ಸೋಮವಾರ, ಮೇ 23, 2022
30 °C

ಒಪ್ಪಂದ ವಿಸ್ತರಣೆ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಹತ್ವಾಕಾಂಕ್ಷೆಯ `ಲಕ್ಷ್ಯ 2022' ಯೋಜನೆ ಜಾರಿಗೆ ಮೀನಮೇಷ ಎನಿಸುತ್ತಿರುವ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಐಎಎಫ್‌ಎಫ್) ಕ್ರಮದಿಂದ ಯೋಜನೆಯ ತಾಂತ್ರಿಕ ನಿರ್ದೇಶಕ ರಾಬ್ ಬಾನ್ ನಿರಾಸೆಗೊಂಡಿದ್ದಾರೆ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿರುವ ಈ ಒಪ್ಪಂದ ವಿಸ್ತರಣೆಗೊಳ್ಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.ಅಪಾರ ಅನುಭವ ಹೊಂದಿರುವ ಬಾನ್, ಕತಾರ್‌ನಲ್ಲಿ 2022ರಲ್ಲಿ ನಡೆಯಲಿರುವ ಫುಟ್‌ಬಾಲ್ ವಿಶ್ವಕಪ್‌ಗೆ ಭಾರತ ತಂಡ ಅರ್ಹತೆ ಪಡೆಯುವ ಗುರಿಯೊಂದಿಗೆ `ಲಕ್ಷ್ಯ 2022' ಎಂಬ ಯೋಜನೆ ರೂಪಿಸಿದ್ದರು. ಆದರೆ ಅವರ ಕನಸಿನ ಯೋಜನೆ ಕಳೆದ ಆಗಸ್ಟ್‌ನಿಂದಲೇ ದೂಳು ತಿನ್ನುತ್ತಿದೆ. ಇದನ್ನರಿತ 70 ವರ್ಷದ ಬಾನ್, ಒಪ್ಪಂದವನ್ನು ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ರವಾನಿಸಿದ್ದಾರೆ.`ಲಕ್ಷ್ಯ 2022 ಯೋಜನೆ ಜಾರಿಗೊಳಿಸದ್ದರಿಂದ ಬಾನ್ ಅಸಂತುಷ್ಟರಾಗಿರುವುದು ನಿಜ. ಆದ್ದರಿಂದ ನಿಗದಿತ ಒಪ್ಪಂದವನ್ನು ಬಾನ್ ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳು ಕಡಿಮೆ. ಆದರೆ ಈ ಸಂಬಂಧ ಬಾನ್ ಯಾವುದೇ ಹೇಳಿಕೆ ನೀಡಿಲ್ಲ' ಎಂದು ಎಐಎಫ್‌ಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.2011ರ ಅಕ್ಟೋಬರ್‌ನಲ್ಲಿ ಬಾನ್ ಅವರು ಎರಡು ವರ್ಷಗಳ ಅವಧಿಗೆ ಯೋಜನೆಯ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.