ಸೋಮವಾರ, ಆಗಸ್ಟ್ 10, 2020
24 °C

ಎಲ್ಲಾ ಸಖನಿಗಾಗಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲಾ ಸಖನಿಗಾಗಿ!

ಮಾದಕ ಮೈಮಾಟ ಮತ್ತು ಕಂಠದಿಂದ ಸಂಗೀತಪ್ರಿಯರ ಎದೆಗೆ ಕಿಚ್ಚು ಹಚ್ಚುವ ಪಾಪ್ ಗಾಯಕಿ ಮಡೋನ್ನಾ, 53ರ ಹರೆಯದಲ್ಲೂ ಬಾಯ್‌ಫ್ರೆಂಡ್ ಖುಷಿಗಾಗಿ ಮೊನ್ನೆ ಮೊನ್ನೆ ಭರ್ಜರಿ ಟ್ರೀಟ್ ಕೊಟ್ಟರಂತೆ.ಸಂಗೀತ ಕಾರ್ಯಕ್ರಮ ನೀಡಲು ಆಮ್‌ಸ್ಟರ್‌ಡ್ಯಾಮ್‌ಗೆ ಎರಡು ದಿನಗಳ ಭೇಟಿ ನೀಡಿದ್ದ ಈ ಚಿರಯುವತಿ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ತನ್ನ ಹೊಸ ಸಖ ಬ್ರಾಹಿಮ್ ಜೈಬತ್ ಜೊತೆ ಸಮಯ ಕಳೆಯಲು ನಿರ್ಧರಿಸಿದರಂತೆ.ಎಲ್ಲಿ ಹೋಗೋದು, ಏನು ಮಾಡೋದು ಅಂತ ಯೋಚಿಸಿದಾಗ, ಸಿನಿಮಾ ವೀಕ್ಷಿಸುವ ಐಡಿಯಾ ಹೊಳೆಯಿತಂತೆ. ಆದರೆ ಎ್ಲ್ಲಲಿ ಹೋದರೂ ಮುತ್ತಿಕೊಳ್ಳುವ ಅಭಿಮಾನಿಗಳಿಂದ ಪಾರಾಗಿ ಸಿನಿಮಾ ನೋಡೋದು ಸಾಧ್ಯವಾ?ಹಾಗಿದ್ದರೆ? ಚಿತ್ರಮಂದಿರಕ್ಕೆ ಜನ ಬಂದರೆ ತಾನೆ ಈ ಸಮಸ್ಯೆ? ಅದಕ್ಕಾಗಿ  ಇಡೀ ಚಿತ್ರಮಂದಿರವನ್ನೇ ಕಾಯ್ದಿರಿಸಿದ ಮಡೋನಾ, ಹಾಯಾಗಿ ಸಖನೊಂದಿಗೆ ಸಿನಿಮಾ ವೀಕ್ಷಿಸಿದರಂತೆ.ಶಾಪಿಂಗ್‌ಗೆ ಹೋಗಲಿ, ಹಾಗೇ ಸುಮ್ಮನೆ ಮನೆಯಿಂದಾಚೆ ಕಾಲಿಡಲಿ ಅವರಿಗೆ ಅಭಿಮಾನಿಗಳನ್ನು ಸಂಭಾಳಿಸುವುದೇ ಕಷ್ಟವಾಗುತ್ತದಂತೆ. ಇಂತಿಪ್ಪ ಮಡೋನಾ ಚಿತ್ರಮಂದಿರಕ್ಕೆ ಹೋದರೆಂದರೆ ಬಿಡುತ್ತಾರಾ?ಅದಿರಲಿ, ಈ ಸಖತ್ ಟ್ರೀಟ್‌ನಿಂದ ಆ ಸಖನ ದಿಲ್‌ಖುಷ್ ಆಗಿರಬೇಕು! ಅಂದಹಾಗೆ ಅವರು ವೀಕ್ಷಿಸಿದ ಸಿನಿಮಾ `ದಿ ಅನ್‌ಟಚಬಲ್~

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.