ಭಾನುವಾರ, ಜನವರಿ 26, 2020
28 °C

ಒಕ್ಕಲಿಗರ ಚುನಾವಣೆ: ಕಣದಲ್ಲಿ 24 ಮಂದಿ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ನಡೆದಿರುವ ಚುನಾವಣಾ ಕಣದಿಂದ ಗುರುವಾರ ಐವರು ನಾಮಪತ್ರ ಹಿಂತೆಗೆದುಕೊಂಡಿದ್ದು, ಅಂತಿಮವಾಗಿ 24 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ವಿಧಾನ ಪರಿಷತ್‌ ಸದಸ್ಯ ಬಿ. ರಾಮಕೃಷ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್‌, ಕೆ.ವಿ. ಕುಮಾರ್‌, ಡಾ.ಬಿ.ಸಿ. ಬೊಮ್ಮಯ್ಯ, ಡಿ.ಎನ್‌. ಬೆಟ್ಟೇಗೌಡ, ಡಾ.ಎಂ.ಎಸ್‌. ಲೋಕೇಶ್‌ಬಾಬು, ಎಲ್‌. ಕೃಷ್ಣ, ಟಿ. ವರಪ್ರಸಾದ್‌, ಸಿ.ಜಿ. ಕುಮಾರಗೌಡ (ಲಕ್ಕಪ್ಪ), ಸಿ.ಎಂ. ದ್ಯಾವಪ್ಪ, ಎಚ್‌.ಎಂ. ನಾರಾಯಣಮೂರ್ತಿ, ಡಾ.ಬಿ. ಶಿವಲಿಂಗಯ್ಯ, ಜಿ.ಎಂ. ರವೀಂದ್ರ, ಚಂದ್ರಶೇಖರ್‌ (ಮೂಡ್ಯ ಚಂದ್ರು), ಜಿ.ಬಿ. ಕೃಷ್ಣ (ಡಾಬಾಕಿಟ್ಟಿ), ಬಿ.ಎನ್‌. ತಿರುಮಲೇಗೌಡ, ಬಿ.ಎಚ್‌. ನಾಗಣ್ಣ, ಎನ್‌. ಬಾಲಕೃಷ್ಣ (ನೆಲ್ಲಿಗೆರೆಬಾಲು), ಎ.ನಾಗರಾಜು, ಪಿ.ಎನ್‌. ಯತೀಶ್‌ಬಾಬು, ಕೆ.ಬಿ.ಎಸ್‌. ಗಿರೀಶ್‌, ಟಿ.ಟಿ. ಅನಸೂಯಾ, ಎಚ್‌.ಬಿ. ಬಂದಿಗೌಡ, ಬೆಟ್ಟೇಗೌಡ ಕಣದಲ್ಲಿದ್ದಾರೆ.ಶುಕ್ರವಾರ ಅಭ್ಯರ್ಥಿಗಳಿಗೆ ಗುರುತುಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿ ಪಿ. ಶಶಿಧರ್‌ ತಿಳಿಸಿದ್ದಾರೆ.

ಈಗಾಗಲೇ ಎಲ್ಲ ಅಭ್ಯರ್ಥಿಗಳು ಚುನಾವಣಾ ಪ್ರಚಾರ ತೀವ್ರಗೊಳಿಸಿದ್ದಾರೆ. ಜ.5 ರಂದು ಮತದಾನ ನಡೆಯಲಿದೆ.

ಪ್ರತಿಕ್ರಿಯಿಸಿ (+)