ಗುರುವಾರ , ಜನವರಿ 23, 2020
18 °C
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೋಜಿಗದ ನೀತಿ

ಒಂದೇ ದೂರಕ್ಕೆ ಎರಡು ದರ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನ ಸಾತ ನೂರು ಹೋಬಳಿಯ ಕಂಚನಹಳ್ಳಿ ಗ್ರಾಮಕ್ಕೆ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಒಂದೇ ದೂರಕ್ಕೆ ಎರಡು ದರ ನಿಗದಿ ಪಡಿಸಿರುವುದನ್ನು ಆರ್.ಟಿ .ಐ. ಕಾರ್ಯಕರ್ತ ಕಂಚನ ಹಳ್ಳಿ ರವಿಕುಮಾರ್ ಪ್ರಶ್ನಿಸಿದ್ದಾರೆ.ಚನ್ನಪಟ್ಟಣ ಘಟಕದ ಸಾರಿಗೆ ವಿಭಾಗವು ಕಡಿಮೆ ದರವನ್ನು ಪಡೆ ದರೆ ಇದೇ ಮಾರ್ಗಕ್ಕೆ ಕನಕಪುರ ಘಟಕ ದವರು ಹೆಚ್ಚಿನ ಪ್ರಯಾಣ ದರ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಈ ಮಾರ್ಗಕ್ಕೆ ಚನ್ನಪಟ್ಟಣ ಘಟಕದಲ್ಲಿ 8ರೂ ಪಡೆಯುತ್ತಿದ್ದರೆ, ಇದೇ ದೂರಕ್ಕೆ ಕನಕಪುರ ಘಟಕವು 13ರೂ ಪಡೆಯು ತ್ತಿರುವುದು ಇಬ್ಬ ಗೆಯ ನೀತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಕೂಲಿ, ನಾಲಿ ಮಾಡಿ ಜೀವನ ಸಾಗಿಸುವ ಜನರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಇದು ಬಡವರ ಶೋಷಣೆಯಾಗಿದೆ ಎಂದು ರವಿಕುಮಾರ್ ದೂರಿ ದ್ದಾರೆ.ಈ ಕುರಿತಂತೆ ರವಿಕುಮಾರ್‌ ಹಾಗೂ ಗ್ರಾಮದ ಬೊಮ್ಮೇಗೌಡ, ಕಾಂತರಾಜು, ಪುಟ್ಟೇಗೌಡ, ಕೆ.ಸಿ. ಭೀಮರಾಜು, ವಿಕ್ರಮ್, ಪುಟ್ಟ ಮಾದೇಗೌಡ, ಚನ್ನಪ್ಪ, ಲೋಕೇಶ್, ಕೆ.ಬಿ.ಬಸವರಾಜು ಮೊದಲಾದವರು ಕೂಡಲೇ ಈ ಮಾರ್ಗದ ಬಸ್ ದರವನ್ನು ಪರಿಷ್ಕರಣೆ ಮಾಡುವಂತೆ ಒತ್ತಾ ಯಿಸಿದ್ದಾರೆ. ಈ ಸಂಬಂಧ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಗೆ ದೂರು ಸಲ್ಲಿಸಿ ಒತ್ತಾಯಿಸಿ ದ್ದಾರೆ.ಕಂಚನಹಳ್ಳಿಗೆ ಕನಕಪುರ ಮತ್ತು ಚನ್ನ ಪಟ್ಟಣ ಎರಡೂ ತಾಲ್ಲೂಕು ಗಳ ಸಾರಿಗೆ ಸಂಸ್ಥೆಯಿಂದ ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ. ಹಲ ಗೂರಿನಿಂದ 8 ಕಿಲೋ ಮೀಟರ್ ಇರುವ ಗುರುವಿನಪುರಕ್ಕೆ ಚನ್ನಪ ಟ್ಟಣ ಡಿಪೋದ ಬಸ್ಸುಗಳಲ್ಲಿ 8 ರೂ ಟಿಕೆಟ್ ಪಡೆಯಲಾಗುತ್ತದೆ. ಆದರೆ ಅಷ್ಟೇ ದೂರದ ಕಂಚನ ಹಳ್ಳಿಗೆ ಕನಕಪುರದ ಡಿಪೋದ ಬಸ್ಸುಗಳು 13 ರೂ ಟಿಕೆಟ್ ತೆಗೆದುಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ರವಿಕುಮಾರ್‌ ಪ್ರಶ್ನಿಸಿದ್ದಾರೆ.7 ರಿಂದ 8 ಕಿ.ಮೀ.ಗೆ 8ರೂ ಬಸ್ ದರ ನಿಗದಿಪಡಿಸಿರುವ ಸಾರಿಗೆ ಇಲಾಖೆಯು 1ಕಿ.ಮೀ ಅಳ ತೆಯ ಕಂಚನಹಳ್ಳಿಯಿಂದ ಗುರುವಿ ನಪುರಕ್ಕೆ 8ರೂ ಬಸ್ ದರ ನಿಗದಿ ಪಡಿಸಿರು ವುದು ಆಶ್ಚರ್ಯಕರ ಸಂಗತಿ. ಈ ವ್ಯತ್ಯಾಸದ ಬಗ್ಗೆ ಬಸ್ಸಿನ ನಿರ್ವಾಹಕ ರನ್ನು ಪ್ರಶ್ನಿಸಿದರೆ ಸರಿ ಯಾದ ಉತ್ತರ ಕೊಟ್ಟಿಲ್ಲ.‘ಈ ದರ ನಿಗದಿ ಯನ್ನು ನಾವು ಮಾ ಡಿಲ್ಲ. ಕನಕಪುರ ಸಾರಿಗೆ ಘಟಕ ದವರು ಮಾಡಿದ್ದಾರೆ’ ಎಂಬ ಉತ್ತರ ನೀಡುತ್ತಾರೆ. ಚನ್ನಪಟ್ಟಣ ಮತ್ತು ಕನಕಪುರದ ಎರಡೂ  ಘಟಕಗಳು ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದವು. ಹೀಗಿರುವಾಗ ಎರಡೂ ಘಟ ಕಗಳು ಹೇಗೆ ಒಂದೇ ದೂರಕ್ಕೆ ಬೇರೆ ಬೇರೆ ಪ್ರಯಾಣ ದರ ನಿಗದಿಪ ಡಿಸಲು ಸಾಧ್ಯ ಎಂದು ಅವರು ಸೋಜಿಗ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)