ಭಾರತಿ ಏರ್ಟೆಲ್ ಇದೀಗ ಯುವಜನತೆಯ ಫುಟ್ಬಾಲ್ ಕನಸನ್ನು ನನಸಾಗಿಸಲು ಹೊರಟಿದೆ.16 ವರ್ಷದೊಳಗಿನವರಿಗಾಗಿ `ಏರ್ಟೆಲ್ ರೈಸಿಂಗ್ ಸ್ಟಾರ್ಸ್~ ಎಂಬ `ಫುಟ್ಬಾಲ್ ಟ್ಯಾಲೆಂಟ್ ಹಂಟ್~ ಸ್ಪರ್ಧೆ ಹಮ್ಮಿಕೊಂಡಿದೆ.

ಜುಲೈನಿಂದ ಆರಂಭಗೊಂಡಿರುವ ಈ ಟ್ಯಾಲೆಂಟ್ ಹಂಟ್ ಆಗಸ್ಟ್ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಭಾರತದ 16 ನಗರಗಳ 10,000 ಯುವ ಫುಟ್ಬಾಲ್ ಆಟಗಾರರನ್ನು ಒಳಗೊಳ್ಳಲಿದೆ.

ಸ್ಪರ್ಧೆಯಲ್ಲಿ ಆಯ್ಕೆಗೊಂಡ 48 ಆಟಗಾರರನ್ನು 4 ತಂಡಗಳಾಗಿ ರಚಿಸಿ ಅವರಲ್ಲೂ 12 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಈ 12 ಯುವ ಸ್ಪರ್ಧಿಗಳಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಸಾಕರ್ ಸ್ಕೂಲ್ನಲ್ಲಿ ತರಬೇತಿ ಪಡೆಯುವ ಅವಕಾಶವನ್ನೂ ಏರ್ಟೆಲ್ ನೀಡಿದೆ.

ಪ್ರತಿಯೊಬ್ಬ ಆಟಗಾರನಿಗೂ ತನ್ನ ಆಟ ಕೌಶಲವನ್ನು ಪ್ರದರ್ಶಿಸುವ ಹಂಬಲವಿರುತ್ತದೆ. ಅದಕ್ಕಾಗಿ ಫುಟ್ಬಾಲ್ನಲ್ಲಿ ಆಸಕ್ತಿಯಿರುವ ಸ್ಪರ್ಧಿಗಳಿಗೆ ಇದೊಂದು ಉತ್ತಮ ಅವಕಾಶ ಎಂದಿದೆ ಕಂಪೆನಿ. ಅಂತಿಮವಾಗಿ ಆರು ದಿನಗಳ ಶಿಬಿರ ಮತ್ತು ಆಯ್ಕೆಯ ಪ್ರಕ್ರಿಯೆ ಇದ್ದು, ಮ್ಯಾಂಚೆಸ್ಟರ್ ಯುನೈಟೆಡ್ನ ತರಬೇತುದಾರರು ಸ್ಪರ್ಧಿಗಳನ್ನು ಆರಿಸುತ್ತಾರೆ.

ಬೆಂಗಳೂರಿನ ಬಿಡಿಎಫ್ಎ ಸ್ಟೇಡಿಯಂನಲ್ಲಿ ಆಗಸ್ಟ್ 25 ಮತ್ತು 26ರಂದು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.