ಹೈದರಾಬಾದ್: ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿರ್ದೇಶಕರಾಗಿರುವ ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ಅಕ್ರಮ ಗಣಿಗಾರಿಕೆ ಮೂಲಕ 2007-10 ಅವಧಿಯಲ್ಲಿ ಒಟ್ಟು ರೂ 4,310 ಕೋಟಿ ಆದಾಯ ಗಳಿಸಿದೆ ಎಂದು ಒಎಂಸಿ ವಹಿವಾಟು ಮತ್ತು ಲೆಕ್ಕಪತ್ರದ ಬಗ್ಗೆ ಪರಿಶೀಲಿಸಲು ಸಿಬಿಐನಿಂದ ನೇಮಕಗೊಂಡಿರುವ ಲೆಕ್ಕ ಪರಿಶೋಧನಾ ಸಂಸ್ಥೆ ಹೇಳಿದೆ.

ಅಲ್ಲದೆ, 2007- 2010ರ ಅವಧಿಗೆ ರೂ 521 ಕೋಟಿ ತೆರಿಗೆ ಯನ್ನೂ ಪಾವತಿಸಬೇಕಿದೆ ಎಂದು ಲೆಕ್ಕ ಪರಿಶೋಧನಾ ಸಂಸ್ಥೆ ತಿಳಿಸಿದೆ.

ಒಎಂಸಿ 2007 ಮತ್ತು 2010ರ ಅವಧಿಯಲ್ಲಿ ಸ್ಥಳೀಯವಾಗಿ ಮತ್ತು ವಿದೇಶಗಳಿಂದ ಅಕ್ರಮ ಗಣಿಗಾರಿಕೆ ಮೂಲಕ ಗಳಿಸಿದ ಆದಾಯವೇ ರೂ 4,310 ಕೋಟಿ. 2007-08ರಲ್ಲಿ ಒಎಂಸಿಯ ಆದಾಯ ರೂ 2316 ಕೋಟಿ ಇದ್ದರೆ, 2008- 09ರ ಸಾಲಿನಲ್ಲಿ ರೂ 1522 ಕೋಟಿಗಳಿಗೆ ಆದಾಯ ಕುಸಿಯಿತು. 2009-10ರಲ್ಲಿ ಮತ್ತೂ ಕುಸಿದ ಆದಾಯ ರೂ 1046 ಕೋಟಿಯಷ್ಟಿತ್ತು. ಹಾಗೆಯೇ ಲಾಭದಲ್ಲೂ ಇಳಿಕೆ ಉಂಟಾಯಿತು.

ಚೀನಾ ಒಲಿಂಪಿಕ್ಸ್ ವೇಳೆಯಲ್ಲಿ ಅದಿರಿಗೆ ಭಾರಿ ಬೇಡಿಕೆ ಉಂಟಾದ ಕಾರಣ 2007-08ರಲ್ಲಿ ಒಎಂಸಿಯು ರೂ 2316 ಕೋಟಿ ಆದಾಯ ಗಳಿಸಿತು. ನಂತರದಲ್ಲಿ ಇದು ಅದಿರಿನ ಬೇಡಿಕೆ ಇಳಿಮುಖಗೊಂಡು ದರ ಕುಸಿತ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.