್ಟಿ ಸೇರಲಿವೆ ಎಂದು ವಿವರಿಸಿದರು.ಈ ಯೋಜನೆಯಡಿ ಸಂಗ್ರಹವಾಗುವ ಹಣವನ್ನು ಸಾಲ ವಿತರಣೆ, ಬಂಡವಾಳ ಹೂಡಿಕೆ, ಹಳೆ ಸಾಲ ತೀರುವಳಿ, ವಹಿವಾಟು ನಿರ್ವಹಣೆ ವಿನಿಯೋಜನೆ ಸೇರಿದಂತೆ ಕಂಪೆನಿಯ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.