ಗುರುವಾರ , ಏಪ್ರಿಲ್ 15, 2021
28 °C

ಐರೋಪ್ಯ ರಾಷ್ಟ್ರಗಳಿಂದ ಭಾರತಕ್ಕೆ ಅಲ್‌ಖೈದಾ ಹಣ: ಎಫ್‌ಐಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಲ್‌ಖೈದಾವು ಭಾರತದಲ್ಲಿನ ತನ್ನ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡಲು ಐರೋಪ್ಯ ರಾಷ್ಟ್ರಗಳನ್ನು ಸುರಕ್ಷಿತ ತಾಣಗಳಾಗಿ ಬಳಸಿಕೊಳ್ಳುತ್ತಿರುವುದಾಗಿ ಪೆರುವಿನ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ದ ವರದಿ ತಿಳಿಸಿದೆ.ಪ್ರತಿ ತಿಂಗಳು ಕನಿಷ್ಠಪಕ್ಷ ಇಂತಹ ಒಂದು ಹಣ ಸಾಗಾಣಿಕೆ ನಡೆದ ಶಂಕಿತ ಪ್ರಕರಣವನ್ನು ಪತ್ತೆ ಹಚ್ಚಿರುವ ಎಫ್‌ಐಯು, ಈ ಮಾಹಿತಿಯನ್ನು ಅಮೆರಿಕದ ತನಿಖಾಧಿಕಾರಿಗಳ ಜೊತೆ ಹಂಚಿಕೊಂಡಿರುವುದಾಗಿಯೂ ಹೇಳಿದೆ.ಅಲ್‌ಖೈದಾವು ಯೂರೋಪ್‌ನಿಂದ ಲಿಮಾದ ಮೂಲಕ ಭಾರತಕ್ಕೆ ಹಣ ಸಾಗಾಣಿಕೆ ಮಾಡುತ್ತಿರುವ ಪ್ರಕರಣವನ್ನು ಅಮೆರಿಕ ವಿದೇಶಾಂಗ ಆಸ್ತಿಗಳ ನಿಯಂತ್ರಣ ಕಚೇರಿ ಪತ್ತೆ ಹಚ್ಚಿರುವುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿರುವುದಕ್ಕೆ ಪೂರಕವಾಗಿ, ಎಫ್‌ಐಯು ಸಹ ಮಾಹಿತಿ ಹೊಂದಿದ ಅಂಶವನ್ನು ಅದರ ಮುಖ್ಯಸ್ಥ ಎನ್ರಿಕ್ ಸಾಲ್ಡಿವರ್ ಬಹಿರಂಗಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.