ಭಾನುವಾರ, ಮೇ 22, 2022
21 °C

ಒಲಿಂಪಿಕ್ಸ್‌ಗೆ ಗ್ಯಾಟ್ಲಿನ್ ಅರ್ಹತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೂಜಿನ್ (ರಾಯಿಟರ್ಸ್): ಅತ್ಯುತ್ತಮ ಪ್ರದರ್ಶನ ನೀಡಿದ ಜಸ್ಟಿನ್ ಗ್ಯಾಟ್ಲಿನ್ ಮತ್ತು ಟೈಸನ್ ಗೇ ಲಂಡನ್ ಒಲಿಂಪಿಕ್ಸ್‌ನ 100 ಮೀ. ಓಟದಲ್ಲಿ ಅಮೆರಿಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.ಭಾನುವಾರ ನಡೆದ ಅಮೆರಿಕನ್ ಒಲಿಂಪಿಕ್ ಅರ್ಹತಾ ಕೂಟದಲ್ಲಿ ಗ್ಯಾಟ್ಲಿನ್ 9.80 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು. ಟೈಸನ್ ಗೇ 9.86 ಸೆಕೆಂಡ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು.ಗ್ಯಾಟ್ಲಿನ್ ಅವರ ವೈಯಕ್ತಿಕ ಅತ್ಯುತ್ತಮ ಸಮಯ ಇದಾಗಿದೆ. ಈ ಮೂಲಕ ಇವರು ಜಮೈಕದ ಉಸೇನ್ ಬೋಲ್ಟ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ಪ್ರಸಕ್ತ ಋತುವಿನ ಎರಡನೇ ಅತ್ಯುತ್ತಮ ಸಮಯವನ್ನು ಗ್ಯಾಟ್ಲಿನ್ ಕಂಡುಕೊಂಡರು. ಬೋಲ್ಟ್ ಇತ್ತೀಚೆಗೆ ನಡೆದ ಸ್ಪರ್ಧೆಯೊಂದರಲ್ಲಿ 9.76 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಗ್ಯಾಟ್ಲಿನ್ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 9.85 ಸೆಕೆಂಡ್‌ಗಳಲ್ಲಿ ಓಡಿ ಚಿನ್ನ ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.