ಬುಧವಾರ, ಮೇ 12, 2021
26 °C

ಏಲಕ್ಕಿ ಒಣಗಿಸಲು ಹೊಸ ಯಂತ್ರ

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

ಏಲಕ್ಕಿ ಒಣಗಿಸಲು ಹೊಸ ಯಂತ್ರ

ಶನಿವಾರಸಂತೆ:  ಏಲಕ್ಕಿ ಬೆಳೆಗಾರರಿ ಗೊಂದು ಸಂತಸದ ಸುದ್ದಿ! ಇನ್ನು ಮುಂದೆ ಮಳೆಗಾಲದಲ್ಲಿ ಅಕಾಲ ಮಳೆ ಸಂದರ್ಭ ಏಲಕ್ಕಿ ಕಾಯಿ ಒಣಗಿಸುವುದು ಹೇಗೆಂಬ ಚಿಂತೆ ಬೇಡ.ರೈತ ವಿಜ್ಞಾನಿಯೊಬ್ಬರು ಸಂಬಾರ ಮಂಡಳಿಯವರ ಕೋರಿಕೆ ಯಂತೆ ಮಲೆನಾಡಿನ ಬೆಳೆಗಾರರಿಗಾ ಗಿಯೇ ನೂತನ ಏಲಕ್ಕಿ ಕಾಯಿ ಒಣಗಿ ಸುವ ಯಂತ್ರವನ್ನು ನಿರ್ಮಿಸಿದ್ದಾರೆ.ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ರೈತ ಎ.ಡಿ.ಮೋಹನ್‌ಕುಮಾರ್ ಸಣ್ಣ, ಮಧ್ಯಮ ಹಾಗೂ ದೊಡ್ಡ ಬೆಳೆಗಾರರಿಗೆ ಅನುಕೂಲವಾಗುವಂತಹ ಏಲಕ್ಕಿ ಕಾಯಿ ಒಣಗಿಸುವ ಯಂತ್ರವನ್ನು ನಿರ್ಮಿಸಿ ದ್ದಾರೆ. ಮುಖ್ಯವಾಗಿ ಏಲಕ್ಕಿ ಒಣಗಿಸುವ ಯಂತ್ರವಾಗಿದ್ದರೂ ಮಳೆಗಾಲದಲ್ಲಿ ಕಾಫಿ,ಕಾಳು ಮೆಣಸು ಇತ್ಯಾದಿ ಬೆಳೆ ಗಳನ್ನೂ ಈ ಯಂತ್ರದಲ್ಲಿ ಒಣಗಿಸಬಹು ದಾಗಿದೆ.ಈ ಯಂತ್ರವನ್ನು ಎಲ್ಲಿಗೆ ಬೇಕಾ ದರೂ ಕೊಂಡೊಯ್ಯಬಹುದು.ಇಂಥಾ ಸ್ಥಳವೇ ಆಗಬೇಕೆಂದೇನಿಲ್ಲ.ಯಂತ್ರ ತಯಾರಿಸಲು ಆ್ಯಂಗ್ಲರ್ ಫ್ರೇಂ, ಶೀಟ್, ತಡೆ ಹಿಡಿಯಲು ಗ್ಲಾಸ್, ಹೊರಭಾಗಕ್ಕೆ ಶಾಖ ತಗುಲದಂತೆ ಎ.ಸಿ. ಅಥವಾ ಸಿಮೆಂಟ್ ಶೀಟ್, ಏಲಕ್ಕಿ ತೇವಾಂಶ ಹೊರಹೋಗಲು ಫ್ಯಾನ್ ಅಳ ವಡಿಸಲಾಗಿದೆ.14-16 ಗಂಟೆ ಅವಧಿ ಯಲ್ಲಿ 25 ಕೆಜಿ ಹಸಿ ಏಲಕ್ಕಿ ಒಣಗಿಸ ಬಹುದು. ಉಷ್ಣತೆಯನ್ನು 60-80 ಡಿಗ್ರಿ ಸೆಂಟಿ ಗ್ರೇಡ್ ಒಳಗೆ ಸರಿದೂಗಿಸ ಬಹುದು. ಒಣಗಿಸಲು ಸೌದೆ ಇಲ್ಲವೇ ಗ್ಯಾಸ್ ಬಳಸಬಹುದಾಗಿದೆ. 25 ಕೆಜಿ ಏಲಕ್ಕಿ ಒಣಗಿಸಲು 10-15 ಕೆಜಿ ಸೌದೆ ಬೇಕು. ಗ್ಯಾಸ್ ಆದರೆ ಒಂದು ಸಿಲಿಂಡರ್ ಬೇಕಾಗುತ್ತದೆ. ಯಂತ್ರ ತಯಾರಿಸಲು 31,500 ರೂಪಾಯಿ ಖರ್ಚು ಬರುತ್ತದೆ. ಈ ಯಂತ್ರ ಸಂಬಾರ ಮಂಡಳಿಯಿಂದ ಮಾನ್ಯತೆ ಪಡೆದಲ್ಲಿ ಬೆಳೆಗಾರರು ಸಹಾಯಧನ ಪಡೆಯುವ ಸೌಲಭ್ಯವಿದೆ ಎನ್ನುತ್ತಾರೆ ಮೋಹನ್‌ಕುಮಾರ್.ಈ ಹಿಂದೆ ಮೋಹನ್‌ಕುಮಾರ್ ಮಲೆ ನಾಡಿನ ಬೆಳೆಗಾರರಿಗೆ ಅನುಕೂಲ ವಾಗುವಂತೆ ಏಲಕ್ಕಿ ಕಾಯಿ ಒಣಗಿಸುವ ಗೂಡನ್ನೂ ನಿರ್ಮಿಸಿದ್ದರು. ಆದರೆ, ಅದು ಸ್ವಂತ ತೋಟದಲ್ಲಿನ ಕಟ್ಟಡದಲ್ಲಿ ಗೂಡನ್ನು ನಿರ್ಮಿಸಿದ್ದು, ತೋಟದ ಕಟ್ಟಿಗೆಯನ್ನೇ ಬಳಸಿ, ಏಲಕ್ಕಿ ಕಾಯಿ ಒಣಗಿಸುವುದಾಗಿತ್ತು. ಮಳೆ ಹೆಚ್ಚು ಬೀಳುವ ಮಲೆನಾಡು ಪ್ರದೇಶಗಳಿಗೆ ಹೇಳಿ ಮಾಡಿಸಿದಂಥ ಅತ್ಯುಪಯೋಗಿ ಗೂಡಾಗಿತ್ತು. 50ಸಾವಿರ ರೂಪಾಯಿ ವೆಚ್ಚದ ಆ ಗೂಡು ದೊಡ್ಡ ಬೆಳೆಗಾರರಿಗೆ ಅನುಕೂಲಕರವಾಗಿತ್ತು. ಇದೀಗ ಮೋಹನ್‌ಕುಮಾರ್ ಸಣ್ಣ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿ ಯಲ್ಲಿಟ್ಟುಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಏಲಕ್ಕಿ ಕಾಯಿ ಒಣಗಿಸುವ ಯಂತ್ರವನ್ನು ನಿರ್ಮಿಸಿದ್ದಾರೆ. ಬೆಳೆಗಾರರ ಇಚ್ಛೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಮಿಸಬಹುದೆನ್ನುತ್ತಾರೆ.

ಮೋಹನ್‌ಕುಮಾರ್ ಸದಾ ಬೆಳೆಗಾರರಿಗೆ ಅನುಕೂಲವಾಗುವಂಥ ಅನ್ವೇಷಣೆ ಮಾಡುವ ಮನೋಭಾವ. ಈ ಹಿಂದೆ ಇವರು ನಿಮಿಷ ಮಾತ್ರದಲ್ಲಿ ಕೋಳಿ ಪುಕ್ಕ ಕಿತ್ತೊಗೆದು ಸ್ವಚ್ಛ ಗೊಳಿಸುವ ಯಂತ್ರ, ಗೊಂಚಲಿ ನಿಂದ ಕಾಳು ಮೆಣಸು ಬೇರ್ಪಡಿಸುವ ಯಂತ್ರ, ಗುಜರಿ ಅಂಗಡಿ ಸೇರಬೇಕಾದ ಯೆಜ್ಡಿ ಮೋಟಾರ್ ಬೈಕ್‌ಗೆ ಮೋಟಾರ್ ಅಳ ವಡಿಸಿ, ಸ್ಪಿಂಕ್ಲರ್‌ಗಳ ಮೂಲಕ ತೋಟ- ಗದ್ದೆಗಳಿಗೆ ನೀರು ಹಾಯಿಸುವ ಯಂತ್ರ, ಹೀರೋ ಹೊಂಡಾ ಬೈಕಿಗೆ 2 ಬೇರಿಂಗ್ ಬ್ಲಾಕ್, ಪುಲ್ಲಿ ಬಳಸಿ ಆಯಸ್ಕಾಂತ ಸಂಪರ್ಕದಿಂದ ತೋಟಗಳಿಗೆ ಸ್ಪ್ರೆ ಮಾಡುವ ಯಂತ್ರ ಹಾಗೂ ಕಡಿಮೆ ಖರ್ಚಿನ ಅಗ್ಗಿಷ್ಟಿಕೆಯನ್ನು ನಿರ್ಮಿಸಿದ್ದರು.ಮೋಹನ್‌ಕುಮಾರ್ ನೂತನವಾಗಿ ನಿರ್ಮಿಸಿರುವ ಏಲಕ್ಕಿ ಕಾಯಿ ಒಣಗಿಸುವ ಯಂತ್ರದ ಬಗ್ಗೆ ಮಾಹಿತಿ ಬಯಸುವ ವರು 9448919518 ಸಂಪರ್ಕಿಸ ಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.