ಸೋಮವಾರ, ಮೇ 23, 2022
30 °C

ಏಶಿಯನ್ ಸ್ಪರ್ಧೆ: ರಜತ ಗೆದ್ದ ಜುಡೋ ಪಟುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಲೆಬನಾನ್‌ನಲ್ಲಿ ಇತ್ತೀಚೆಗೆ ನಡೆದ ಐದನೆಯ ಯುವ ಏಶಿಯನ್ ಜುಡೋ ಚಾಂಪಿಯನ್‌ಷಿಪ್ ಹಾಗೂ 12ನೇ ಏಶಿಯನ್ ಜೂನಿಯರ್ ಜುಡೋ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿ ಕ್ರೀಡಾ ವಸತಿ ನಿಲಯದ ಮಹಿಳಾ ಜುಡೋ ಪಟುಗಳು ರಜತ ಪದಕ ಗೆದ್ದಿದ್ದಾರೆ.48 ಕೆಜಿ ವಿಭಾಗದಲ್ಲಿ ಕುತುಜಾ ಮುಲ್ತಾನಿ, 63 ಕೆಜಿ ವಿಭಾಗದಲ್ಲಿ ಸಂಗೀತಾ ಬಿ.ಆರ್. ಅವರು ರಜತ ಪದಕ ಗೆಲ್ಲುವ ಮೂಲಕ ನವೆಂಬರ್‌ನಲ್ಲಿ ದಕ್ಷಿಣಾ ಆಫ್ರಿಕಾದ ಕೆಪ್‌ಟೌನ್‌ನಲ್ಲಿ ನಡೆಯುವ ವಿಶ್ವ ಜುಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.ತ್ರಿವೇಣಿ ಎಂ.ಎನ್ ಹಾಗೂ ಜಿತೇಂದ್ರ ಸಿಂಗ್ ತರಬೇತಿದಾರರಾಗಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.