ಗುರುವಾರ , ಮೇ 19, 2022
20 °C

ಎಲ್ಲರೂ ಒಟ್ಟಾಗಿ ಬಾಳುವುದೇ ನಮ್ಮ ದೇಶದ ವೈಶಿಷ್ಟ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎಲ್ಲ ರೀತಿಯ ದೇಶ ವಿಭಜಕ ಶಕ್ತಿಗಳನ್ನು ಕೊನೆಗೊಳಿಸಬೇಕು. ಎಲ್ಲ ಧರ್ಮೀಯರು ಒಟ್ಟಾಗಿ ಬಾಳಬೇಕು. ಆಗಲೇ ವಿಶ್ವದ ಮುಂದೆ ನಮ್ಮದು ವಿಶಿಷ್ಟ ರಾಷ್ಟ್ರ ಎಂಬುದು ತಿಳಿಸಿದಂತಾಗುತ್ತದೆ~ ಎಂದು ರಾಜ್ಯಪಾಲ ಎಚ್. ಆರ್.ಭಾರದ್ವಾಜ್ ಅಭಿಪ್ರಾಯಪಟ್ಟರು.`ಕಾರಿಟಸ್ ಇಂಡಿಯಾ~ ಸಾಮಾಜಿಕ ಸೇವಾ ಸಂಸ್ಥೆಗೆ 50 ವರ್ಷ ತುಂಬಿದ ಪ್ರಯುಕ್ತ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವದ ಸಮಾರೋಪದಲ್ಲಿ ಮಾತನಾಡಿದರು.ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಮಾತನಾಡಿ, ` ಕಾನೂನು ತಿಳಿವಳಿಕೆ ನೀಡಲು ಕಾರಿಟಸ್ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು. ಬೆಂಗಳೂರು ಆರ್ಚ್ ಬಿಷಪ್ ಡಾ.ಬರ್ನಾರ್ಡ್ ಮೋರಸ್ ಮಾತನಾಡಿ, ಕೇಂದ್ರ ಯೋಜನಾ ಆಯೋಗವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಬಿಪಿಎಲ್ ಪಡಿತರ ಚೀಟಿಗಳ ವಿತರಣೆಯ ಮಾನದಂಡವನ್ನು ವಿವರಿಸಲಾಗಿದೆ.ನಗರ ಪ್ರದೇಶದಲ್ಲಿ 32 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ 25 ತಲಾದಾಯ ಇದ್ದರೆ ಅವರಿಗೆ ಬಿಪಿಎಲ್ ಕಾರ್ಡ್ ನೀಡಬೇಕಿಲ್ಲ ಎಂದು ವರದಿ ನೀಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.