143 ನಾಟ್ಔಟ್, 143 ಡಿಗ್ರಿ ಸೆಲ್ಷಿಯಸ್, 143 ಕಿ.ಮೀ, 143%, ರೂಟ್ ನಂ. 143, 143.0 ಎಫ್ ಎಂ, 143 ವಾಟ್ಸ್, ಐಎಸ್ಎ: 143... ತಾಯಿಯಾಗಿ ಕಾಣಿಸಿಕೊಂಡಿರುವ ನಟಿ ಸಿತಾರಾ ಬಾಯಲ್ಲಿ ಬೀಡಿ.

`ಹುಟ್ಟಿದ ಡೇಟು ಗೊತ್ತಿದ್ದೋನು ಆರ್ಡಿನರಿ, ಸಾಯೋ ಡೇಟು ಗೊತ್ತಿದ್ದೋನು ಎಕ್ಸ್ಟ್ರಾರ್ಡಿನರಿ~, `ಹುಚ್ಚು ವರ್ಸಸ್ ಮಚ್ಚು~, ಎಂಬ ಸಾಲುಗಳು, ಹುಟ್ಟು ಏಪ್ರಿಲ್ 24 ಮರುಹುಟ್ಟು ಏಪ್ರಿಲ್ 12. ಹೀಗೆ ಚಿತ್ರ ವಿಚಿತ್ರ ಸಂಗತಿಗಳನ್ನು ಹೊತ್ತು ನಿಂತಿತ್ತು `ಜನ್ಮ~ ಚಿತ್ರದ ಪೋಸ್ಟರ್. ಅದು ನಿರ್ದೇಶಕ ಚಕ್ರವರ್ತಿ (ಚಂದ್ರಚೂಡ್) ಅವರ ಕಲ್ಪನಾ ವಿಲಾಸಕ್ಕೆ ಸಾಕ್ಷಿ.

ಸಂತೆಗೆ ಮೂರು ಮೊಳ ನೇಯುವ ಪೈಕಿ ಅವರಲ್ಲ. ಹಾಗಾಗಿ ಬರೋಬ್ಬರಿ ಐದು ವರ್ಷಗಳಿಂದ `ಜನ್ಮ~ಕ್ಕೆ ಜನ್ಮ ನೀಡುತ್ತಲೇ ಬಂದಿದ್ದಾರಂತೆ. ಅವರೇ ಹೇಳುವಂತೆ ಇದೊಂದು `ಗಜ ಪ್ರಸವ~. `ತಡೆದ ಮಳೆ ಜಡಿದು ಬರುತ್ತೆ~ ಎಂಬುದು ಅವರು ನಂಬಿರುವ ಸತ್ಯ.

ಅಂದಹಾಗೆ ಅವರು ಆರಿಸಿಕೊಂಡಿರುವುದು ತಮಿಳು ನೆಲದಲ್ಲಿ ಕನ್ನಡದ ಪ್ರೀತಿ ಅರಳುವ ಕತೆಯನ್ನು. ನದಿ ಸಮುದ್ರ ಸೇರುವಂತೆ ಚೆನ್ನೈನ ಪ್ರೀತಿ ಬೆಂಗಳೂರಿನಲ್ಲಿ ಕ್ಲೈಮ್ಯಾಕ್ಸ್ ರೂಪ ಪಡೆಯುತ್ತದೆಯಂತೆ. ಒಮ್ಮೆ ಸಮುದ್ರ ಸೇರಿದ ನದಿ ಮತ್ತೆ ಮೂಲಕ್ಕೆ ಮರಳುವುದಿಲ್ಲ.

ಹಾಗೆಯೇ ಪ್ರೀತಿ ಎಂದು ಬಗೆದು ಚಿತ್ರ ರೂಪಿಸಿದ್ದಾರೆ. ಚಿತ್ರಕ್ಕೆ ರಾಜ್ಕುಮಾರ್ ಛಾಯೆಯೂ ಇದೆ ಎಂದು ಹೇಳಿ ಇನ್ನಷ್ಟು ಕುತೂಹಲ ಕೆರಳಿಸಿದ್ದಾರೆ. ಗಾಜನೂರು ಪೋಸ್ಟ್ಬಾಕ್ಸ್ನಿಂದ ದನಿಮುದ್ರಿಕೆ ಬಿಡುಗಡೆಯಾದದ್ದು ಕೂಡ ಸಮಾರಂಭದ ವಿಶೇಷಗಳಲ್ಲಿ ಒಂದು.

ಚಿತ್ರದ ಧ್ವನಿಸುರುಳಿ ಸಮಾರಂಭದಲ್ಲಿ ಹಾಜರಿದ್ದ ನಿರ್ಮಾಪಕ ಸಾ.ರಾ.ಗೋವಿಂದು, `ಸರ್ಕಾರ ಐದು ವರ್ಷಗಳಿಗೊಮ್ಮೆ ಯೋಜನೆ ರೂಪಿಸುವಂತೆ ಚಕ್ರವರ್ತಿ ಐದು ವರ್ಷದ ನಂತರ ಚಿತ್ರ ತರುತ್ತಿದ್ದಾರೆ. ಅವರದೂ ಪಂಚವಾರ್ಷಿಕ ಯೋಜನೆ~ ಎಂದು ಚಟಾಕಿ ಹಾರಿಸಿದರು.

ಚಿತ್ರದ ಪೋಸ್ಟರ್ನಲ್ಲಿ ಕಾಣುತ್ತಿದ್ದ ನಾಯಕನಿಗೂ ಅಲ್ಲಿ ಕುಳಿತಿದ್ದ ನಾಯಕ ಸಂತೋಷ್ಗೂ ಒಂದಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ಅದಕ್ಕೆ ಕಾರಣ ಐದು ವರ್ಷ! ದೈಹಿಕವಾಗಿ ಬದಲಾಗಿದ್ದ ಸಂತೋಷ್ ಅದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಮುಗುಮ್ಮಾಗಿ ಚಿತ್ರದ ಹಾಡುಗಳತ್ತ ಚಿತ್ತ ಹರಿಸಿದರು.ಹರಸಿ ಆಶೀರ್ವದಿಸಿ ಎನ್ನುತ್ತ ಮಾತು ಮುಗಿಸಿದರು.

ಹಾಡು ಹೆಣೆದಿರುವುದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ಅವರ ಮೊದಲ ಚಿತ್ರ ಗೂಳಿ ಆರಂಭವಾದಾಗಲೇ ಜನ್ಮಕ್ಕಾಗಿಯೂ ಕೆಲಸ ಶುರುಮಾಡಿದೆ ಎನ್ನುತ್ತಾ ನೆನಪುಗಳನ್ನು ಮೀಟಿದರು. ಒಟ್ಟು ಆರು ಹಾಡುಗಳನ್ನು ಪೋಣಿಸಿರುವ ಅವರು ಇಷ್ಟೂ ವರ್ಷಗಳಲ್ಲಿ ಟ್ರೆಂಡ್ಗೆ ತಕ್ಕಂತೆ ರಾಗ ಬದಲಿಸಿದ್ದಾರಂತೆ. ಅದಕ್ಕೆ ಅನುಮತಿ ಕೊಟ್ಟ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದರು.

ಚಿತ್ರತಂಡಕ್ಕೆ ಶುಭಕೋರುವ ಸರದಿ ರಾಕ್ಲೈನ್ ವೆಂಕಟೇಶ್ ಅವರದಾಗಿತ್ತು. ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಹಾಗೂ ಅವರ ಮಗ ಸಂತೋಷ್ರನ್ನು ನಿರ್ಮಾಪಕ ಸರೋವರ ಸಂಜೀವ್ ಹಾಗೂ ನಟ ಸುದೀಪ್ಗೆ ಹೋಲಿಸಿದರು. ಅವರಂತೆ ಇವರೂ ಆಗಲೆಂದು ಆಶಿಸಿದರು. ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಶಿಷ್ಯ ಚಕ್ರವರ್ತಿ ಅವರನ್ನು ಹಾಡಿ ಹೊಗಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.