ಚಿಕ್ಕಬಳ್ಳಾಪುರ:  ‘ಜಾತ್ರೆ ಬಂದ್ರೆ ಸಾಕು, ನಮಗೆಲ್ಲ ಭಾರಿ ಸಂಭ್ರಮ-ಸಂತೋಷ. ಡಾ. ರಾಜ್ಕುಮಾರ್ ಸಿನೆಮಾ ಪ್ರದರ್ಶಿಸುವ ಟೂರಿಂಗ್ ಟಾಕೀಸ್ ಬರುತ್ತಿದ್ದವು. ಕದ್ದುಮುಚ್ಚಿ ಟಿಕೆಟ್ ತೆಗೆದುಕೊಂಡು ಸಿನೆಮಾ ನೋಡುವುದೇ ಭಾರಿ ಮೋಜಿನ ಸಂಗತಿ.

ಸಿನೆಮಾ ನೋಡಿಕೊಂಡು ಮನೆಗೆ ಹೋಗುವವರೆಗೆ ರಸ್ತೆಯುದ್ದಕ್ಕೂ ಫೈಟಿಂಗ್, ಡ್ಯಾನ್ಸ್, ಹಾಡುಗಳದ್ದೇ ಮಾತು. ಸಿನೆಮಾದಲ್ಲಿ ಸಿಂಹ ಗರ್ಜಿಸಿದ್ದು, ಹುಲಿ ಓಡಿದ್ದು ಎಲ್ಲವನ್ನೂ ನೋಡಿ ಬೆಚ್ಚಿ ಬೀಳುತ್ತಿದ್ದೆವು. ಆಗಿನ ದಿನಗಳೇ ವಿಶಿಷ್ಟತೆಯಿಂದ ಕೂಡಿತ್ತು. ಈಗಲೂ ಪ್ರತಿ ವರ್ಷ ಜಾತ್ರೆ ನಡೆಯುತ್ತವೆ. ಆದರೆ ಟೂರಿಂಗ್ ಟಾಕಿಸ್ ಬರುತ್ತಿಲ್ಲ. ಜಾತ್ರೆಯಲ್ಲಿ ಕದ್ದುಮುಚ್ಚಿ ಸಿನಿಮಾ ನೋಡುವ ಸೊಗಸು ಸಿಗುತ್ತಿಲ್ಲ’.

‘ಜಾತ್ರೆಗೆ ಕರೆದೊಯ್ಯತ್ತಿದ್ದ ತಂದೆ-ತಾಯಿ ನಮ್ಮ ಕೈಗಳಿಗೆ ಹಚ್ಚೆ ಹಾಕಿಸುತ್ತಿದ್ದರು. ದೇವರ ಹೆಸರು ಇಲ್ಲವೇ ನಮ್ಮ ಹೆಸರಿನ ಹಚ್ಚೆ ಹಾಕಿಸುತ್ತಿದ್ದರು. ಒಂದು ವೇಳೆ ಜಾತ್ರೆಯಲ್ಲಿ ಕಳೆದು ಹೋದರೆ ಅಥವಾ ದೂರದ ಪ್ರದೇಶಕ್ಕೆ ತೆರಳಿ ಹಿಂದಿರುಗಲು ಸಾಧ್ಯವಾಗದಿದ್ದರೆ, ಹಚ್ಚೆಯೂ ನೆರವಿಗೆ ಬರುತ್ತದೆ ಎಂಬ ನಂಬಿಕೆ ಅವರಲ್ಲಿತ್ತು. ಹಚ್ಚೆ ಹಾಕಿಸಿಕೊಳ್ಳುವಾಗ ತುಂಬ ನೋವಾಗುತಿತ್ತು. ಆದರೆ ಹಚ್ಚೆ ಹಾಕಿಸಿಕೊಂಡ ನಂತರ ಅದನ್ನು ಎಲ್ಲರಿಗೂ ತೋರಿಸುವುದರಲ್ಲೇ ಬಲು ಉತ್ಸಾಹ ಇರುತಿತ್ತು. ಜಾತ್ರೆಯ ಭಾರಿ ಗೌಜುಗದ್ದಲದಲ್ಲಿ ತಪ್ಪಿಸಿಕೊಂಡು ಹೋಗುತ್ತೇವೆ ಎಂಬ ಭಯದಿಂದ ತಂದೆ-ತಾಯಿ ನಮ್ಮ ಕೈಗಳಿಗೆ ಪುಟ್ಟದಾದ ಹಗ್ಗವನ್ನು ಕಟ್ಟುತ್ತಿದ್ದರು. ಹೀಗಾಗಿ ನಮಗೆ ತಪ್ಪಿಸಿಕೊಳ್ಳಲು ಅವಕಾಶವೇ ಇರುತ್ತಿರಲಿಲ್ಲ’.

ಹೀಗೆ ಜಾತ್ರೆ ಕುರಿತು ಗತಕಾಲದ ದಿನಗಳನ್ನು ನೆನಪಿಸಿಕೊಂಡವರು ಹಿರಿಯ ಗ್ರಾಮಸ್ಥರು. ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ಜಾತ್ರೆ ವೀಕ್ಷಣೆಗೆ ಆಗಮಿಸಿದ್ದ ಹಿರಿಯ ಗ್ರಾಮಸ್ಥರು ದಶಕಗಳ ಹಿಂದಿನ ದೃಶ್ಯಗಳನ್ನು ಹೀಗೆ ಸ್ಮರಿಸಿಕೊಂಡರು. ಈಗಿನ ಜಾತ್ರೆಗೂ-ಆಗಿನ ಜಾತ್ರೆಗೂ ಭಾರಿ ವ್ಯತ್ಯಾಸವಿದೆ ಎಂದು ಹೇಳುವ ಅವರು, ‘ನಮ್ಮ ಕಾಲವೇ ಚಿನ್ನದಂಥ ಕಾಲ. ಈಗ ಸಾಕಷ್ಟು ಜನ ಕಂಡು ಬಂದರೂ ಸಪ್ಪೆ ಸಪ್ಪೆ ಕಾಣಿಸುತ್ತದೆ’ ಎನ್ನುತ್ತಾರೆ.

ಭೋಗನಂದೀಶ್ವರ ದೇವಾಲಯದ ಜಾತ್ರೆ ವೈಶಿಷ್ಟ್ಯವನ್ನು ತಮ್ಮದೇ ಆದ ಮಾತಿನಲ್ಲಿ ಉಲ್ಲೇಖಿಸುವ ಅವರು, ‘ಆಗಿನ ದಿನಗಳಲ್ಲಿ ಕಾಲಿಡಲು ಸಹ ಜಾಗ ಸಿಗುತ್ತಿರಲಿಲ್ಲ. ರಸ್ತೆಯುದ್ದಕ್ಕೂ ಸುಮಾರು 5 ಕಿ.ಮೀ.ಗೂ ದೂರದವರೆಗೆ ರಾಸುಗಳ ಜಾತ್ರೆ ನಡೆಯುತಿತ್ತು. ಈ ಜಾತ್ರೆಯಲ್ಲಿ ರಾಸು ಖರೀದಿಸಿಕೊಂಡು ಬರುತ್ತಿದ್ದ ಸಿರಿವಂತರಿಗೆ ಗ್ರಾಮದಲ್ಲಿ ಪ್ರತಿಷ್ಠೆ ಹೆಚ್ಚುತಿತ್ತು. ರಾಸುಗಳಿಗೆ ವಿಶೇಷ ಪೂಜೆ ಮಾಡಲಾಗುತಿತ್ತು’ ಎಂದು ಹೇಳುತ್ತಾರೆ.

‘ಆದರೆ ಈಗ ಕಾಲ ಬದಲಾಗಿದೆ. ಟೂರಿಂಗ್ ಟಾಕೀಸ್ಗಳು ಬರುತ್ತಿಲ್ಲ, ಹಚ್ಚೆ ಹಾಕುವವರು ಕಾಣಿಸುತ್ತಿಲ್ಲ, ಕಟ್ಟಿಗೆಯ ಬದಲು ಪ್ಲಾಸ್ಟಿಕ್ನ ಆಟಿಕೆ ವಸ್ತುಗಳು ಸಿಗುತ್ತವೆ. ಜಾತ್ರೆಗೆ ಮಾರಾಟಕ್ಕೆ ಬರುವ ರಾಸುಗಳ ಸಂಖ್ಯೆಯೂ ಕಡಿಮೆಯಾಗಿದೆ. ಕೊಳ್ಳುವವರು ಕೂಡ ವಿರಳವಾಗುತ್ತಿದ್ದಾರೆ.

ಈಚಿನ ಜಾತ್ರೆಗಳು ಒಂದು ಅಥವಾ ಎರಡು ವಾರಕ್ಕೆ ಕೊನೆಗೊಳ್ಳುತ್ತೇವೆ. ಆಗಿನ ಜಾತ್ರೆಗಳು ಒಂದೆರಡು ತಿಂಗಳುಗಳು ನಡೆಯುತ್ತಿದ್ದವು. ಜಾತ್ರೆಯಲ್ಲಿ ಫೋಟೋ ಸ್ಟುಡಿಯೋದಲ್ಲಿ ಚಿತ್ರ ತೆಗೆಸಿಕೊಂಡು ವಸ್ತುಗಳನ್ನು ಖರೀದಿಸುವುದು ಸಂಪ್ರದಾಯವಾಗಿತ್ತು. ಈಗ ಎಲ್ಲವೂ ಗಡಿಬಿಡಿಯಲ್ಲಿ ಜಾತ್ರೆಗಳು ನಡೆಯುತ್ತವೆ. ರಥೋತ್ಸವ ವೀಕ್ಷಿಸಿದ ಕೂಡಲೇ ಕೆಲವರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಅವಸರಪಡುತ್ತಾರೆ’ ಎಂದು ನಂದಿ ಗ್ರಾಮದ ರೈತ ರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಧುನಿಕದ ಭರಾಟೆಯಲ್ಲಿ ಮತ್ತು ಹಳೆಯ ತಲೆಮಾರಿನ ಜನರ ಅನುಪಸ್ಥಿತಿಯಲ್ಲಿ ಜಾತ್ರೆಯಲ್ಲಿ ಸಂಭ್ರಮವಿರುತ್ತದೆ. ಆದರೆ ಆಗಿನ ದಿನಮಾನಗಳಲ್ಲಿನ ಸೊಗಸು ಮತ್ತು ವಿಶೇಷತೆ ಕಂಡು ಬರುತ್ತಿಲ್ಲ. ಗೌಜುಗದ್ದಲದಲ್ಲಿ ಯಾಕೆ ಸುಮ್ಮನೆ ಆಯಾಸ ಪಡಬೇಕು ಎಂಬ ನೆಪ ಮಾಡಿಕೊಂಡು ಕೆಲವರು ಮನೆಯಲ್ಲಿ ಉಳಿದುಕೊಂಡು ಬಿಡುತ್ತಾರೆ’ ಎಂದು ಅವರು ತಿಳಿಸಿದರು.

‘ಆಯಾ ಗ್ರಾಮ ಮತ್ತು ಸ್ಥಳದ ಸಂಸ್ಕೃತಿ ಪರಿಚಯಿಸುವ ಜಾತ್ರೆಯಲ್ಲಿ ಎಲ್ಲವೂ ಇರಬೇಕು. ಗತಕಾಲದ ನೆನಪುಗಳೊಂದಿಗೆ ನಾವು ಪ್ರತಿ ವರ್ಷ ಜಾತ್ರೆಗೆ ಬರುತ್ತವೆ. ಪ್ರತಿ ವರ್ಷದ ಜಾತ್ರೆಯಲ್ಲಿ ಒಂದೊಂದೇ ವಿಶೇಷತೆ, ಅಂಶಗಳು ಕಳೆದುಹೋಗುತ್ತಿರುವುದು ಬೇಸರ ಮೂಡಿಸುತ್ತದೆ. ಮುಂದಿನ ದಿನಗಳಲ್ಲಿ ಜಾತ್ರೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದು ಅಚ್ಚರಿಯ ಜೊತೆಗೆ ಆತಂಕ ಸಹ ಮೂಡಿಸುತ್ತದೆ’ ಎಂದು ರೈತ ಕೃಷ್ಣಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.