ಶುಕ್ರವಾರ, ಮಾರ್ಚ್ 5, 2021
27 °C

ಒಪ್ಪೊ ಸ್ಮಾರ್ಟ್‌ಫೋನ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಪ್ಪೊ ಸ್ಮಾರ್ಟ್‌ಫೋನ್‌ ಬಿಡುಗಡೆ

ಮುಂಬೈ (ಪಿಟಿಐ): ಭಾರತದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಮೊಬೈಲ್‌ ತಯಾರಿಕಾ ಘಟಕ ಸ್ಥಾಪಿಸಲು ಚೀನಾದ ಮೊಬೈಲ್‌ ತಯಾರಿಕಾ ಸಂಸ್ಥೆ ಒಪ್ಪೊ ನಿರ್ಧರಿಸಿದೆ. ದೆಹಲಿ ಸಮೀಪ ಆಗಸ್ಟ್‌ನಲ್ಲಿ ಈ ತಯಾರಿಕಾ ಘಟಕ ಆರಂಭವಾಗಲಿದೆ ಎಂದು ಸಂಸ್ಥೆಯ ಜಾಗತಿಕ ಉಪಾಧ್ಯಕ್ಷ ಸ್ಕೈ ಲಿ ಅವರು ಹೇಳಿದ್ದಾರೆ.ಛಾಯಾಚಿತ್ರಗಳನ್ನು ತೆಗೆಯುವು ದಕ್ಕೆ  ಹೆಚ್ಚು ಒತ್ತು ನೀಡುವ  ಒಪ್ಪೊ ಕ್ಯಾಮರಾ ಫೋನ್ ‘ಎಫ್ 1’ ಸರಣಿಯ ಮೊಬೈಲ್‌ಗಳನ್ನು   ದೇಶಿ ಮಾರುಕಟ್ಟೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ‘ಸೆಲ್ಫಿ ಎಕ್ಸ್‌ ಪರ್ಟ್’ ಎಂಬ ಅಡಿಬರಹ ಹೊಂದಿರುವ ಈ ಫೋನ್‌ಗಳು ಛಾಯಾಚಿತ್ರಗಳನ್ನು ತೆಗೆಯುವು ದಕ್ಕೆ ಸಂಬಂಧಿಸಿದಂತೆ ಗ್ರಾಹಕರ ನಿರೀಕ್ಷೆ ಗಳನ್ನೆಲ್ಲ ಈಡೇರಿಸಲಿವೆ ಎಂದಿದ್ದಾರೆ.ಎಫ್‌1 ₹ 15,990 ಮತ್ತು ಎಫ್ 1 ಪ್ಲಸ್ ಮೊಬೈಲ್‌ ಬೆಲೆ ₹26,990 ಇದೆ.  ಬೆಂಗಳೂರಿನಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ಇವು ಲಭ್ಯವಾಗಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.