ಭಾನುವಾರ, ಜೂನ್ 20, 2021
20 °C
ಮಾರ್ಚ್‌ 28 ರಿಂದ ಏ.9ರವರೆಗೆ ಪರೀಕ್ಷೆ– ಪೂರ್ವಭಾವಿ ಸಭೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಪ್ರಸ್ತಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾ.28 ರಿಂದ ಏ. 9ರ ವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಯನ್ನು   ವ್ಯವಸ್ಥಿತವಾಗಿ ನಡೆ ಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ ಅಧಿಕಾರಿಗಳಿಗೆ ಸೂಚಿ­ಸಿದರು.ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿ ದರು. ಪರೀಕ್ಷೆಗಳನ್ನು ಶಾಂತಿಯುತ ವಾಗಿ ನಡೆಸಲು ಪರೀಕ್ಷೆ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ೮೧ ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿ ಝರಾಕ್ಸ್ ಮತ್ತು ಟೈಪಿಂಗ್ ಸೆಂಟರ್‌ಗಳನ್ನು ಮುಚ್ಚಲು ಹಾಗೂ ಮೊಬೈಲ್ ಬಳಕೆ್ನು ನಿಷೇಧಿಸಲು ಆದೇಶಿಸಿದೆ. ಸಕಾಲಕ್ಕೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ೨೫ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು ಪುಸ್ತಕ, ಕ್ಯಾಲ್ಕುಲೇಟರ್ ಹಾಗೂ ಮೊಬೈಲ್‌ ತರುವುದು ಹಾಗೂ ವಿಷಯ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸದಂತೆ ನಿಷೇಧಿಸಬೇಕು. ಪರೀಕ್ಷೆ ಬರೆಯುವ ಎಲ್ಲ ಮಕ್ಕಳಿಗೆ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.ಎಸ್ಸೆಸ್ಸೆಲ್ಸಿ ಬೋರ್ಡ್‌ನ ನಿರ್ದೇಶನ ದಂತೆ ಪರೀಕ್ಷೆ ಬರೆಯುವ ಒಂದು ಕೊಠಡಿ ಒಳಗಡೆ ಕೇವಲ ೨೪ ಮಕ್ಕಳು ಮಾತ್ರ ಇರಬೇಕು. ಪ್ರತಿ ಸೆಂಟರ್‌ನ ಆರೋಗ್ಯ ರಕ್ಷಣೆಗೆ ಎಎನ್‌ಎಂ ಸಿಬ್ಬಂದಿ ನೇಮಕ ಮಾಡಲಾ ಗುವುದು ಹಾಗೂ ಒಬ್ಬ ಕಾನ್‌ಸ್ಟೇಬಲ್ ನೇಮಿಸಲಾಗು ವುದು ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಕೊಡ್ಲಿ ಮಾತ ನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳ ೨೦,೩೬೦ ಮಕ್ಕಳು ಪರೀಕ್ಷೆ ಬರೆಯಲಿದ್ದು, ಇದ ರಲ್ಲಿ ೧೦,೨೯೪ ಗಂಡು ಹಾಗೂ ೧೦,೦೬೬ ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ತಿಳಿಸಿದರು.ಸೂಕ್ಷ್ಮ ಕೇಂದ್ರಗಳು: ೮೧ ಪರೀಕ್ಷಾ ಕೇಂದ್ರಗಳ ಪೈಕಿ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರ, ಹಾನಗಲ್‌ ತಾಲ್ಲೂಕಿನ ಹೆರೂರ-ಕಲಕೇರಿ, ಹಿರೇಕೆರೂರು ತಾಲ್ಲೂಕಿನ ಡಿ.ಆರ್.ಟಿ. ಮತ್ತು ಸಿ.ಇ.ಎಸ್. ಬಾಲಕೀಯರ ಪ್ರೌಢ ಶಾಲೆ ಗಳು, ರಾಣೆಬೆನ್ನೂರ ತಾಲ್ಲೂಕಿನ ನಗರಸಭೆ ಬಾಲಕರ ಪ್ರೌಢಶಾಲೆ, ಗುಡಗೂರ ಪ್ರೌಢಶಾಲೆ ಮತ್ತು ತಿಮ್ಮನ ಕಟ್ಟಿ ಪ.ಪೂ.ಕಾಲೇಜು, ಸವಣೂರು ತಾಲ್ಲೂಕಿನ ಹೂವಿನ ಶಿಗ್ಲಿ ಮತ್ತು ಸವಣೂರ ಮಜೀದ್ ಪ.ಪೂ.ಕಾಲೇಜು ಹಾಗೂ ಹಾವೇರಿಯ ಸೇಂಟ್ ಆನ್ಸ್ ಪ್ರೌಢ ಶಾಲೆಯಲ್ಲಿ ಸ್ಥಾಪಿತವಾದ ಖಾಸಗಿ ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಘೋಷಿಸಿ, ಅಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಸಭೆಯಲ್ಲಿ  ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಡಿ.ತಹಶೀಲ್ದಾರ್‌, ಡಯಟ ಕಾಲೇಜಿನ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಎಸ್.­ರಾಘವೇಂದ್ರಸ್ವಾಮಿ ಹಾಗೂ ಎಲ್ಲ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.ಪರೀಕ್ಷಾ ವೇಳಾಪಟ್ಟಿ: ಮಾರ್ಚ್‌ ೨೮ ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಪತ್ರಿಕೆಗಳು, ಏ.೧ ರಂದು ಗಣಿತ, ಏ. ೩ರಂದು  ವಿಜ್ಞಾನ, ಏ. ೪ರಂದು ಹಿಂದಿ ಹಾಗೂ ಕನ್ನಡ,  ಏ. ೭ರಂದು ಸಮಾಜ ವಿಜ್ಞಾನ ಹಾಗೂ ಏ. ೯ರಂದು ಇಂಗ್ಲಿಷ್‌ ಮತ್ತು ಕನ್ನಡ ಪರೀಕ್ಷೆಗಳು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧೨.೪೫ರವರೆಗೆ ನಡೆಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.