ಮೀರ್ಪುರ (ಪಿಟಿಐ): ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿದೆ ಬಾಂಗ್ಲಾದೇಶ. ಲೀಗ್ ಹಂತದಲ್ಲಿ ಗರ್ಜಿಸಿರುವ ಹುಲಿಗಳ ನಾಡಿನ ಪಡೆಯು ಗುರುವಾರ ಏಷ್ಯಾಕಪ್ ಕ್ರಿಕೆಟ್ನ ಫೈನಲ್ನಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡುವ ಕನಸು ಕಂಡಿರುವುದು ಸಹಜ.

ಆತಿಥೇಯ ಬಾಂಗ್ಲಾದವರು ಬಯಸಿದಂತೆಯೇ ಎಲ್ಲವೂ ನಡೆದರೆ ಈ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಅದೊಂದು ಸುವರ್ಣಾಕ್ಷರದಲ್ಲಿ ಬರೆದಿಡುವ ಘಟನೆ ಎನಿಸುತ್ತದೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶ ಪಡೆದ ನಂತರದಿಂದ ಯಾವುದೇ ದೊಡ್ಡ ಪ್ರಶಸ್ತಿಯನ್ನು ಬಾಂಗ್ಲಾ ಗೆದ್ದಿಲ್ಲ. ಆದ್ದರಿಂದ ಏಷ್ಯಾಕಪ್ ಅದಕ್ಕೆ ಹೆಮ್ಮೆಯ ಗರಿಯನ್ನು ಮೂಡಿಸುವಂಥ ಟ್ರೋಫಿ ಆಗಲಿದೆ.

ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಮುನ್ನುಗ್ಗಿರುವ ಅದು ಇನ್ನೊಂದು ಯಶಸ್ಸಿನ ದಾಪುಗಾಲು ಇಟ್ಟರೆ ಸಾಕು ಅದ್ಭುತವೊಂದು ನಡೆದು ಹೋಗುತ್ತದೆ. ಏಷ್ಯಾದ ಕ್ರಿಕೆಟ್ ಶಕ್ತಿಗಳನ್ನೆಲ್ಲಾ ಮೆಟ್ಟಿನಿಂತ ತಂಡ ಎನ್ನುವ ಗೌರವವೂ ಸಲ್ಲುತ್ತದೆ.

ವಿಶ್ವಕಪ್ ಚಾಂಪಿಯನ್ ಭಾರತ ಹಾಗೂ ರನ್ನರ್ ಅಪ್ ಶ್ರೀಲಂಕಾ ತಂಡವನ್ನು ಲೀಗ್ ಹಂತದಲ್ಲಿ ಮಣಿಸಿದ ಬಾಂಗ್ಲಾ ವಿಶ್ವಾಸ ಈಗ ಇಮ್ಮಡಿಯಾಗಿದೆ. ಮಹೇಂದ್ರ ಸಿಂಗ್ ದೋನಿ ನೇತೃತ್ವದ ಪಡೆಯ ವಿರುದ್ಧ ಹಾಗೂ ಸಿಂಹಳೀಯರ ಎದುರು ಐದು ವಿಕೆಟ್ಗಳ ಅಂತರದಿಂದ ವಿಜಯ ಸಾಧಿಸಿದ್ದು ಬಾಂಗ್ಲಾ ಫೈನಲ್ಗೆ ತಲುಪಲು ಕಾರಣ.

ಕಳೆದ ಬಾರಿಯ ಚಾಂಪಿಯನ್ ಭಾರತದ ಫೈನಲ್ ಕನಸನ್ನು ನುಚ್ಚುನೂರು ಮಾಡಿದ್ದು ಬಾಂಗ್ಲಾ. ನಾಲ್ಕು ಬಾರಿ ಚಾಂಪಿಯನ್ ಆಗಿ ಮೆರೆದಿದ್ದ ಶ್ರೀಲಂಕಾ ಒಂದೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತದ ಆಸೆ ಈಡೇರಿಸಲು ಲಂಕಾ ಕೊನೆಯ ಪಂದ್ಯ ಗೆಲ್ಲಬೇಕಿತ್ತು. ಅದಕ್ಕೂ ಆಪತ್ತು ತಂದೊಡ್ಡಿದರು ರಹೀಮ್ ಬಳಗದವರು.

ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅದು ನಿರಾಸೆ ಹೊಂದಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಲೀಗ್ ಹಂತದಲ್ಲಿನ ಸೋಲಿಗೆ ಬಾಂಗ್ಲಾ ಫೈನಲ್ನಲ್ಲಿ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಅವಕಾಶ ದೊರೆತಿದೆ. ಅದನ್ನು ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಆಗಿಸಿಕೊಳ್ಳುತ್ತಾರೆ ಎನ್ನುವುದು ಆಸಕ್ತಿ ಕೆರಳಿಸಿರುವ ಪ್ರಶ್ನೆ.

ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಬಾಕಿ ಎಲ್ಲ ತಂಡಗಳಿಗಿಂತ ಉತ್ತಮ ಪ್ರದರ್ಶನ ನೀಡಿರುವ ಬಾಂಗ್ಲಾದೇಶದವರು ಅಂತಿಮ ಹಣಾಹಣಿಯಲ್ಲಿ ತಮ್ಮೆಲ್ಲ ಸಾಮರ್ಥ್ಯ ಒಗ್ಗೂಡಿಸಿ ಹೋರಾಡಲು ಸಜ್ಜಾಗಿದ್ದಾರೆ. `ಫೈನಲ್ ತಲುಪಿದ್ದು ದೊಡ್ಡ ಸಾಧನೆ.

ಆದರೆ ಅಷ್ಟಕ್ಕೆ ಸಮಾಧಾನವಿಲ್ಲ. ನಾಳೆಯ ದಿನ ನಮ್ಮದಾದರೆ ಕ್ರಿಕೆಟ್ ಕ್ಷೇತ್ರದಲ್ಲಿ ಎಲ್ಲರೂ ನಮ್ಮನ್ನು ಗೌರವದಿಂದ ಕಾಣುತ್ತಾರೆ~ ಎಂದು ಆತಿಥೇಯ ತಂಡದ ತಮೀಮ್ ಇಕ್ಬಾಲ್ ಹೇಳಿದ್ದಾರೆ. ಆದರೆ ಬಾಂಗ್ಲಾ ಆಸೆಯ ಮೇಲೆ ತಣ್ಣೀರು ಸುರಿಯುವುದು ಮಿಸ್ಬಾ ಉಲ್ ಹಕ್ ನಾಯಕತ್ವದ ಪಾಕ್ ತಂಡದ ಗುರಿ.

ತಂಡಗಳು

ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ಅಬ್ದುರ್ ರೆಹಮಾನ್, ಐಜಾಜ್ ಚೀಮಾ, ಅಸದ್ ಶಫೀಕ್, ಅಜರ್ ಅಲಿ, ಹಮ್ಮಾದ್ ಅಜಾಮ್, ಮೊಹ್ಮದ್ ಹಫೀಜ್, ನಾಸೀರ್ ಜಮ್ಶೇದ್, ಸಯೀದ್ ಅಜ್ಮಲ್, ಸರ್ಫರಾಜ್ ಅಹ್ಮದ್, ಶಾಹೀದ್ ಅಫ್ರಿದಿ, ಉಮರ್ ಅಕ್ಮಲ್, ಉಮರ್ ಗುಲ್, ವಹಾಬ್ ರಿಯಾಜ್ ಮತ್ತು ಯೂನಿಸ್ ಖಾನ್.

ಬಾಂಗ್ಲಾದೇಶ: ಮುಶ್ಫಿಕುರ್ ರಹೀಮ್ (ನಾಯಕ), ಅಬ್ದುರ್ ರಜಾಕ್, ಅನಾಮುಲ್ ಹಕ್, ಇಲ್ಯಾಸ್ ಸನ್ನಿ, ಇಮ್ರುಲ್ ಕಯೇಸ್, ಜಹುರುಲ್ ಇಸ್ಲಾಮ್, ಮಹ್ಮುದುಲ್ಲಾ, ಮಶ್ರಫೆ ಮೋರ್ತಜಾ, ನಾಸೀರ್ ಹುಸೇನ್, ನಜೀಮುದ್ದೀನ್, ನಜ್ಮುಲ್ ಹುಸೇನ್, ಶಫಿವುಲ್ ಇಸ್ಲಾಮ್, ಶಹಾದತ್ ಹುಸೇನ್, ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್.

ಅಂಪೈರ್ಗಳು: ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ) ಮತ್ತು ಇಯಾನ್ ಗೌಲ್ಡ್ (ಇಂಗ್ಲೆಂಡ್).
ಮ್ಯಾಚ್ ರೆಫರಿ: ಡೇವಿಡ್ ಬೂನ್ (ಆಸ್ಟ್ರೇಲಿಯಾ).
ಪಂದ್ಯ ಆರಂಭ (ಭಾರತೀಯ ಕಾಲಮಾನ): ಮಧ್ಯಾಹ್ನ 1.30ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.