ಸೋಮವಾರ, ಮೇ 17, 2021
31 °C

ಎಲ್‌ಟಿಟಿಇ ನಿಷೇಧ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ದೇಶದಲ್ಲಿ ಎಲ್‌ಟಿಟಿಇ ನಿಷೇಧ ಕುರಿತಾದ ಕೇಂದ್ರ ಸರ್ಕಾರ ಅಧಿಸೂಚನೆ ವಿರುದ್ಧ ಎಂಡಿಎಂಕೆ ನಾಯಕ ವೈಕೋ ಮತ್ತು ವಕೀಲ ಪಿ. ಪುಗಳೇಂದಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಕಾಯ್ದಿರಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಪರ ಮಂಡಿಸಿದ ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎಲಿಪ್ ಧರ್ಮರಾವ್ ಮತ್ತು ಎಂ. ವೇಣುಗೋಪಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿದೆ.1992ರಲ್ಲಿ ಕೇಂದ್ರ ಸರ್ಕಾರ ಎಲ್‌ಟಿಟಿಇಯನ್ನು ನಿಷೇಧಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಆ ನಿಷೇಧವನ್ನು ವಿಸ್ತರಿಸುತ್ತಿದೆ. ಕೇಂದ್ರದ ಈ ಕ್ರಮದಿಂದ ಅಮಾಯಕ ಜನರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತದೆ. ಆದ್ದರಿಂದ ಎಲ್‌ಟಿಟಿಇ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ವೈಕೋ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ. ರವೀಂದ್ರನ್, `ಕೇಂದ್ರದ ನಿಲುವು ಪ್ರಶ್ನಿಸಿರುವ ವೈಕೋ ಆ ಸಂಘಟನೆಗೆ ಸೇರಿಲ್ಲದ ಕಾರಣ; ಎಲ್‌ಟಿಟಿಇ ನಿಷೇಧ ತೆರವುಗೊಳಿಸಿ ಎಂದು ಕೇಳುವ ಹಕ್ಕು ಅವರಿಗಿಲ್ಲ. ಹಾಗಾಗಿ ಅವರ ಅರ್ಜಿ ವಜಾಗೊಳಿಸಬೇಕು~ ಎಂದು ಕೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.