ಗುರುವಾರ , ಮೇ 26, 2022
23 °C

ಎವರೆಸ್ಟ್ ಗೆ ಕರ್ನಾಟಕ ಕುವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಐಎಎನ್‌ಎಸ್): ಮೌಂಟ್ ಎವರೆಸ್ಟ್ ಪರ್ವತ ಏರಲು ಭಾರತದಿಂದ ಈ ವರ್ಷ ಹೆಚ್ಚಿನ ಸಂಖ್ಯೆ ಪರ್ವತಾರೋಹಿಗಳು ಆಸಕ್ತರಾಗಿದ್ದಾರೆ.ಮೌಂಟ್ ಎವರೆಸ್ಟ್ ಪರ್ವತವನ್ನು ಈಗಾಗಲೇ 20 ಸಲ ಹತ್ತಿ ಇಳಿದು ಜೀವಂತ ದಂತಕತೆಯಾಗಿರುವ ನೇಪಾಳದ ಪರ್ವತಾರೋಹಿ ಅಪಾ ಶೆರ್ಪಾ ಅವರ ನೆರವಿನೊಂದಿಗೆ ಕರ್ನಾಟಕದ ಸುನೀತಾ ಸಿಂಗ್ ಸೇರಿ ಎಂಟು ಮಂದಿ ಪುರುಷರು ಮತ್ತು ಮಹಿಳೆಯರು ವಿಶ್ವದ ಅತಿ ಎತ್ತರದ ಪರ್ವತವನ್ನು ಏರಲು ಸನ್ನದ್ಧರಾಗಿದ್ದಾರೆ.ದುಬಾರಿ ವೆಚ್ಚದ ಈ ಪರ್ವತಾರೋಹಣಕ್ಕೆ ಇದೇ ಮೊದಲ ಬಾರಿಗೆ ಭಾರತದಿಂದ ಇಷ್ಟೊಂದು ಸಂಖ್ಯೆಯ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಶೆರ್ಪಾ ಅವರು 21ನೇ ಬಾರಿಗೆ ಈ ಪರ್ವತಾರೋಹಣ ಮಾಡಿ ದಾಖಲೆ ನಿರ್ಮಿಸಲಿದ್ದಾರೆ. ಜಾರ್ಖಂಡ್, ಹರಿಯಾಣ, ಕರ್ನಾಟಕ ಈ ರಾಜ್ಯಗಳ ಮೂವರು ಮಹಿಳೆಯರು ಮತ್ತು ಐವರು ಪುರುಷರು ಈ ವರ್ಷದ ಬೇಸಿಗೆಯಲ್ಲಿ ಪರಿಸರ ಸ್ನೇಹಿ ಎವರೆಸ್ಟ್ ಪರ್ವತಾರೋಹಣ ಮಾಡಿ 8,848 ಮೀಟರ್ ಎತ್ತರಕ್ಕೆ ತಲುಪಲಿದ್ದಾರೆ.ಈ ರೀತಿಯ ಪರ್ವತಾರೋಹಣವನ್ನು 2008ರಲ್ಲಿ ನೇಪಾಳದ ದವಾ ಸ್ಟೀವನ್ ಶೆರ್ಪಾ ಆರಂಭಿಸಿದ್ದರು.  ದೆಹಲಿಯ ವಿದ್ಯಾರ್ಥಿ ಅರ್ಜುನ್ ಕಳೆದ ವರ್ಷ ಈ ಪರ್ವತದ ತುದಿ ತಲುಪಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.