ಶನಿವಾರ, ಜೂಲೈ 11, 2020
22 °C

ಕಂಗನಾ ಕಣ್ಣಾಮುಚ್ಚಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಗನಾ ಕಣ್ಣಾಮುಚ್ಚಾಲೆ

ರಾಜಕಾರಣಿ ರಾಮ್‌ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಜೊತೆ ‘ಒನ್ ಅಂಡ್ ಒನ್ಲಿ’ ಚಿತ್ರದಲ್ಲಿ ಕಂಗನಾ ರನಾವುತ್ ನಾಯಕಿಯಾಗಿ ನಟಿಸಲು ಒಪ್ಪಿದ್ದು ಬಾಲಿವುಡ್‌ನಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಆಕೆ ಚಿತ್ರೀಕರಣಕ್ಕೆ ಕೈಕೊಡುತ್ತಿರುವ ಸುದ್ದಿ ಬಂದಿದೆ.ಚಿತ್ರಕ್ಕಾಗಿ ಐದು ಕೋಟಿ ರೂಪಾಯಿ ಸಂಭಾವನೆ ಪಡೆದು ಆಕೆ ಈ ರೀತಿ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ಚಿತ್ರತಂಡ ಟೀಕಿಸುತ್ತಿದೆ. ಚಿತ್ರದ ನಿರ್ದೇಶಕ ತನ್ವೀರ್ ಖಾನ್ ಕಂಗನಾ ಬಗ್ಗೆ ಉರಿ ಕೋಪ ಪ್ರದರ್ಶಿಸುತ್ತಿದ್ದಾನೆ. ಆದರೆ, ತನ್ನ ಮೇಲಿನ ಆಪಾದನೆಗಳನ್ನು ನಿರಾಕರಿಸಿರುವ ಆಕೆ, ‘ನಾನು ಸಂಭಾವನೆಗಾಗಿ ಚಿತ್ರ ಒಪ್ಪಿಕೊಂಡಿದ್ದಲ್ಲ. ಚಿತ್ರದ ಸ್ಕ್ರಿಪ್ಟ್ ಇಷ್ಟವಾಗಿತ್ತು. ಇದೀಗ ಸಿನಿಮಾ ಮುಗಿಯುತ್ತಾ ಬಂದಿದೆ. ನನ್ನ ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಆದರೂ ಅಲ್ಲಿ ಹೋಗಿ ಇನ್ನೇನು ಮಾಡಲಿ?’ ಎಂದು ಪ್ರಶ್ನಿಸಿದ್ದಾಳೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.