ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಚಿಂತನೆ ವಿದ್ಯಾರ್ಥಿಗಳ ಹೊರೆಯನ್ನು ಇಳಿಸುವಲ್ಲಿ ತುಂಬ ಸಹಕಾರಿಯಾದ ಹೆಜ್ಜೆ. ಸರ್ಕಾರಿ ಕಾಲೇಜುಗಳಲ್ಲದೆ, ಖಾಸಗಿ ಕಾಲೇಜುಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಡೆಸುವ ವೈದ್ಯಕೀಯ ಕಾಲೇಜುಗಳ ಪ್ರವೇಶಗಳಿಗೂ ಒಂದೇ ಪ್ರವೇಶ ಪರೀಕ್ಷೆ ಎಂಬುದಂತೂ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ಕಡಿಮೆ ಮಾಡುವಂಥ ಕ್ರಮ.ವೈದ್ಯಶಿಕ್ಷಣದ ಆಕಾಂಕ್ಷಿಗಳು ಕೆಲವೊಮ್ಮೆ ಮೂರು ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮಾನಸಿಕ ಒತ್ತಡದಿಂದ ಬಿಡುಗಡೆ ಪಡೆಯಲಿದ್ದಾರೆ.

ವಿದ್ಯಾರ್ಥಿಗಳ ಶ್ರಮ ಮತ್ತು ಪೋಷಕರ ಹಣವನ್ನು ಉಳಿಸುವ ಒಂದೇ ಪ್ರವೇಶ ಪರೀಕ್ಷೆಯನ್ನು ಪ್ರಸಕ್ತ ಸಾಲಿನಲ್ಲಿಯೇ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಂಥ ಸುಧಾರಣೆ. ಪ್ರವೇಶ ಪರೀಕ್ಷೆ ವೈದ್ಯಕೀಯ ಶಿಕ್ಷಣದ ಅರ್ಹತೆಯನ್ನು ಗುರುತಿಸುವ ಮಾನದಂಡವಾಗಿರುವುದರಿಂದ ದೇಶದ ಯಾವುದೇ ರಾಜ್ಯ ಅನುಸರಿಸುತ್ತಿರುವ ಮೀಸಲಾತಿಗೆ ಅಡ್ಡಿಯಾಗುವಂಥದ್ದಲ್ಲ.

ಅಲ್ಪಸಂಖ್ಯಾತರು ನಡೆಸುತ್ತಿರುವ ಕಾಲೇಜುಗಳ ಪ್ರವೇಶ ಪ್ರಕ್ರಿಯೆಗೂ ತೊಂದರೆ ಆಗದು. ಒಂದೇ ಪ್ರವೇಶ ಪರೀಕ್ಷೆಯನ್ನು ಪ್ರತಿಪಾದಿಸುತ್ತಿದ್ದ ಭಾರತೀಯ ವೈದ್ಯಕೀಯ ಮಂಡಲಿ (ಎಂಸಿಐ) ಇನ್ನು ಪರೀಕ್ಷೆಯನ್ನು ಗ್ರಾಮೀಣ ವಿದ್ಯಾರ್ಥಿಗಳಿಗೂ ಅನ್ಯಾಯವಾಗದಂತೆ ರೂಪಿಸಿ ಪಾರದರ್ಶಕವಾಗಿ ನಡೆಸುವ ಹೊಣೆಯನ್ನು ನಿರ್ವಹಿಸಬೇಕಿದೆ.

ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಗಳಿಗೆ ಅನ್ವಯವಾಗಲಿರುವ ಒಂದೇ ಪ್ರವೇಶ ಪರೀಕ್ಷೆಯ ನೀತಿ ಎಂಜಿನಿಯರಿಂಗ್ ಮತ್ತು ವ್ಯವಹಾರ ನಿರ್ವಹಣೆಯಂಥ ಇನ್ನಿತರ ಜ್ಞಾನ ಶಿಸ್ತುಗಳಿಗೂ ಅನ್ವಯವಾಗುವುದು ಅಗತ್ಯ. ಈ ನಿಟ್ಟಿನಲ್ಲಿ ಎಂಸಿಐ ಅಳವಡಿಸಿಕೊಳ್ಳುವ ರಾಷ್ಟ್ರೀಯ ಮಟ್ಟದ ಪರೀಕ್ಷಾ ವಿಧಾನವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಟಿಇಸಿ) ಎಂಜಿನಿಯರಿಂಗ್ ಪ್ರವೇಶಗಳಿಗೆ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು.

ದೇಶದ ವಿವಿಧ ಐಐಟಿಗಳ ಪದವೀಧರರು ಜಗತ್ತಿನಾದ್ಯಂತ ಗಳಿಸಿರುವ ಮಾನ್ಯತೆಗೆ ಅವರು ಆ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಎದುರಿಸಿದ ಕಠಿಣವಾದ ಪ್ರವೇಶ ಪರೀಕ್ಷೆಯೂ ಕಾರಣ ಎಂಬುದನ್ನು ಗಮನಿಸಬೇಕು. ಆದ್ದರಿಂದ ಮನುಕುಲದ ಜೀವರಕ್ಷಣೆಯ ಗುರುತರ ಹೊಣೆ ನಿರ್ವಹಿಸುವ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಶಿಕ್ಷಣಕ್ಕೆ ಪ್ರವೇಶ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಲ್ಲಿ ಯಾವುದೇ ಬಗೆಯ ರಾಜಿಗೂ ಅವಕಾಶ ಇರಬಾರದು. ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವುದು ಇಂಥ ಅರ್ಹತೆಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತದೆ.

ಐಐಟಿ ಪ್ರವೇಶ ಪ್ರಕ್ರಿಯೆಯಲ್ಲಿರುವಂತೆ ವಿದ್ಯಾರ್ಥಿ ಗಳಿಸುವ ಅಖಿಲ ಭಾರತ ಮಟ್ಟದ ರ್ಯಾಂಕ್ ಆಧರಿಸಿ, ದೇಶದ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯಲು ಅವಕಾಶವಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಸಾಲಿನಿಂದಲೇ ಈ ಪ್ರವೇಶ ಪರೀಕ್ಷೆ ಜಾರಿಗೆ ಬರಬೇಕಿದೆ. ಈಗಾಗಲೇ ವೈದ್ಯಕೀಯ ಪ್ರವೇಶಕ್ಕೆ ಪರೀಕ್ಷೆಯ ದಿನ ನಿಗದಿ ಮಾಡಿರುವ ಕೆಲವು ರಾಜ್ಯಗಳು ಎಂಸಿಐ ನೇತೃತ್ವದ ಏಕ ಪರೀಕ್ಷೆಯ ಪದ್ಧತಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಏಕೆಂದರೆ ಅಖಿಲ ಭಾರತ ಮಟ್ಟದಲ್ಲಿ ಉನ್ನತ ರ್ಯಾಂಕ್ ಗಳಿಸುವ ವಿದ್ಯಾರ್ಥಿ ದೇಶದ ಅತ್ಯುನ್ನತ ವೈದ್ಯಕೀಯ ಕಾಲೇಜಗಳಲ್ಲಿ ಸೀಟು ಪಡೆಯುವ ಅವಕಾಶ ಕಳೆದುಕೊಳ್ಳಲು ರಾಜ್ಯ ಸರ್ಕಾರಗಳು ಕಾರಣವಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.