ಶುಕ್ರವಾರ, ಜೂನ್ 18, 2021
23 °C

ಐಟಿಬಿ ಬರ್ಲಿನ್ ಪ್ರವಾಸಿ ಮೇಳ: ರಾಜ್ಯದ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಟಿಬಿ ಬರ್ಲಿನ್ ಪ್ರವಾಸಿ ಮೇಳ: ರಾಜ್ಯದ ಮಳಿಗೆ

ಬೆಂಗಳೂರು: ಈ ತಿಂಗಳ 11ರವರೆಗೆ ಬರ್ಲಿನ್‌ನಲ್ಲಿ ನಡೆಯಲಿರುವ ಜಾಗತಿಕ ಪ್ರವಾಸೋದ್ಯಮ ಮೇಳದಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಮಳಿಗೆಯು ಪ್ರವಾಸಿಗರನ್ನು ಗಮನಾರ್ಹವಾಗಿ ಸೆಳೆಯುತ್ತಿದೆ. 

`ಐಟಿಬಿ ಬರ್ಲಿನ್~ ವಿಶ್ವದ ಪ್ರಮುಖ ಪ್ರವಾಸೋದ್ಯಮ ಮೇಳವಾಗಿದೆ. 180 ದೇಶಗಳ 10 ಸಾವಿರಕ್ಕೂ ಹೆಚ್ಚು ಪ್ರದರ್ಶಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ.ರಾಜ್ಯದ ಪ್ರವಾಸೋದ್ಯಮ ಇಲಾಖೆಯ ನಿಯೋಗದಲ್ಲಿ, ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ಜಿ. ಲತಾ ಕೃಷ್ಣರಾವ್, ನಿರ್ದೇಶಕ ಕೆ. ವಿಶ್ವನಾಥ ರೆಡ್ಡಿ ಮತ್ತು ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ಇದ್ದಾರೆ.ರಾಜ್ಯದ ಪ್ರವಾಸೋದ್ಯಮ ಮಳಿಗೆಯು, ಮೇಳದಲ್ಲಿನ ಮುಂಚೂಣಿ 16 ಮಳಿಗೆಗಳಲ್ಲಿ ಒಂದಾಗಿದ್ದು, ಯಕ್ಷಗಾನ ಕಲಾವಿದರು ವಿದೇಶಗಳ ಪ್ರವಾಸಿಗರ ಗಮನ ಸೆಳೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.