ಸೋಮವಾರ, ಏಪ್ರಿಲ್ 12, 2021
22 °C

ಕಂಪ್ಯೂಟರ್ ನೆರವು-ಸದ್ಬಳಕೆಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ರಾಜ್ಯ ಹಣಕಾಸು ನಿಧಿಯ ಮೀಸಲು ಪ್ರಮಾಣ ಶೇ 22.75ರ ಅನ್ವಯ 2010-11ನೇ ಸಾಲಿನ ಅರ್ಹ ಫಲಾನುಭವಿಗಳಿಗೆ ಎರಡು ವರ್ಷಗಳ ತರುವಾಯ ನಗರಸಭೆಯ ಸೋಮವಾರ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು.ಅಂದಾಜು ರೂ. 5.25 ಲಕ್ಷ ವೆಚ್ಚದಲ್ಲಿ ಒಟ್ಟಾರೆ 21 ಫಲಾನುಭವಿಗಳಿಗೆ ಈ ಸೌಲಭ್ಯವನ್ನು ವಿತರಿಸಲಾಯಿತು. ನಗರಸಭೆ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಸೇರಿದ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಶ್ರೀದೇವಿ ಕರಂಜಿ ಅವರು, ಶೇ 22.75ರ ಯೋಜನೆಯಡಿ ಕೊಡುತ್ತಿರುವ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.`ಈಗ 2010-11ನೇ ಸಾಲಿನ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗಿದೆ. ನಂತರದ ಎರಡು ವರ್ಷ ಫಲಾನುಭವಿಗಳ ಆಯ್ಕೆಗಾಗಿ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ. ಹೀಗಾಗಿ ಸಾಧ್ಯವಾಗಿಲ್ಲ~ ಎಂದು ಆಯುಕ್ತ ರಾಮದಾಸ್ ಪ್ರತಿಕ್ರಿಯಿಸಿದರು.ಆದಷ್ಟು ಶೀಘ್ರವೇ ನಂತರದ ಎರಡು ವರ್ಷಗಳಿಗೂ ಫಲಾನುಭವಿಗಳನ್ನು ಆಯ್ಕೆ ಮಾಡಲು ಕ್ರಿಯಾಯೋಜನೆ ರೂಪಿಸಲು ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.ಸೌಲಭ್ಯದ ವಿತರಣೆ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಿವಕುಮಾರ ಭಾವಿಕಟ್ಟಿ, ಎಚ್.ಎಸ್.ಮಾರ್ಟಿನ್, ಫರ್ನಾಂಡೀಸ್ ಹಿಪ್ಪಳಗಾಂವ್, ಧನರಾಜ ಹಾಜರಿದ್ದರು. ವಿದ್ಯಾನಗರ, ಮೈಲೂರ, ನಾವದಗೇರಿ, ತಾಳಘಾಟ, ಕುಂಬಾಳವಾಡಾ ಭಾಗಗಳ ವಿದ್ಯಾರ್ಥಿಗಳು ಫಲಾನುಭವಿಗಳಲ್ಲಿ ಸೇರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.