ಶಿರಸಿ: `ಕಪ್ಪು ಬಂಗಾರ~ ಎಂದು ಕರೆ ಯಿಸಿಕೊಳ್ಳುವ ಕಾಳುಮೆಣಸಿಗೆ ಹಳದಿ ಬಂಗಾರದ ದರ ಬಂದಿದೆ. ಒಂದು ಕ್ವಿಂಟಲ್ ಕಾಳುಮೆಣಸಿನ ದರ ಗರಿಷ್ಠ ರೂ.42,600ಕ್ಕೆ ತಲುಪಿದ್ದು, ದಾಖಲೆ ಯಾಗಿದೆ. ಮಾರ್ಚ್ ಮೊದಲ ವಾರ ದಲ್ಲಿ ಗರಿಷ್ಠ ರೂ.36 ಸಾವಿರ ಬೆಲೆ ಕಂಡಿದ ಕಾಳುಮೆಣಸು 15 ದಿನಗಳಲ್ಲಿ ರೂ.6ಸಾವಿರ ಹೆಚ್ಚಳವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಸಾಂಬಾರ ಬೆಳೆಯಾದ ಕಾಳು ಮೆಣಸಿಗೆ ಹೆಚ್ಚಿದ ಬೇಡಿಕೆ, ಕಾಳು ಮೆಣಸು ಬೆಳೆಯುವ ಪ್ರಮುಖ ದೇಶಗಳಾದ ವಿಯಟ್ನಾಂ, ಬ್ರೆಝಿಲ್, ಮಲೇಶಿಯಾಗಳಲ್ಲಿ ಬೆಳೆ ಕುಸಿತ ಹಾಗೂ ಬೆಳೆಗೆ ರೋಗದ ಹಾವಳಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಮಾ.18ರಂದು ಶಿರಸಿ ಮಾರುಕಟ್ಟೆ ಯಲ್ಲಿ ಕನಿಷ್ಠ ರೂ.35ಸಾವಿರದಿಂದ ಗರಿಷ್ಠ ರೂ.41ಸಾವಿರ ತಲುಪಿದ್ದರೆ ಸೋಮವಾರ ಮತ್ತು ಮಂಗಳವಾರ ಗರಿಷ್ಠ ರೂ.42,600 ದರ ದಾಖಲಾ ಗಿದೆ.
ಹಿಂದಿನ ನಾಲ್ಕು ವರ್ಷಗಳಿಂದ ಕಾಳು ಮೆಣಸು ದರದಲ್ಲಿ ಏರಿಕೆ ಕಾಣುತ್ತಿದೆ. 2006-07ರಲ್ಲಿ ಕ್ವಿಂ.ಗೆ ರೂ.8ಸಾವಿರ ಇದ್ದ ಕಾಳುಮೆಣಸಿನ ಬೆಲೆ 2008ರಲ್ಲಿ ರೂ.12ಸಾವಿರಕ್ಕೆ ನೆಗೆದಿತ್ತು. 2011ರಲ್ಲಿ ಗರಿಷ್ಠ ರೂ.30ಸಾವಿರ ಗಡಿ ತಲುಪಿದ ಕಾಳುಮೆಣಸು ಇಂದು ಬಂಗಾರದ ಬೆಲೆ ಪಡೆದಿದೆ.

ನಗರದ ಪ್ರಮುಖ ಮಾರುಕಟ್ಟೆ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿ.ಎಸ್.ಎಸ್.) ಹಿಂದಿನ 2010ರಲ್ಲಿ 1378ಕ್ವಿಂ. ಹಾಗೂ 2011ರಲ್ಲಿ 1699ಕ್ವಿಂ. ಕಾಳು ಮೆಣಸು ಖರೀದಿಸಿದೆ. ಈ ವರ್ಷ ಈ ತನಕ 1500ಕ್ವಿಂ. ಆವಕ ಆಗಿದೆ ಎಂದು ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದರು.

ಕಾಳುಮೆಣಸು ಸರಿಯಾಗಿ ಸಂಸ್ಕರಿಸಿ ಸಂಗ್ರಹಿಸಿದರೆ ಹತ್ತು ವರ್ಷಗಳ ವರೆಗೆ ಮಾಲು ಕೆಡುವದಿಲ್ಲ. ಹೀಗಾಗಿ ಅನೇಕ ರೈತರು ಮಹಸೂಲನ್ನು ಸಂಗ್ರಹಿಸಿಟ್ಟು ದರಕ್ಕಾಗಿ ಕಾಯುತ್ತಾರೆ. ಟಿ.ಎಸ್.ಎಸ್.ನಲ್ಲಿ ರೈತರು ಸಂಗ್ರಹಿಸಿಟ್ಟಿದ್ದ 6ಸಾವಿರ ಚೀಲಗಳಲ್ಲಿ ಬಹಳಷ್ಟು ಈಗ ಮಾರುಕಟ್ಟೆ ಪ್ರವೇಶಿಸುತ್ತಿದೆ. ದರ ಇನ್ನಷ್ಟು ತೇಜಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲ ಬೆಳೆಗಾರರು ಮಾಲು ಸಂಗ್ರಹಿಸಿಟ್ಟಿದ್ದಾರೆ.

ಈ ವರೆಗೆ ಮಾರಾಟ ವಾದ ಕಾಳುಮೆಣಸು ಬಹುತೇಕ ಹಿಂದಿನ ಸಂಗ್ರಹವಾಗಿದ್ದು, ಹೊಸ ಉತ್ಪನ್ನ ಮುಂದಿನ ದಿನಗಳಲ್ಲಿ ಮಾರು ಕಟ್ಟೆಗೆ ಬರಬೇಕಾಗಿದೆ. `ಅಡಿಕೆ ತೋಟ ದಲ್ಲಿ ಉಪಬೆಳೆಯಾಗಿ ಬೆಳೆಯುವ ಕಾಳುಮೆಣಸು ಇತ್ತೀಚಿನ ದಿನಗಳಲ್ಲಿ ಹಳದಿ ರೋಗ ಹಾಗೂ ಸೊರಗು ರೋಗಗಳಿಗೆ ತುತ್ತಾಗಿ ದೊಡ್ಡ ಪ್ರಮಾಣದಲ್ಲಿ ಬಳ್ಳಿ ನಾಶವಾಗಿದೆ. ರೋಗಮುಕ್ತವಾಗಿರುವ ಬಳ್ಳಿಗಳು ಸಹ ಕಡಿಮೆ ಇಳುವರಿ ನೀಡಿದ್ದು, ಬೆಳೆ ಕುಸಿತಕ್ಕೆ ಕಾರಣವಾಗಿದೆ.

ಹಿಂದಿನ ವರ್ಷ 75ಕೆಜಿಯಷ್ಟು ಇಳುವರಿ ಪಡೆದಿದ್ದ ಬಳ್ಳಿಯಲ್ಲಿ ಈ ಬಾರಿ 25ಕೆಜಿ ಮಾತ್ರ ಬೆಳೆ ಬಂದಿದೆ~ ಎನ್ನುತ್ತಾರೆ ಬೆಳೆಗಾರ ಸಲೀಂ ಸಾಬ್. ಗಗನಕ್ಕೆ ಏರಿರುವ ಕಾಳುಮೆಣಸಿನ ದರ ಕಂಡು ವ್ಯಾಪಾರಸ್ಥರು ಸಹ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅಸ್ಥಿರತೆ ದರ ಒಮ್ಮೆಲೇ ಕುಸಿದರೆ ಎಂಬ ಆತಂಕ ವ್ಯಾಪಾರಸ್ಥರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.