ಐಎಂ ಅಪಾಯಕಾರಿ ಸಂಘಟನೆ

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಐಎಂ ಅಪಾಯಕಾರಿ ಸಂಘಟನೆ

Published:
Updated:

ವಾಷಿಂಗ್ಟನ್, (ಪಿಟಿಐ): ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯನ್ನು ಅಮೆರಿಕ ಸರ್ಕಾರವು ಭಾರತೀಯ ಮೂಲದ ಅಪಾಯಕಾರಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದೆ.ಭಾರತದ ಗಡಿಯೊಳಗೆ ಈ ಸಂಘಟನೆಯ ಇದುವರೆಗೆ ಅನೇಕ ದಾಳಿಯನ್ನು ನಡೆಸಿ ನೂರಾರು ನಾಗರಿಕರ ಸಾವಿಗೆ ಕಾರಣವಾಗಿದೆ ಹಾಗೂ ಕಳೆದ ಜುಲೈ 13ರಂದು ಮುಂಬೈಯಲ್ಲಿ ನಡೆದ ಬಾಂಬ್ ದಾಳಿಗೂ ಇದೇ ಸಂಘಟನೆ ಕಾರಣವೆಂಬ ಶಂಕೆ ಇದೆ ಎಂದು ಅಮೆರಿಕದ ವಿದೇಶಾಂಗ ಖಾತೆಯ ವಕ್ತಾರ ಮಾರ್ಕ್ ಟೋನರ್  ತಿಳಿಸಿದ್ದಾರೆ.ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವ ಅಮೆರಿಕ, ಇದೊಂದು ಅತಿ ಅಪಾಯಕಾರಿ ನಿಷೇಧಿತ ಸಂಘಟನೆ ಎಂದು ತಿಳಿಸಿದೆ. ಭಯೋತ್ಪಾದನೆ ದಮನ ವಿಚಾರದಲ್ಲಿ ಅಮೆರಿಕವು ಭಾರತದ ಜತೆ ಸಹಕಾರವನ್ನು ಮುಂದುವರಿಸುತ್ತದೆ ಎಂದು ಟೋನರ್ ತಿಳಿಸಿದ್ದಾರೆ.ಅಮೆರಿಕವು  2002ರಲ್ಲಿ ಅಂತರರಾಷ್ಟ್ರೀಯ ಬಬ್ಬರ್ ಖಲ್ಸಾ ಮತ್ತು ಅಂತರರಾಷ್ಟ್ರೀಯ ಸಿಖ್ ಯುವ ಸಂಘಟನೆಯನ್ನು ನಿಷೇಧಿಸಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry