ಬೆಂಗಳೂರು: ಇಬ್ಬರು ಪತ್ನಿಯರು ತಮ್ಮ ಮೂತ್ರಪಿಂಡ (ಕಿಡ್ನಿ) ದಾನ ಮಾಡುವ ಮೂಲಕ ತಮ್ಮ ಗಂಡಂದಿರನ್ನು ಉಳಿಸಿಕೊಂಡ ವಿಶಿಷ್ಟ ಪ್ರಕರಣವಿದು.ತೀವ್ರ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಲು ಸಿದ್ಧರಿದ್ದರು. ಆದರೆ ಭಿನ್ನ ರಕ್ತದ ಗುಂಪು ಮತ್ತು ಇತರ ವೈದ್ಯಕೀಯ ಅಂಶಗಳ ಕಾರಣದಿಂದಾಗಿ ಪತ್ನಿಯ ಮೂತ್ರಪಿಂಡ ಪತಿಗೆಹೊಂದಾಣಿಕೆಯಾಗುತ್ತಿರಲಿಲ್ಲ.

ಈ ದಂಪತಿ ಮೂತ್ರಪಿಂಡ ಬದಲಿಗೆ ಕಾಯುತ್ತಿರುವ ದೀರ್ಘವಾದ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳಲು ಸಹ ಇಚ್ಛಿಸಲಿಲ್ಲ. ಮತ್ತೊಂದು ದಂಪತಿಗೂ ಅದೇ ಸಮಸ್ಯೆ ಇರುವುದನ್ನು ಕಂಡುಕೊಂಡರು. ಅದೃಷ್ಟವಶಾತ್ ಅವರ ನಡುವಿನ ವಿನಿಮಯಕ್ಕೆ ಅವಕಾಶವಿತ್ತು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅವರ ಮೂತ್ರಪಿಂಡಗಳ ಬದಲಾವಣೆಯಿಂದ ಪತಿಯರ ಜೀವ ಉಳಿಯಿತು.

ಪ್ರಕರಣದ ವಿವರ: ನಗರದಲ್ಲಿ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೆ.ಜಿ.ರಮೇಶ್ (56), 2004ರಿಂದಲೂ ತೀವ್ರ ಮೂತ್ರಪಿಂಡ ಸಮಸ್ಯೆಯಿಂದ ಬಳಲುತಿದ್ದರು. ಡಯಾಲಿಸಿಸ್ನಲ್ಲಿದ್ದ ಅವರು ಮೂತ್ರಪಿಂಡ ಬದಲಾವಣೆಯ ಸಾಧ್ಯತೆಗಳಿಗಾಗಿ ಅವಕಾಶ ನೋಡುತ್ತಿದ್ದರು. ಅವರ ಪತ್ನಿ ಪುಷ್ಪಲತಾ ಅವರಿಗೆ ಮೂತ್ರಪಿಂಡ ದಾನ ಮಾಡಲು ಒಪ್ಪಿಕೊಂಡರೂ ಅವರಿಬ್ಬರ ರಕ್ತದ ಗುಂಪು ಬೇರೆಯಾಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ.

‘ಆರು ತಿಂಗಳ ಹಿಂದೆ ಎನ್.ರವಿ ಹಾಗೂ ಅವರ ಪತ್ನಿ ಮಂಜು (ಹೆಸರು ಬದಲಾಯಿಸಲಾಗಿದೆ) ವಿನಿಮಯಕ್ಕೆ ಎದುರು ನೋಡುತ್ತಿರುವುದು ಗೊತ್ತಾಯಿತು. ಆಗ ನಾನು ರವಿಗೆ ಹಾಗೂ ರವಿ ಅವರ ಪತ್ನಿಯು ರಮೇಶ್ ಮೂತ್ರಪಿಂಡ ದಾನ ಮಾಡುವುದು ಎಂದು ನಿರ್ಧರಿಸಿದೆವು’ ಎಂದು ಪುಷ್ಪಲತಾ ಹೇಳುತ್ತಾರೆ.

45 ವರ್ಷದ ಮಂಜು ಕೂಡಾ ಅದೇ ಅಭಿಪ್ರಾಯ. ‘ಬದಲಿ ಮೂತ್ರಪಿಂಡ ದಾನಕ್ಕೆ ಹೀಗೂ ಒಂದು ಅವಕಾಶವಿರುತ್ತದೆ ಎಂಬುದು ಜನರಿಗೆ ಗೊತ್ತಾಗಲಿ ಎನ್ನುವುದು ನನ್ನ ಬಯಕೆ. ಮೂತ್ರಪಿಂಡ್ನ ದಾನ ಮಾಡಲು ನನಗೆ ಯಾವುದೇ ಸಮಸ್ಯೆಯಾಗಲಿಲ್ಲ’ ಎಂದು ಅವರು ಹೇಳುತ್ತಾರೆ.

ಪುಷ್ಪಲತಾ ಅವರಿದ ಮೂತ್ರಪಿಂಡ ಪಡೆದ ರವಿ ಕಳೆದ 8 ತಿಂಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿಸುವ ಅವರು, ‘ಈ ಮಾಹಿತಿಯನ್ನು ನಾವು ಯಾರೊಂದಿಗೂ ಹಂಚಿಕೊಂಡಿಲ್ಲ. ಬಹಳಷ್ಟು ಮಂದಿಗೆ ಮೂತ್ರಪಿಂಡ ದಾನದ ಬಗ್ಗೆ ಗೊತ್ತಿಲ್ಲ.

ನಾವು ಈಗ ಸಂತೋಷವಾಗಿದ್ದೇವೆ. ದೈಹಿಕವಾಗಿಯೂ ಹೆಚ್ಚು ಆರೋಗ್ಯವಂತರಾಗಿದ್ದೇವೆ’ ಎಂದು ಅವರು ನುಡಿಯುತ್ತಾರೆ.‘ಈ ಇಬ್ಬರೂ ಸಂಗಾತಿಯರ ಮೂತ್ರಪಿಂಡ ಬದಲಾವಣೆ ಒಂದೇ ಸಮಯದಲ್ಲಿ ನಡೆಸಲಾಯಿತು. ಏಕೆಂದರೆ ಒಂದು ಆದ ನಂತರ ಮತ್ತೊಬ್ಬರು ಹಿಂಜರಿಯುವ ಅಪಾಯವಿರುತ್ತದೆ. ಯಾವುದೇ ಗೊಂದಲಕ್ಕೆ ಅವಕಾಶವಿರಬಾರದು ಎಂದು ನಾವು ಒಂದೇ ದಿನ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು’ ಎಂದು ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ನ ವೈದ್ಯಕೀಯ ನಿರ್ದೇಶಕ ಡಾ.ಎಚ್.ಸುದರ್ಶನ್ ಬಲ್ಲಾಳ್ ವಿವರಿಸುತ್ತಾರೆ.

‘ಇಂತಹ ಮೂತ್ರಪಿಂಡ ದಾನ ಮತ್ತು ವಿನಿಮಯ ಪ್ರಕ್ರಿಯೆಗೆ ಮೂತ್ರಪಿಂಡ ಬದಲಿ ಸಮಿತಿಯಿಂದ ವಿಶೇಷ ಅನುಮತಿ ಪಡೆಯಬೇಕು. ದಂಪತಿಗಳನ್ನು ಪರಸ್ಪರ ಪರಿಚಯಿಸಿದ ನಂತರ ಅವರಿಬ್ಬರೂ ಬಹಳ ಸ್ನೇಹದಿಂದ ದೂರವಾಣಿಯಲ್ಲಿ ಮಾತನಾಡುವಂತಾದರು. ಇತರೆ ಯಾವುದೇ ಮೂತ್ರಪಿಂಡ ಬದಲಾವಣೆ ನಡೆದರೂ ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೌನ್ಸೆಲಿಂಗ್ ಅಗತ್ಯ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಈ ಶಸ್ತ್ರಚಿಕಿತ್ಸಾ ಕಾರ್ಯದಲ್ಲಿ ನಾಲ್ವರು ಸರ್ಜನ್ಗಳು, ನಾಲ್ವರು ಅರವಳಿಕೆ ತಜ್ಞರು, ನೆಫ್ರಾಲಜಿ ತಂಡ ಮತ್ತು ಹತ್ತಾರು ಮಂದಿ ನರ್ಸ್ಗಳು ಮತ್ತು ಇತರ ಸಿಬ್ಬಂದಿ ಒಳಗೊಂಡಿದ್ದರು ಎಂದು ತಿಳಿಸುತ್ತಾರೆ ಬಲ್ಲಾಳ್.
‘ಅಮೆರಿಕದಲ್ಲಿ ಈ ರೀತಿಯ ವಿನಿಮಯ ಮೂತ್ರಪಿಂಡ ಬದಲಿ ಸಾಮಾನ್ಯವಾಗಿದ್ದು ಭಾರತದಲ್ಲಿ ಮಾತ್ರ ಕಡಿಮೆ. ಇಂತಹ ಪರಸ್ಪರ ವಿನಿಮಯದ ಮೂತ್ರಪಿಂಡ ಬದಲಿಗೆ ನಾವು ಬಹಳಷ್ಟು ಪ್ರಯತ್ನಿಸುತ್ತಿದ್ದೇವೆ. ಈ ಬಾರಿ ಅದು ಸಾಧ್ಯವಾಗಿದೆ. ಇದನ್ನು ಆಸ್ಪತ್ರೆಗಳಲ್ಲಿ ಅಳವಡಿಸಿಕೊಂಡರೆ ಸಂಗಾತಿಯ ಮೂತ್ರಪಿಂಡ ಬದಲಿ ದಾನ ಮಾಡುವ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ಅವರು.

‘ಮೂತ್ರಪಿಂಡ ದಾನ ಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಇಬ್ಬರೂ ಸ್ತ್ರೀಯರೇ ಆಗಿರುವುದರಲ್ಲಿ ವಿಶೇಷವೇನೂ ಇಲ್ಲ. ತಮ್ಮ ಪ್ರೀತಿಪಾತ್ರರಿಗೆ ಯಾವುದೇ ಪುರುಷ ಮೂತ್ರಪಿಂಡ ದಾನ ಮಾಡಿದ ಪ್ರಕರಣ ಬಹಳ ಅಪರೂಪ. ಆದರೆ ಸ್ತ್ರೀಯರು ಅದರಲ್ಲಿ ಸದಾ ಮುಂದು. ಬಹಳಷ್ಟು ಪ್ರಕರಣಗಳಲ್ಲಿ ಪತ್ನಿಯಿಂದ ಪತಿಗೆ, ಸೋದರಿಯಿಂದ ಸೋದರನಿಗೆ, ಮಗಳಿಂದ ಸೋದರನಿಗೆ ಅಲ್ಲದೆ ಕೆಲವೊಮ್ಮೆ ತಾಯಿಯಿಂದ ಮಗನಿಗೆ ಕೂಡಾ ಮೂತ್ರಪಿಂಡ ದಾನ ನಡೆಯುತ್ತದೆ.

ಭಾರತದಲ್ಲಿ ಪುರುಷರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೂತ್ರಪಿಂಡ ದಾನ ಮಾಡುವುದನ್ನು ಪ್ರಾರಂಭಿಸಬೇಕಿದೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.