ರಾಯಚೂರು: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೊದಲ ದಿನವಾದ ಶನಿವಾರ ಇಲ್ಲಿನ ಗಂಜ್ ಆವರಣದಲ್ಲಿ ನಡೆದ ಎತ್ತುಗಳಿಂದ ಒಂದುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ( ಕರ್ನಾಟಕ ರಾಜ್ಯದ ಎತ್ತುಗಳಿಗೆ )ಯಲ್ಲಿ ಪ್ರಥಮ ಬಹುಮಾನವನ್ನು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಒಂಬಾವಿ ಗ್ರಾಮದ ಎಸ್ ವೆಂಕಟರಾವ್ ಎಂಬುವವರ ಎತ್ತುಗಳು 2,700 ಅಡಿ ದೂರ(20 ನಿಮಿಷ ಅವಧಿ) ಎಳೆದು ಪ್ರಥಮ ಬಹುಮಾನ 45,000 ಬಹುಮಾನ ಗಳಿಸಿದವು.

ಎರಡನೇ ಬಹುಮಾನವನ್ನು ಬಳ್ಳಾರಿಯ ರವಿಕುಮಾರ ಎಂಬುವವರ ಎತ್ತುಗಳು 2400 ಅಡಿ ದೂರ ಎಳೆದು(20 ನಿಮಿಷ ಅವಧಿ) 35,000 ನಗದು ಬಹುಮಾನ ಗಳಿಸಿದವು.

ತೃತೀಯ ಬಹುಮಾನವನ್ನು ಕೋಡೇಕಲ್ನ ಬಬ್ಲುಗೌಡ ಅವರ ಎತ್ತುಗಳು 2,398 ಅಡಿ ದೂರ ಎಳೆದು( 20 ನಿಮಿಷ) 25,000 ಬಹುಮಾನ ಗಳಿಸಿದವು. ನಾಲ್ಕನೇ ಬಹುಮಾನವನ್ನು ದೇವದುರ್ಗ ತಾಲ್ಲೂಕಿನ ರಾಮದುರ್ಗದ ಆಂಜನೇಯ ಅವರ ಎತ್ತುಗಳು 2,260 ಅಡಿ ದೂರ ಎಳೆದು( 20 ನಿಮಿಷ ಅವಧಿ) 1,500 ನಗದು ಬಹುಮಾನ ಗಳಿಸಿದವು. 2,156 ಅಡಿ ದೂರ ಎಳೆದ ರಾಯಚೂರು ತಾಲ್ಲೂಕಿನ ಪೋತಗಲ್ನ ಮುನ್ನಾಬಾಷಾ ಅವರ ಎತ್ತುಗಳು 5ನೇ ಬಹುಮಾನ ಪಡೆಯುವ ಮೂಲಕ 10,000 ನಗದು ಬಹುಮಾನ ಗಳಿಸಿದವು.

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಎ ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಸಮಾಜದ ಮುಖಂಡರು ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.