ಶನಿವಾರ, ಜನವರಿ 18, 2020
23 °C

ಔರಾದ್‌ಕರ್ ಸೇರಿದಂತೆ 25 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 25 ಮಂದಿ ಪೊಲೀಸ್ ಅಧಿಕಾರಿಗಳಿಗೆ, ಗೃಹರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆಯ ಐದು ಅಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಏಳು ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಲಭಿಸಿದೆ.ಶೌರ್ಯ ಪದಕ: ಟಿ.ಆರ್.ಪುಟ್ಟಸ್ವಾಮೇಗೌಡ (ಪೊಲೀಸ್ ಇನ್‌ಸ್ಪೆಕ್ಟರ್, ಬೀರೂರು ವೃತ್ತ), ಕೆ.ರಾಜೇಶ್ (ಕಾನ್‌ಸ್ಟೇಬಲ್, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ).ವಿಶಿಷ್ಟ ಸೇವಾ ಪದಕ:
ರಾಘವೇಂದ್ರ ಔರಾದ್‌ಕರ್ (ಗೃಹ ಇಲಾಖೆ ಕಾರ್ಯದರ್ಶಿ), ಅಲೋಕ್‌ಮೋಹನ್ (ಎಡಿಜಿಪಿ), ಎನ್.ಆರ್.ಚಾಂದಿರಾಮ್‌ಸಿಂಗ್ (ವಿಶೇಷ ಕಾರ್ಯಪಡೆ ಎಸ್ಪಿ, ಬೆಂಗಳೂರು), ಪಿ.ಎಸ್.ಗಚ್ಚಿನಕಟ್ಟಿ (ಎಸಿಪಿ, ದೇವನಹಳ್ಳಿ ಉಪ ವಿಭಾಗ, ಬೆಂಗಳೂರು), ಬಿ.ಮರಿಸ್ವಾಮಿ (ಕಮಾಂಡಂಟ್, ಕೋಲಾರ ಜಿಲ್ಲಾ ಗೃಹರಕ್ಷಕ ದಳ), ಎ.ಸುರೇಶ (ಡೆಪ್ಯೂಟಿ ಕಮಾಂಡಂಟ್, ಮಂಡ್ಯ ಜಿಲ್ಲಾ ಗೃಹರಕ್ಷಕ ದಳ), ಐ.ಎಫ್.ಬಡಬಡೆ (ಕಮಾಂಡಂಟ್, ಆರ್.ಎ.ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ, ಬೆಂಗಳೂರು).ಶ್ಲಾಘನೀಯ ಸೇವಾ ಪದಕ: ಬಿ.ಕೆ.ಸಿಂಗ್ (ಡಿಐಜಿ ಮತ್ತು ನಿರ್ದೇಶಕರು, ಬಿಎಂಟಿಸಿ), ಎನ್.ಶಿವಪ್ರಸಾದ್ (ಎಸ್ಪಿ, ರಾಜ್ಯ ಗುಪ್ತಚರ ದಳ), ಎಸ್.ಬಿ.ಬಿಸನಳ್ಳಿ (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ), ಎಂ.ಬಿ.ನಾಯ್ಡು (ಎಸ್ಪಿ, ಸಾರ್ವಜನಿಕ ಸಂಪರ್ಕ ವಿಭಾಗ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ), ಬಿ.ಎಸ್.ಮರ್ತೂರ್‌ಕರ್ (ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೀದರ್).ಮುನಿರತ್ನಂ ನಾಯ್ಡು (ಎಸಿಪಿ, ಜೆ.ಸಿ.ನಗರ ಉಪ ವಿಭಾಗ, ಬೆಂಗಳೂರು), ಎಸ್.ಎನ್.ಗಂಗಾಧರ್ (ಎಸಿಪಿ, ಮಲ್ಲೇಶ್ವರ ಉಪ ವಿಭಾಗ, ಬೆಂಗಳೂರು), ವಿಶ್ವನಾಥ್ (ಡಿವೈಎಸ್ಪಿ, ಅಬಕಾರಿ ಮತ್ತು ಲಾಟರಿ ಜಾರಿ ಘಟಕ, ಮಂಗಳೂರು), ವಿ.ಎಂ.ಜ್ಯೋತಿ (ಡಿವೈಎಸ್ಪಿ, ಬೀದರ್ ಉಪ ವಿಭಾಗ), ಎ.ಕೆ.ಸುರೇಶ್ (ಎಸಿಪಿ, ನರಸಿಂಹರಾಜ ಉಪ ವಿಭಾಗ, ಮೈಸೂರು), ಎಚ್.ವೀರಭದ್ರೇಗೌಡ (ಎಸಿಪಿ, ಬನಶಂಕರಿ ಉಪ ವಿಭಾಗ, ಬೆಂಗಳೂರು), ಬಿ.ಎಸ್.ಅಂಗಡಿ (ಇನ್‌ಸ್ಪೆಕ್ಟರ್, ಜೆ.ಪಿ.ನಗರ, ಬೆಂಗಳೂರು), ವಿಠಲ್‌ದಾಸ್ ಪೈ (ಇನ್‌ಸ್ಪೆಕ್ಟರ್, ಮಂಗಳೂರು ರೈಲು ನಿಲ್ದಾಣ ಠಾಣೆ), ಎನ್.ಎ.ರಮೇಶ್‌ಕುಮಾರ್ (ಇನ್‌ಸ್ಪೆಕ್ಟರ್, ರಾಜ್ಯ ಗುಪ್ತಚರದಳ, ಬೆಂಗಳೂರು), ಅರುಣ್ ಆರ್.ನಾಯಕ್ (ಇನ್‌ಸ್ಪೆಕ್ಟರ್, ಉತ್ತರ ವಲಯ ಐಜಿಪಿ ಕಚೇರಿ, ಬೆಳಗಾವಿ), ಎಂ.ಪಾಷಾ (ಇನ್‌ಸ್ಪೆಕ್ಟರ್, ರಾಯಚೂರು ಪೂರ್ವ ವೃತ್ತ), ಎನ್.ಮಹಾದೇವ್ (ಎಎಸ್‌ಐ, ಕೆ.ಆರ್.ಪುರ ಠಾಣೆ, ಬೆಂಗಳೂರು), ಎಂ.ಎಸ್.ನಟರಾಜ್ (ಎಎಸ್‌ಐ, ಹಾಸನ ನಗರ ಠಾಣೆ), ಸಿ.ಆರ್.ಹೊನ್ನಯ್ಯ (ಮುಖ್ಯ ಕಾನ್‌ಸ್ಟೇಬಲ್, ಮಾಗಡಿ ರಸ್ತೆ ಠಾಣೆ, ಬೆಂಗಳೂರು).ಕೆ.ಎಂ.ಸುರೇಶ (ಕಮಾಂಡಂಟ್, ಹಾಸನ ಜಿಲ್ಲಾ ಗೃಹ ರಕ್ಷಕ ದಳ), ಕೆ.ಸದಾನಂದ (ಹಿರಿಯ ಪ್ಲಟೂನ್ ಕಮಾಂಡರ್, ಉಡುಪಿ ಜಿಲ್ಲಾ ಗೃಹರಕ್ಷಕ ದಳ), ಕೆ.ರವೀಂದ್ರಕುಮಾರ್ (ಸೈನಿಕ್, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು), ಯೂನಸ್ ಆಲಿ ಕೌಸರ್ (ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ದಾವಣಗೆರೆ), ಸದಾಶಿವ ಶೆಟ್ಟಿಗಾರ್ (ಅಗ್ನಿಶಾಮಕ ಠಾಣಾಧಿಕಾರಿ, ಉಡುಪಿ), ಟಿ.ಹರಿ (ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಪುತ್ತೂರು), ಕೆ.ಪುಟ್ಟಸ್ವಾಮಿ (ಪ್ರಮುಖ ಅಗ್ನಿಶಾಮಕ ಅಧಿಕಾರಿ, ಮದ್ದೂರು), ಎನ್.ವಿ.ನಾಗರಾಜು (ಪ್ರಮುಖ ಅಗ್ನಿಶಾಮಕ ಅಧಿಕಾರಿ, ಎಲೆಕ್ಟ್ರಾನಿಕ್‌ಸಿಟಿ ಠಾಣೆ, ಬೆಂಗಳೂರು), ಎನ್.ವರನಾರಾಯಣ (ಅಗ್ನಿನಂದಕ ವಾಹನ ಚಾಲಕ, ಜಯನಗರ ಠಾಣೆ, ಬೆಂಗಳೂರು).

ಪ್ರತಿಕ್ರಿಯಿಸಿ (+)