ನವದೆಹಲಿ (ಪಿಟಿಐ): ಭಾರತದ ಡಿಸ್ಕಸ್ ಥ್ರೋ ಸ್ಪರ್ಧಿ ಸೀಮಾ ಅಂಟಿಲ್ ಲಂಡನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಶನಿವಾರ 62.60ಮೀಟರ್ ದೂರ ಎಸೆಯುವ ಮೂಲಕ ಸೀಮಾ ಒಲಿಂಪಿಕ್ಸ್ಗೆ `ಎ~ ದರ್ಜೆಯ ಅರ್ಹತೆ ಪಡೆದುಕೊಂಡರು.

ಈ ಸಲದ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಎರಡನೆ ಮಹಿಳೆಯಾಗಿದ್ದಾರೆ. ಈ ಮೊದಲು ಕೃಷ್ಣ ಪೂನಿಯಾ ಅರ್ಹತೆ ಗಳಿಸಿದ್ದರು. ಕಳೆದ ಆರು ತಿಂಗಳಿಂದ ಟೋನಿ ಸಿರೆಲ್ಲಿ ಗರಡಿಯಲ್ಲಿ ಸೀಮಾ ತರಬೇತಿ ಪಡೆಯುತ್ತಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ ಈ ದೂರವನ್ನು ಎಸೆದ 29 ವರ್ಷದ ಈ ಅಥ್ಲೀಟ್ ಲಂಡನ್ ಪ್ರಯಾಣದ ಹಾದಿಯನ್ನು ಖಚಿತಪಡಿಸಿಕೊಂಡರು.

ಎರಡು ದಿನಗಳ ನಂತರ ಸೀಮಾ ಒಲಿಂಪಿಕ್ಸ್ಗೆ ತರಬೇತಿ ಆರಂಭಿಸಲಿದ್ದಾರೆ. 2002ರಲ್ಲಿ ಕಿಂಗ್ಸ್ಟನ್ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಕಂಚು, 2010ರಲ್ಲಿ ನವದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಈ ಹರಿಯಾಣದ ಅಥ್ಲೀಟ್ ಜಯಿಸಿದ್ದರು.

`ನನಗೆ ತುಂಬಾ ಸಂತೋಷವಾಗುತ್ತಿದೆ. 64 ಮೀಟರ್ ಗಡಿ ದಾಟಬೇಕೆಂಬುದು ನನ್ನ ಗುರಿಯಾಗಿತ್ತು. ಅತ್ಯುತ್ತಮ ಕೋಚ್ ನೆರವಿನಿಂದ ಈ ಗುರಿಯ ಹತ್ತಿರ ಬಂದಿದ್ದೇನೆ~ ಎಂದು ಭಾರತದ ಸ್ಪರ್ಧಿ ಸಂತಸ ಹಂಚಿಕೊಂಡರು.

`ಒಲಿಂಪಿಕ್ಸ್ಗೆ ಅರ್ಹತೆ ಪಡೆಯಬೇಕೆನ್ನುವುದು ನನ್ನ ಕನಸಾಗಿತ್ತು. ಅದು ಈಗ ಈಡೇರಿದೆ. ಲಂಡನ್ನಲ್ಲಿ ಪದಕ ಜಯಿಸಬೇಕು. ಇನ್ನೂ ಉತ್ತಮ ಪ್ರದರ್ಶನ ನೀಡಬೇಕು. ಏಳು ವರ್ಷಗಳ ನಂತರ ನನಗೆ 62ಮೀ. ದೂರ ಡಿಸ್ಕ್ ಎಸೆಯಲು ಸಾಧ್ಯವಾಗಿದೆ~ ಎಂದು ಹೇಳಿದರು.

`ಸೀಮಾ ಸಾಧನೆಯಿಂದ ನನಗೂ ಸಂತಸವಾಗಿದೆ. ಇಲ್ಲಿ ತೋರಿದ ಪ್ರದರ್ಶನವನ್ನು ಒಲಿಂಪಿಕ್ಸ್ನಲ್ಲಿಯೂ ನೀಡಬೇಕು~ ಎಂದು ಕೋಚ್ ಟೋನಿ ತಿಳಿಸಿದ್ದಾರೆ.

2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈ ಅಥ್ಲೀಟ್ ಅಲ್ಲಿ 14ನೇ ಸ್ಥಾನ ಪಡೆದಿದ್ದರು. ಪುರುಷರ ವಿಭಾಗದಲ್ಲಿ ವಿಕಾಸ್ ಗೌಡ ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ. ಜುಲೈ 27ರಿಂದ ಒಲಿಂಪಿಕ್ಸ್ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.