ಶನಿವಾರ, ಮೇ 28, 2022
25 °C

ಓರಾಯನ್ನಲ್ಲಿ ಭೂಕಂಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓರಾಯನ್ನಲ್ಲಿ ಭೂಕಂಪ!

ಈ ವಾರಾಂತ್ಯದಲ್ಲಿ ನಗರದ ಓರಿಯನ್ ಮಾಲ್‌ಗೆ ಭೇಟಿ ನೀಡಿದರೆ ಬೇಸ್ತು ಬೀಳಲಿದ್ದೀರಿ. ಇಲ್ಲಿಯ ನೆಲ ಸೀಳಿ ಆಕೃತಿಗಳು ಮೇಲೇಳಲಿವೆ.ಗಾಬರಿ ಬೇಡ, ಆದರೆ, ಸೋಜಿಗದ 3ಡಿ ಸ್ಟ್ರೀಟ್ ಕಲೆಯನ್ನು ಆಸ್ವಾದಿಸಲು ಭೇಟಿ ನೀಡಿ. ಕೆನ್ ಸ್ಕೂಲ್ ಆಫ್ ಆರ್ಟ್ಸ್‌ನ ಕಾರ್ತಿಕ್ ಬಿ. ಶೆಟ್ಟಿ, ವಿಜಯಕೃಷ್ಣ, ಪ್ರೀತಮ್ ಕ್ರಿಸ್ಟೋಫರ್, ಪೃಥ್ವಿರಾಜ್ ಅರಸ್ ನಾಲ್ವರೂ 3ಡಿ ಸ್ಟ್ರೀಟ್ ಆರ್ಟ್ ಅನ್ನು ಧರೆಗಿಳಿಸಲಿದ್ದಾರೆ.ಕಲಾಕೃತಿಯಲ್ಲೇಕೆ ಭೂಕಂಪ ಅಥವಾ ಭೂ ಕುಸಿತದಂಥ ಭೀಭತ್ಸ ಉದ್ದೇಶ ಏಕೆ ಎಂದು ಹುಬ್ಬೇರಿಸಬಹುದು?ಆದರೆ ಈ ಹುಡುಗರು ಎಚ್ಚರಿಕೆಯ ಗಂಟೆಯನ್ನು ನೀಡುತ್ತಿದ್ದಾರೆ. ಪರಿಸರ ಕಾಳಜಿ ವ್ಯಕ್ತ ಪಡಿಸಲು, ನಮ್ಮ ಭೀಕರ ಭವಿಷ್ಯದ ಪರಿಕಲ್ಪನೆ ಮೂಡಲಿ ಎಂದು ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ.ನೀರು ಉಳಿಸಿ, ಪರಿಸರ ಸಂರಕ್ಷಿಸಿ ಎಂಬುದು ಅವರ ಸಂದೇಶ. ಈ ಕಲೆಯನ್ನು ಬ್ರಿಗೇಡ್ಸ್ ಗ್ರೂಪ್ಸ್, ಸರಸ್ವತಿ ಯು ಶೆಟ್ಟಿ ಉಡುಪಿ, ಲಕ್ಷ್ಮಿ ಸ್ಟೀಲ್ ಇಂಡಸ್ಟ್ರೀಸ್ ಬೆಂಗಳೂರು, ಆರ್ ಟಿ ನಗರದ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಮುಂತಾದವರು ಪ್ರಾಯೋಜಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.