ಮಂಗಳವಾರ, ಮೇ 17, 2022
23 °C

ಒತ್ತುವರಿ ತೆರವಿಗೆ ನೋಟಿಸ್ ಅನಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಮೀನು ಅತಿಕ್ರಮಣ ಮಾಡಿಕೊಂಡ ವ್ಯಕ್ತಿಗಳನ್ನು ಅಲ್ಲಿಂದ ತೆರವು ಮಾಡಿಸುವ ಮುನ್ನ ನೋಟಿಸ್ ನೀಡಬೇಕು ಎಂಬುದು ನಿಜ. ಆದರೆ, ರಾಜಕಾಲುವೆ ಒತ್ತುವರಿ ತೆರವು ಮಾಡಿಸಲು ನೋಟಿಸ್ ಕೂಡ ನೀಡಬೇಕಾಗಿಲ್ಲ' ಎಂದು ಸರ್ಕಾರ ಹೈಕೋರ್ಟ್‌ನಲ್ಲಿ ಶುಕ್ರವಾರ ವಾದಿಸಿದೆ. ಎಸ್.ಎಂ. ಅಲೆಕ್ಸ್ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರ ಎದುರು ಸರ್ಕಾರದ ಪರವಾಗಿ ವಾದಿಸಿದ ಎಸ್‌ಪಿಪಿ (ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್) ಎಸ್. ದೊರೆರಾಜು, `ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಜೆ.ಎಸ್. ಕೇಹರ್ ನೇತೃತ್ವದ ಪೀಠ ನೀಡಿದ ಆದೇಶದ ಅನ್ವಯ, ರಾಜಕಾಲುವೆ ತೆರವು ಮಾಡುವ ಮುನ್ನ ಬೆಂಗಳೂರು ಮಹಾನಗರ ಕಾರ್ಯಪಡೆಯು (ಬಿಎಂಟಿಎಫ್) ನೋಟಿಸ್ ನೀಡಬೇಕಾಗಿಲ್ಲ' ಎಂದು ವಿವರಿಸಿದರು.ಬಿಎಂಟಿಎಫ್‌ನ ಮುಖ್ಯಸ್ಥ ಆರ್.ಪಿ. ಶರ್ಮ ಅವರು ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಅಲೆಕ್ಸ್ ಅವರು ಅರ್ಜಿಯಲ್ಲಿ ದೂರಿದ್ದಾರೆ. `ರಾಜಕಾಲುವೆ ಸಾರ್ವಜನಿಕರ ಆಸ್ತಿ. ಅದನ್ನು ಒತ್ತುವರಿ ಮಾಡಿಕೊಂಡರೆ, ಸಾರ್ವಜನಿಕರ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿದರು. ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.