ಬೆಂಗಳೂರು(ಪಿಟಿಐ): ಅಧೀನ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಮೆರಿಕ ಮೂಲದ ಹೊರಗುತ್ತಿಗೆ ಕಂಪೆನಿ ‘ಐ-ಗೇಟ್’ ಕಾರ್ಪೊರೇಷನ್ನಿಂದ ವಜಾಗೊಂಡಿದ್ದ ‘ಸಿಇಒ’ ಫಣೀಶ್ ಮೂರ್ತಿ, ಈಗ ಕಂಪೆನಿಯನ್ನೇ ಕೋರ್ಟ್ಗೆ ಎಳೆದಿದ್ದಾರೆ.

ಕ್ಯಾಲಿಫೋರ್ನಿಯಾ ನ್ಯಾಯಾಲಯಕ್ಕೆ ಫಣೀಶ್ ಸಲ್ಲಿಸಿರುವ ದೂರಿನಲ್ಲಿ, ‘ತಾವು ಅಧೀನ ಅಧಿಕಾರಿ ಜತೆ ಹೊಂದಿದ್ದ ಸಂಬಂಧ ಕಂಪೆನಿಗೆ ಮೊದಲೇ ತಿಳಿದಿತ್ತು. ಆದರೆ, ಇದನ್ನೇ ಅಸ್ತ್ರವಾಗಿ ಬಳಸಿಕೊಂಡು, ಕರಾರು ನಿಯಮಗಳಿಗೆ ವಿರುದ್ಧವಾಗಿ ತಮ್ಮನ್ನು ವಜಾಗೊಳಿಸಲಾಗಿದೆ. ಜತೆಗೆ ಕಂಪೆನಿ ತಮಗೆ 170 ಕೋಟಿ ಡಾಲರ್ (ರೂ.10,540 ಕೋಟಿ) ಷೇರು ಮೊತ್ತ ಪಾವತಿಸುವುದನ್ನೂ ಬಾಕಿ ಉಳಿಸಿ ಕೊಂಡಿದೆ’ ಎಂದು ದೂರಿದ್ದಾರೆ.

‘ಐಗೇಟ್ನ ಸ್ವತಂತ್ರ ನಿರ್ದೇಶಕರೊ ಬ್ಬರು ಬರೆದ ಪತ್ರ ತಮ್ಮ ಬಳಿ ಇದ್ದು, ಅದರಲ್ಲಿ ಅವರು ನನ್ನ ಮತ್ತು ಅಧೀನ ಅಧಿಕಾರಿ ನಡುವಿನ ಸಂಬಂಧ 2012ರ ಜನವರಿಯಿಂದಲೇ ಕಂಪೆನಿ ತಿಳಿದಿತ್ತು ಎಂದು ಉಲ್ಲೇಖಿಸಿದ್ದಾರೆ. ಇದು ಪ್ರಮುಖ ಸಾಕ್ಷ್ಯ. ಪತ್ರದಲ್ಲಿ ಅವರ ಸಹಿ ಕೂಡ ಇದೆ’ ಎಂದು ಮೂರ್ತಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ, ಐಗೇಟ್ ವಕ್ತಾರ ಪ್ರಭಂಜನ್ ದೇಶಪಾಂಡೆ ಅವರನ್ನು ಸಂಪರ್ಕಿಸಿದಾಗ, ಈ ಆರೋಪ ದಲ್ಲಿ ಯಾವುದೇ ಹುರುಳಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.